ರಂಗೀಲಾ ರಾಣಿ ಊರ್ಮಿಳಾ ಮಾಜಿ ಗಂಡನ ಎರಡನೇ ಪತ್ನಿ ಯಾರು? ನಿಧಾ ಭಟ್ ಹಿನ್ನೆಲೆ ಇಲ್ಲಿದೆ

ಪ್ರೀತಿ ಎನ್ನುವುದು ಗ್ಯಾಂಬ್ಲಿಂಗ್ ಇದ್ದಂತೆ. ಮದುವೆ ಅದರ ಅತ್ಯುನ್ನತ ಜವಾಬ್ದಾರಿ. ದೀರ್ಘಕಾಲದ ದಾಂಪತ್ಯ ಭಿನ್ನಾಭಿಪ್ರಾಯಗಳ ಭಾರಕ್ಕೆ ಸಿಲುಕಿ ಮುರಿದು ಬಿದ್ದಾಗ, ಅದು ಕೇವಲ ಕಾನೂನಾತ್ಮಕ ಬೇರ್ಪಡುವಿಕೆ ಮಾತ್ರ ಆಗಿರುವುದಿಲ್ಲ. ಬದಲಿಗೆ ಕೆಲ ಒಮ್ಮೆ ಮಾನಸಿಕ ಆಘಾತ ಮತ್ತು ಖಿನ್ನತೆಗೆ ಕೂಡ ಕಾರಣವಾಗಿರುತ್ತೆ. ಡಿವೋರ್ಸ್ ನಂತರ ಹಲವರಿಗೆ ಜೀವನದ ಮೇಲೆಯೇ ಜಿಗುಪ್ಸೆ ಬರುತ್ತೆ. ಮದುವೆಯೆಂಬ ಬಂಧನದ ಮೇಲೆ ಇವರು ನಂಬಿಕೆಯನ್ನೇ ಕಳೆದುಕೊಳ್ಳುತ್ತಾರೆ. ಏಕಾಂಗಿತನದಲ್ಲಿ ನೆಮ್ಮದಿ ಹುಡುಕಿಕೊಂಡು ಕಳೆದು ಹೋಗುತ್ತಾರೆ.

ಹಾಗಂಥ ಎಲ್ಲರೂ ಈ ಸಾಲಿಗೆ ಸೇರುವುದಿಲ್ಲ. ಬದಲಿಗೆ ಅಲ್ಲೊಬ್ಬರು.. ಇಲ್ಲೊಬ್ಬರು.. ಹಳೆಯದನ್ನೆಲ್ಲಾ ಮರೆತು, ಧೈರ್ಯ ಮಾಡಿ ಮತ್ತೊಮ್ಮೆ ಮದುವೆಯಾಗುತ್ತಾರೆ. ಸೈಫ್ ಅಲಿ ಖಾನ್ .. ಕಲ್ಕಿ ಕೊಚ್ಚಿನ್.. ಕರಣ್ ಸಿಂಗ್ ಗ್ರೋವರ್.. ರಾಜ್ ಕುಂದ್ರಾ.. ಹೀಗೆ ಚಿತ್ರರಂಗದಲ್ಲಿ ಇದಕ್ಕೆ ಹಲವಾರು ಉದಾಹರಣೆಗಳಿವೆ. ಈ ಸಾಲಿಗೆ ಈಗ ಮೊಹ್ಸಿನ್ ಅಖ್ತರ್ ಮೀರ್ ಕೂಡ ಸೇರಿಕೊಂಡಿದ್ಧಾರೆ.

Moving On From Urmila Matondkar Everything about Mohsin Akhtar s new wife Nidhaa Bhatt

ಹೌದು, ಮೊಹ್ಸಿನ್ ಅಖ್ತರ್ ಮೀರ್.. ಕಾಶ್ಮೀರದ ಚೆಲುವ. ಚಿತ್ರರಂಗದಲ್ಲಿ ಮಿಂಚಬೇಕೆಂಬ ಆಸೆಯಲ್ಲಿ ಮುಂಬೈಗೆ ಬಂದಿದ್ದರು ಇವರು. ಆದರೆ.. ಮೋಹ್ಸಿನ್ ಅಖ್ತರ್ ಗೆ ಚಿತ್ರರಂಗ ಕೈ ಹಿಡಿಯಲಿಲ್ಲ. ಬದಲಿಗೆ ಕೈ ಹಿಡಿದಿದ್ದು ಬಾಲಿವುಡ್‌ನ ರಂಗೀಲಾ ಊರ್ಮಿಳಾ ಮಾತೋಂಡ್ಕರ್.

ವಯಸ್ಸಿನಲ್ಲಿ ತಮಗಿಂತ ಹತ್ತು ವರ್ಷ ಚಿಕ್ಕವನಾದರು ಕೂಡ ಮೊಹ್ಸಿನ್‌ಗೆ ಊರ್ಮಿಳಾ ಮನ ಸೋತರು. ಇನ್ನು ಇಬ್ಬರ ಧರ್ಮ ಬೇರೆ ಬೇರೆ. ಇನ್ನು ನಿಮಗೆ ಗೊತ್ತು. ಭಾರತದಲ್ಲಿ ಸದ್ಯ ಧರ್ಮಾಧಾರಿತ ವ್ಯವಸ್ಥೆಯಲ್ಲಿ ಜನ್ಮ ಸ್ಥಾನ ಮತ್ತು ಸಮಯದಿಂದ ಹಿಡಿದು ಸಾಯುವ ತನಕ ಜಾತಿ ಮತ್ತು ಧರ್ಮ ಎಲ್ಲವನ್ನೂ ನಿಭಾಯಿಸುತ್ತೆ. ಕೋಮುದ್ವೇಷದ ಖಾಯಿಲೆ ಬೇರೆ ಎಲ್ಲ ದೇಶಕ್ಕಿಂತ ಭಾರತವನ್ನು ಹೈರಾಣು ಮಾಡಿದೆ.

ಆದರೂ ಕೂಡ ಪ್ರೀತಿ ಮಾಡಿದರೆ ಜಗಕೆ ಹೆದರಬಾರದು ಎಂಬಂತೆ ಮೊಹ್ಸಿನ್ ಜೊತೆ ಮದುವೆಯೂ ಆದರು. 2016ರ ಫೆಬ್ರವರಿ 4ರಂದು ಕೇವಲ ಕೆಲವೇ ಕೆಲ ತಮ್ಮ ಅತ್ಯಾಪ್ತರ ಸಮ್ಮುಖದಲ್ಲಿ ಹೊಸ ಬದುಕಿಗೆ ಮುನ್ನುಡಿ ಬರೆದರು.

ಆದರೆ, ಹೀಗೆ ಮನ ಮೆಚ್ಚಿದ ಹುಡುಗನನ್ನು ಮದುವೆಯಾದ ಊರ್ಮಿಳಾಗೆ ಸಂಸಾರದ ಸುಖ ಸಿಕ್ಕಿದ್ದು ಕೇವಲ 8 ವರ್ಷ ಮಾತ್ರ. 2024ರಲ್ಲಿ ಮೊಹ್ಸಿನ್ ಅವರಿಂದ ಊರ್ಮಿಳಾ ದೂರ ಆದರು. ಈಗ ವಿಚ್ಚೇದನ ಪಡೆದ ಒಂದೂವರೆ ಎರಡು ವರ್ಷದ ನಂತರ, ಮೊಹ್ಸಿನ್ ಸದ್ದಿಲ್ಲದೇ ಎರಡನೇ ಮದುವೆಯಾಗಿದ್ದಾರೆ. ತಮ್ಮ ಪತ್ನಿಯನ್ನು ಎಲ್ಲರಿಗೆ ಪರಿಚಯ ಕೂಡ ಮಾಡಿಸಿದ್ದಾರೆ.

Moving On From Urmila Matondkar Everything about Mohsin Akhtar s new wife Nidhaa Bhatt

ಆದರೆ.. ಮೊಹ್ಸಿನ್ ಅಖ್ತರ್ ಮೀರ್ ತಮ್ಮ ಮದುವೆಯ ಫೋಟೊಗಳನ್ನು ಹಂಚಿಕೊಂಡಿದ್ದೇ ತಡ, ಹಲವರು ಯಾರು ಈ ನಿಧಾ ಭಟ್ ಎಂಬ ಪ್ರಶ್ನೆಗೆ ಗೂಗಲ್‌ನಲ್ಲಿ ಉತ್ತರ ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಶ್ನೆಗೆ ನಿಖರವಾದ ಉತ್ತರ ಸದ್ಯಕ್ಕೆ ಮೊಹ್ಸಿನ್ ಅಖ್ತರ್ ಮೀರ್ ಅವರನ್ನು ಹೊರತು ಪಡಿಸಿದರೆ ಬೇರೆ ಯಾರಿಗೂ ಗೊತ್ತಿಲ್ಲವಾದರೂ ನಿಧಾ ಕುರಿತ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಯಾರು ಈ ನಿಧಾ ಭಟ್..?

ಚಿತ್ರರಂಗಕ್ಕೂ ಮತ್ತು ನಿಧಾ ಭಟ್‌ಗೆ ಯಾವುದೇ ಸಂಬಂಧ ಇಲ್ಲ. ಮಾಧ್ಯಮಗಳ ವರದಿಯ ಪ್ರಕಾರ ಶ್ರೀನಗರದ ಮೂಲದವರು ನಿಧಾ.ಆಗಲೇ ಹೇಳಿದಂತೆ ಮೊಹ್ಸಿನ್ ಬೇರು ಕೂಡ ಇರುವುದು ಕಾಶ್ಮೀರದಲ್ಲೇ. ಈ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ಹಿನ್ನೆಲೆ ಇವರ ಪ್ರೇಮಕ್ಕೆ ಅಡಿಪಾಯ ಹಾಕಿದ್ದರು ಹಾಕಿರಬಹುದು.

ಇನ್‌ಸ್ಟಾ ಫಾಲೋವರ್ಸ್ ಎಷ್ಟು..?

ಚಿತ್ರರಂಗದಿಂದ ದೂರ ಇರುವ ನಿಧಾ ಸೋಶಿಯಲ್ ಮೀಡಿಯಾದಲ್ಲಿ ಕೂಡ ಅಷ್ಟೊಂದು ಸಕ್ರಿಯರಾಗಿಲ್ಲ. ತಮ್ಮ ವೈಯಕ್ತಿಕ ಬದುಕನ್ನು ತುಂಬಾನೇ ಗೌಪ್ಯವಾಗಿ ಇಡುವ ಗುಣ ಇವರದ್ದು. ಇದಕ್ಕೆ ಕೈಗನ್ನಡಿ ಎಂಬಂತೆ ನಿಧಾ ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಪ್ರೈವೇಟ್ ಇದೆ. ಬೇರೆಯವರು ನಿಧಾ ಅವರ ಖಾಸಗಿ ಬದುಕಿನ ಚಿತ್ರಣವನ್ನು ಹೊಕ್ಕಿ ನೋಡುವುದು ಅಸಾಧ್ಯ. ಇನ್ನು ಮಾತೆತ್ತಿದರೆ ಫಾಲೋವರ್ಸ್ ಕುರಿತು ಮಾತನಾಡುವ ಕಾಲ ಇದು. ಈ ಕಾಲದಲ್ಲಿ ಇವರಿಗೆ ಕೇವಲ 1,138 ಜನ ಮಾತ್ರ ಹಿಂಬಾಲಕರಿದ್ದಾರೆ.

ಅಂತರರಾಷ್ಟ್ರೀಯ ಸಂಪರ್ಕ

ತಮ್ಮ ಇನ್‌ಸ್ಟಾಗ್ರಾಮ್‌ನ ಬಯೋದಲ್ಲಿ ನಿಧಾ ಭಟ್ "ಅಲ್ಹಮ್ದುಲಿಲ್ಲಾಹ್ ಖೈರ್" ಎಂದು ಬರೆದುಕೊಂಡಿದ್ಧಾರೆ. 🇶🇦🇷🇺🇦🇪🇸🇦 ಅಂದರೆ ಖತಾರ್ (QA) ರಷ್ಯಾ (RU) ಯುಎಇ (AE) ಮತ್ತು ಸೌದಿ ಅರೇಬಿಯಾ (SA) ಹೀಗೆ ನಾಲ್ಕು ದೇಶದ ಹೆಸರನ್ನು ಕೂಡ ಉಲ್ಲೇಖ ಮಾಡಿದ್ಧಾರೆ. ಇದರಿಂದ ಇವರ ವಾಸ ಸ್ಥಳ ವಿದೇಶದಲ್ಲಿರಬಹುದು, ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುವ ಹಿನ್ನೆಲೆ ಇವರದ್ದಾಗಿರಬಹುದು ಎನ್ನುವುದು ಸದ್ಯ ಹಲವರ ಊಹೆ.

ಮೊಹ್ಸಿನ್ ಬರೆದುಕೊಂಡ ಸಾಲು

ಇನ್ನು ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಊರ್ಮಿಳಾ ಅವರ ಮಾಜಿ ಗಂಡ ಮೊಹ್ಸಿನ್, ''ಶುದ್ಧವಾದ ಮನಸ್ಸು, ಪ್ರಾಮಾಣಿಕ ಪ್ರೀತಿ, ಹಾಗೂ ಹೃದಯದಲ್ಲಿ ತಾಳ್ಮೆ ಮತ್ತು ಕೃತಜ್ಞತೆ ಇದ್ದರೆ ಸಾಕು. ನಮ್ಮ ಆತ್ಮವನ್ನು ಕಪಟವಿಲ್ಲದೆ ಇಟ್ಟುಕೊಂಡು, ಹಳೆಯ ನೋವುಗಳಿಂದ ಹೊರಬರುತ್ತಾ ಸಾಗಬೇಕು. ಯಾಕೆಂದರೆ ಆ ಭಗವಂತ ಬರೆದ ಕಥೆ ನಮಗಿಂತ ಯಾವಾಗಲೂ ಶ್ರೇಷ್ಠವಾಗಿರುತ್ತದೆ. ನನ್ನ ಪ್ರೀತಿಯ ಪತ್ನಿ ನಿಧಾ, ದೇವರು ಸರಿಯಾದ ಸಮಯದಲ್ಲಿ ನಿನ್ನಂತಹ ನಿಷ್ಕಲ್ಮಶ ಮನಸ್ಸಿನವಳನ್ನು ನನಗೆ ಉಡುಗೊರೆಯಾಗಿ ಕೊಟ್ಟು ಆಶೀರ್ವದಿಸಿದ್ದಾನೆ. ನೀನು ನನ್ನ ಬದುಕಿಗೆ ಹೊಸ ಬೆಳಕು ತಂದಿದ್ದೀಯಾ'' ಎಂದು ಬರೆದುಕೊಂಡಿದ್ಧಾರೆ. ನಿಧಾಗೆ ಧನ್ಯವಾದ ಅರ್ಪಿಸಿದ್ದಾರೆ.

ಒಟ್ನಲ್ಲಿ ಸದ್ಯ ಮೊಹ್ಸಿನ್ ಅಖ್ತರ್ ಮೀರ್ ಮತ್ತು ನಿಧಾ ಭಟ್ ಅವರ ಮದುವೆಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹಲವರು ಮೊಹ್ಸಿನ್ ಗೆ ಶುಭಾಶಯ ಕೋರುತ್ತಿದ್ಧಾರೆ. ಇನ್ನು ಕೆಲವರು ಮೊಹ್ಸಿನ್ ತಮ್ಮ ಬದುಕಿನಲ್ಲಿ ಮುಂದುವರೆದಂತೆ ನೀವು ಕೂಡ ಮೂವ್ ಆನ್ ಆಗಿ ಎರಡನೇ ಮದುವೆಯಾಗಿ ಎಂಬ ಸಲಹೆಯನ್ನು ಊರ್ಮಿಳಾಗೆ ನೀಡುತ್ತಿದ್ಧಾರೆ. ರಂಗೀಲಾ ಚೆಲುವೆ ಈ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

English summary
Two years after his public divorce from Urmila Matondkar, Mohsin Akhtar marries Nidhaa Bhatt in a stunning ceremony. Meet the woman who won his heart.
Read more about: marriage urmila matondkar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X