"ಆ ನಟಿ ಗಂಡಸಿನ ತರ ಇದ್ದಾಳೆ" ಎಂದಿದ್ದ ಮೃಣಾಲ್; ಕೊನೆಗೂ ಕ್ಷಮೆಯಾಚನೆ
ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು ಎನ್ನುವ ಮಾತಿದೆ. ಸಾರ್ವಜನಿಕ ಜೀವನದಲ್ಲಿರುವ ತಾರೆಯರು ಅಳೆದು ತೂಗಿ ಮಾತನಾಡಬೇಕು. ಇಲ್ಲದೇ ಇದ್ದರೆ ಸಂಕಷ್ಟ ತಪ್ಪಿದಲ್ಲ. ಸೋಶಿಯಲ್ ಮೀಡಿಯಾ ಜಮಾನದಲ್ಲಿ ಪ್ರತಿಯೊಂದು ನಡೆ, ಮಾತು ಸೆರೆಯಾಗುತ್ತಿರುತ್ತದೆ. ಏನೋ ಮಾತನಾಡಿ ತಪ್ಪಿಸಿಕೊಳ್ಳೋಕೆ ಸಾಧ್ಯವಿಲ್ಲ.
ಮರಾಠಿ ನಟಿ ಮೃಣಾಲ್ ಠಾಕೂರ್ ಹೀಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೂಡ ಗುರ್ತಿಸಿಕೊಂಡಿದ್ದಾರೆ. 'ಸೀತಾರಾಮಂ' ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಚೆಲುವೆ ಬಳಿಕ ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ಆರಂಭಿಸಿದರು. ಬಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ಕರೆದು ಅವಕಾಶ ಕೊಡುತ್ತಿದ್ದಾರೆ. ಮೃಣಾಲ್ ಹಾಟ್ ಹಾಟ್ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದಿಯುತ್ತಾರೆ.

ಬಹಳ ಹಿಂದೆ ಮೃಣಾಲ್ ಠಾಕೂರ್ ನೀಡಿದ್ದ ಹೇಳಿಕೆವೊಂದು ಇತ್ತೀಚೆಗೆ ಚರ್ಚೆ ಹುಟ್ಟಾಕ್ಕಿದೆ. ಬಾಲಿವುಡ್ ನಟಿ ಬಿಪಾಶಾ ಬಸು ಬಾಡಿ ಶೇಮಿಂಗ್ ಮಾಡಿದ್ದರು. ಆಗ ಮಾತನಾಡಿದ್ದ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಬಿಪಾಶಾ ಕೂಡ ಆಕ್ರೋಶ ಹೊರ ಹಾಕಿದ್ದರು. ಕೊನೆಗೂ ಎಚ್ಚೆತ್ತುಕೊಂಡ ನಟಿ ಕ್ಷಮೆ ಕೇಳಿದ್ದಾರೆ.
ಸಹನಟ ಅರ್ಜಿತ್ ತನೇಜಾ ಜೊತೆ ಫಿಟ್ನೆಸ್ ಬಗ್ಗೆ ಮೃಣಾಲ್ ಮಾತನಾಡಿದ್ದ ವೀಡಿಯೋ ಅದು. "ಹುರಿಗಟ್ಟಿದ್ದ ಸ್ನಾಯುಗಳನ್ನು ಹೊಂದಿರುವ ಪುರುಷರಂತೆ ಕಾಣುವ ಹುಡುಗಿಯನ್ನು ಮದುವೆಯಾಗಲು ನೀವು ಬಯಸುತ್ತೀದ್ದೀಯಾ? ಹೋಗಿ ಬಿಪಾಶಾಳನ್ನು ಮದುವೆಯಾಗು" ಎಂದು ಮೃಣಾಲ್ ಹೇಳಿದ್ದಾರೆ. ಮಾತು ಮುಂದುವರೆಸಿ "ಇಲ್ಲಿ ಕೇಳು, ನಾನು ಬಿಪಾಶಾಗಿಂತ ಉತ್ತಮ" ಎಂದು ಮೃಣಾಲ್ ಹೇಳಿದ್ದರು.
ಹಳೇ ವೀಡಿಯೋ ದಿಢೀರನೆ ವೈರಲ್ ಆಗಿ ಬಿಪಾಶಾ ಅಭಿಮಾನಿಗಳು ಮೃಣಾಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರ ಬಿಪಾಶಾ ಗಮನಕ್ಕೂ ಬಂದಿದೆ. ಪರೋಕ್ಷವಾಗಿ ಈ ಬಗ್ಗೆ ಒಂದು ಪೋಸ್ಟ್ ಮಾಡಿದ್ದರು. "ಬಲಿಷ್ಠ ಮಹಿಳೆಯರು ಯಾವಾಗಲೂ ಒಬ್ಬರಿಗೊಬ್ಬರು ಕಷ್ಟಪಟ್ಟು ಕೆಲಸ ಮಾಡ್ತಾರೆ. ವಾಸ್ತವವಾಗಿ, ಎಲ್ಲಾ ಮಹಿಳೆಯರು ತುಂಬಾ ಬಲಶಾಲಿ ಮತ್ತು ಬಲಶಾಲಿಯಾಗಿರಬೇಕು. ಆಗ ಮಾತ್ರ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರುತ್ತಾರೆ. ಹುಡುಗಿಯರು ಬಲಶಾಲಿಯಾಗಿ ಕಾಣಬಾರದು ಎಂಬ ಹಳೆಯ ಕಲ್ಪನೆಗಳಿಂದ ಹೊರಬನ್ನಿ" ಎಂದು ಪರೋಕ್ಷವಾಗಿ ಮೃಣಾಲ್‌ಗೆ ಕೌಂಟರ್ ಕೊಟ್ಟಿದ್ದರು.

ಕೊನೆಗೂ ನಟಿ ಮೃಣಾಲ್ ಠಾಕೂರ್‌ಗೆ ತಮ್ಮ ತಪ್ಪಿನ ಅರಿವಾಗಿದೆ. ಕ್ಷಮೆ ಕೋರಿ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. "19 ವರ್ಷದ ಟೀನೇಜ್ ಹುಡುಗಿಯಾಗಿದ್ದ ನಾನು ಮೂರ್ಖತನದ ಮಾತುಗಳನ್ನಾಡಿದ್ದೆ. ನಾನು ತಮಾಷೆಯಾಗಿ ಹೇಳಿದ್ದು ಇಷ್ಟು ನೋವುಂಟು ಮಾಡುತ್ತದೆ ಎಂದು ಗೊತ್ತಿರಲಿಲ್ಲ. ಅದಕ್ಕಾಗಿ ನನಗೆ ತುಂಬಾ ವಿಷಾದವಿದೆ. ಕ್ಷಮಿಸಿ. ನಾನು ಯಾರನ್ನೂ ದೈಹಿಕವಾಗಿ ಅವಮಾನಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಸಂದರ್ಶನದಲ್ಲಿ ನಾನು ತಮಾಷೆಯಾಗಿ ಹೇಳಿದ್ದೆ ಅಷ್ಟೆ. ಅದು ಈ ಮಟ್ಟಿಗೆ ಹೋಗುತ್ತೆ ಎಂದುಕೊಂಡಿರಲಿಲ್ಲ. ನಾನು ಅದನ್ನು ಹೇಳದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಕಾಲಕ್ರಮೇಶಣ, ಸೌಂದರ್ಯ ಎಲ್ಲಾ ರೂಪಗಳಲ್ಲಿ ಬರುತ್ತದೆ ಎಂದು ಅರ್ಥವಾಯಿತು. ಅದು ಬಹಳ ಮುಖ್ಯ" ಎಂದು ಬರೆದುಕೊಂಡಿದ್ದಾರೆ.
ಮಹಾರಾಷ್ಟ್ರದ ಧುಲೆಯಲ್ಲಿ ಹುಟ್ಟಿ ಬೆಳೆದ ನಟ ಮೃಣಾಲ್ ಠಾಕೂರ್ ಆರಂಭದಲ್ಲಿ ಕಿರುತೆರೆ ನಟಿಯಾಗಿ ಗುರ್ತಿಸಿಕೊಂಡಿದ್ದರು. ಬಳಿಕ ನಿಧಾನವಾಗಿ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು. ಮರಾಠಿ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. ಸದ್ಯ ನಾಲ್ಕೈದು ಸಿನಿಮಾಗಳು ಆಕೆಯ ಕೈಯಲ್ಲಿವೆ. ಅಲ್ಲು ಅರ್ಜುನ್ ಹಾಗೂ ಅಟ್ಲಿ ಜೋಡಿಯ ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ.


Click it and Unblock the Notifications











