'ಐರಾವತ'ನ ಬೆಡಗಿ ಊರ್ವಶಿ ರೌಟೇಲಾ ಬರ್ತ್‌ಡೇಗೆ ಖರ್ಚಾಗಿದ್ದು 93 ಲಕ್ಷನಾ? ಅಂಥದ್ದೇನಿತ್ತು?

ನಟಿ ಊವರ್ಶಿ ರೌಟೇಲಾ ಇತ್ತೀಚೆಗೆ ಹುಟ್ಡುಹಬ್ಬ ಆಚರಿಸಿಕೊಂಡಿದ್ದರು. ಕೇಕ್ ಕಟ್ ಮಾಡಿ ಸಿಕ್ಕಾಪಟ್ಟೆ ಗ್ರ್ಯಾಂಡ್ ಆಗಿ 'ಐರಾವತ' ಸಿನಿಮಾ ಬೆಡಗಿ ರಂಗೇರಿಸಿದ್ದಾರೆ. ಅಚ್ಚರಿ ಅಂದರೆ ಈ ಬರ್ತ್‌ಡೇಟ್‌ ಸೆಲೆಬ್ರೇಷನ್‌ಗೆ ಬರೋಬ್ಬರಿ 93 ಲಕ್ಷ ಖರ್ಚಾಗಿದೆಯಂತೆ. ಈ ಸುದ್ದಿ ಕೇಳಿ ಕೆಲವರು ಶಾಕ್ ಆಗಿದ್ದಾರೆ. ಅರೇ, ಬರೀ ಬರ್ತ್‌ಡೇ ಸೆಲೆಬ್ರೇಷನ್‌ಗೆ 93 ಲಕ್ಷನಾ? ಎಂದು ಹುಬ್ಬೇರಿಸಿದ್ದಾರೆ.

ಪ್ಯಾರಿಸ್‌ನಲ್ಲಿ 29ನೇ ವರ್ಷದ ಹುಟ್ಟುಹಬ್ಬವನ್ನು ಬಾಲಿವುಡ್ ಬೆಡಗಿ ಆಚರಿಸಿಕೊಂಡಿದ್ದಾರೆ. ಐಫೆಲ್ ಟವರ್ ಎದುರು ಕಾಣಿಸಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಶ್ರೀಮಂತೆ ಆಗಿರುವ ಊರ್ವಶಿ ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ಕೋಟ್ಯಾಂತರ ಬೆಲೆಯ ಕಾಸ್ಟ್ಯೂಮ್‌ಗಳಲ್ಲಿ ರ್ಯಾಂಪ್ ಏರಿ ಹೆಜ್ಜೆ ಹಾಕಿ ಸುದ್ದಿ ಆಗುತ್ತಿರುತ್ತಾರೆ. ಇದೀಗ ಗ್ರ್ಯಾಂಡ್ ಆಗಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿಕೊಂಡು ಸುದ್ದಿಯಲ್ಲಿದ್ದಾರೆ. ಅಷ್ಟಕ್ಕೂ 93 ಲಕ್ಷ ಖರ್ಚಾಗುವಂತದ್ದು ಅಲ್ಲೇನಿತ್ತು ಎನ್ನುವ ಅನುಮಾನ ಮೂಡುವುದು ಸಹಜ.

Mr Airavata movie Actress Urvashi Rautela spends Rs 93 lakh on her lavish birthday Party

ಚಿನ್ನ ಹಾಗೂ ವಜ್ರ ಅಳವಡಿಸಿದ್ದ ಗುಲಾಬಿಗಳು, 24-ಕ್ಯಾರೆಟ್ ಚಿನ್ನ ಹಾಗೂ ವಜ್ರದ ಕಪ್‌ಕೇಕ್‌ಗಳು ಇದ್ದವು. ಇನ್ನು ನೀಲಿ ಬಣ್ಣದ ಶಾರ್ಟ್ ಫ್ರಾಕ್‌ನಲ್ಲಿ ಊರ್ವಶಿ ಮಿಂಚಿದ್ದಾರೆ. ಹೀಲಿಯಂ ಬಲೂನ್‌ ಹಾಗೂ ರಿಬ್ಬನ್‌ಗಳನ್ನು ಬಳಸಿ ಬ್ಯಾಕ್‌ಗ್ರೌಂಡ್‌ ಡೆಕೋರೇಟ್ ಮಾಡಲಾಗಿತ್ತು. ಪಿಂಕ್ ಕಲರ್ ಥೀಮ್‌ನಲ್ಲಿ ಬರ್ತ್‌ಡೇ ಸೆಲೆಬ್ರೇಷನ್ ಹಮ್ಮಿಕೊಳ್ಳಲಾಗಿತ್ತು. ಆದರೆ ಇಷ್ಟೆಲ್ಲಾ ಸಿಂಗಾರಕ್ಕೆ 93 ಲಕ್ಷ ಖರ್ಚಾಗಿದೆ ಎನ್ನಲಾಗ್ತಿದೆ.

ಅಭಿಮಾನಿಗಳು ಊರ್ವಶಿ ರೌಟೇಲಾ ಅದ್ಧೂರಿ ಹುಟ್ಟುಹಬ್ಬ ಆಚರಣೆ ನೋಡಿ ಮೆಚ್ಚಿಕೊಂಡಿದ್ದಾರೆ. ಲೈಕ್ಸ್, ಕಾಮೆಂಟ್ಸ್ ಮೂಲ ಖುಷಿ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಇದು ಅತಿಯಾಯಿತು, ಸುಮ್ನೆ ಶೋ ಆಫ್ ಅಂತೆಲ್ಲಾ ಟೀಕಿಸುತ್ತಿದ್ದಾರೆ. 'ಸಿಂಗ್ ಸಾಬ್ ದಿ ಗ್ರೇಟ್' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ ನಟಿ ಊರ್ವಶಿ ಕನ್ನಡದ 'ಐರಾವತ' ಚಿತ್ರದಲ್ಲಿ ನಟಿಸಿದ್ದರು. ಎ. ಪಿ ಅರ್ಜುನ್ ನಿರ್ದೇಶನದ ಚಿತ್ರದಲ್ಲಿ ದರ್ಶನ್‌ಗೆ ನಾಯಕಿ ಆಗಿದ್ದರು.

Mr Airavata movie Actress Urvashi Rautela spends Rs 93 lakh on her lavish birthday Party

ಬಿಂದಾಸ್ ಬೆಡಗಿ ಹಾಟ್ ಹಾಟ್ ಫೋಟೊಶೂಟ್‌ಗಳಿಂದ ಸದಾ ಸುದ್ದಿಯಲ್ಲಿ ಇರ್ತಾರೆ. ಬಾಲಿವುಡ್, ಸೌತ್ ಸಿನಿಮಾಗಳಲ್ಲಿ ಕಾಣಿಸಿಕೊಂಡರೂ ದೊಡ್ಡ ಬ್ರೇಕ್ ಮಾತ್ರ ಸಿಗಲಿಲ್ಲ. ಇತ್ತೀಚೆಗೆ ಹೆಚ್ಚು ಐಟಂ ಸಾಂಗ್‌ಗಳಲ್ಲಿ ಕುಣಿಯಲು ಆರಂಭಿಸಿದ್ದಾರೆ. ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ' ಚಿತ್ರದ ಸ್ಪೆಷಲ್ ಸಾಂಗ್‌ಗೂ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದರು. ಇನ್ನು ಕ್ರಿಕೆಟಿಗ ರಿಷಬ್ ಪಂತ್ ಜೊತೆಗೂ ಕಿರಿಕ್ ಮಾಡಿಕೊಂಡು ಸುದ್ದಿ ಆಗಿದ್ದರು.

ಕಳೆದ ವರ್ಷ ದುಬೈನಲ್ಲಿ ಅರಬ್ ಫ್ಯಾಷನ್ ವೀಕ್ ನಡೆದಿದ್ದು, ಫ್ಯಾಷನ್ ಶೋನಲ್ಲಿ ಊರ್ವಶಿ ಭಾಗವಹಿಸಿದ್ದರು. ಬರೋಬ್ಬರಿ 40 ಕೋಟಿ ಬೆಲೆಬಾಳುವ ಚಿನ್ನ ಹಾಗೂ ವಜ್ರದಿಂದ ತಯಾರಿಸಿದ ವಿಶೇಷ ಗೌನ್ ಧರಿಸಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದರು. ಪ್ರಸಿದ್ಧ ಫ್ಯಾಷನ್ ಡಿಸೈನರ್ ಫುರ್ನೊ ಒನ್ ಅಮಾಟೊ ಈ ಉಡುಗೆಯನ್ನು ಡಿಸೈನ್ ಮಾಡಿದ್ದರು. ಇತ್ತೀಚೆಗೆ ಕನ್ನಡ ನಟ ರಿಷಬ್ ಶೆಟ್ಟಿ ಜೊತೆ ಫೋಟೊ ಕ್ಲಿಕ್ಕಿಸಿಕೊಂಡು ಊರ್ವಶಿ ಖುಷಿಪಟ್ಟಿದ್ದರು.

More from Filmibeat

English summary
Mr Airavata movie Actress Urvashi Rautela spends Rs 93 lakh on her lavish birthday Party. around 100 diamond studded roses along with 24-carat gold cupcakes were seen at the Birthay Bash. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X