"ನಾನು ಈ ಬಣ್ಣದಲೋಕಕ್ಕೆ ಲಾಯಕ್ಕಿಲ್ಲ ಎಂದುಕೊಂಡಿದ್ದೆ"; ಮೃಣಾಲ್ ಠಾಕೂರ್ ಅಚ್ಚರಿಯ ಹೇಳಿಕೆ

ಬಣ್ಣದ ಲೋಕ ಅಂದರೆ ಹಾಗೆ. ದೂರದಿಂದ ನೋಡುವವರಿಗೆ ಇದು ಬರೀ ಫಳಫಳ ಹೊಳೆಯುವ ಜಾಗ. ಇಲ್ಲಿನ ನಟ-ನಟಿಯರು ಅದೆಷ್ಟು ಅದೃಷ್ಟವಂತರು ಅಂದುಕೊಳ್ಳದವರಿಲ್ಲ. ಅವರ ಸ್ಟೈಲ್, ಅವರ ಖದರ್, ಅವರ ಐಷಾರಾಮಿ ಜೀವನ ಶೈಲಿ ಎಲ್ಲವೂ ಸಾಮಾನ್ಯ ಜನರಿಗೆ ಒಂದು ಕನಸಿನ ಲೋಕದಂತೆ ಕಾಣುತ್ತದೆ. ಆದರೆ ಈ ಮಿಂಚಿನ ಲೋಕದ ಒಳಗಿನ ಕತ್ತಲೆ ಯಾರಿಗೂ ಅಷ್ಟಾಗಿ ಕಾಣಿಸುವುದೇ ಇಲ್ಲ.

ಪರದೆಯ ಮೇಲೆ ನಗುವ ಪ್ರತಿಯೊಂದು ಮುಖದ ಹಿಂದೆ ಒಂದು ಹೋರಾಟ ಇರುತ್ತದೆ. ಎಷ್ಟೋ ಬಾರಿ ಈ ನಟಿಯರು ತಮ್ಮ ಅಸ್ತಿತ್ವಕ್ಕಾಗಿ ಹವಣಿಸುತ್ತಿರುತ್ತಾರೆ. ಸಮಾಜ ಹಾಕಿಕೊಟ್ಟ ಚೌಕಟ್ಟಿನಲ್ಲಿ ತಮ್ಮನ್ನು ತಾವು ಪ್ರೂವ್ ಮಾಡಿಕೊಳ್ಳಲು ಹರಸಾಹಸ ಪಡುತ್ತಾರೆ. ಬಾಹ್ಯ ಸೌಂದರ್ಯಕ್ಕೆ ಹೆಚ್ಚು ಬೆಲೆ ಕೊಡುವ ಈ ಇಂಡಸ್ಟ್ರಿಯಲ್ಲಿ, ಪ್ರತಿಯೊಬ್ಬ ಕಲಾವಿದನೂ ತನ್ನದೇ ಆದ ಕೀಳರಿಮೆಯ ಜೊತೆ ಯುದ್ಧ ಮಾಡುತ್ತಿರುತ್ತಾನೆ.

Mrunal Thakur Reveals Battle With Beauty Standards I Didn t Think I Was Beautiful

ಅಭಿಮಾನಿಗಳು ಯಾರನ್ನು ದೇವತೆ ಎಂದು ಆರಾಧಿಸುತ್ತಾರೋ, ಅದೇ ವ್ಯಕ್ತಿಗೆ ತನ್ನ ಮೇಲೆ ತನಗೇ ನಂಬಿಕೆ ಇಲ್ಲದ ದಿನಗಳಿರುತ್ತವೆ. ಇತ್ತೀಚೆಗೆ ನಟಿ ಮೃಣಾಲ್ ಠಾಕೂರ್ ಅಂತಹದ್ದೇ ಒಂದು ಶಾಕಿಂಗ್ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ತಾನು ಎದುರಿಸಿದ ಆ ಮಾನಸಿಕ ತೊಳಲಾಟ ಏನು? ಎಂದು ಹೇಳಿದ್ದಾರೆ.

ಮೃಣಾಲ್ ಅಚ್ಚರಿಯ ಹೇಳಿಕೆ

'ಸೀತಾರಾಮಂ' ಚಿತ್ರದ ಮೂಲಕ ಸಿನಿಪ್ರೇಕ್ಷಕರ ಮನ ಗೆದ್ದ ಸುಂದರಿ ಮೃಣಾಲ್ ಠಾಕೂರ್. ಇಂದು ಸಿನಿಮಾ ರಂಗದ ಲಕ್ಕಿ ಚಾರ್ಮ್. ಆದರೆ ಮೃಣಾಲ್ ಅವರ ಪ್ರಕಾರ ಅವರು 2025ರವರೆಗೂ ತಮ್ಮ ಸೌಂದರ್ಯದ ಬಗ್ಗೆ ಅತಿಯಾದ ಕೀಳರಿಮೆ ಹೊಂದಿದ್ದರಂತೆ. ಇದು ಕೇಳಲು ಅಚ್ಚರಿ ಎನಿಸಿದರೂ ಕೂಡ ಸಿನಿಮಾ ಇಂಡಸ್ಟ್ರಿಯ ಕಹಿ ವಾಸ್ತವ.

Mrunal Thakur Reveals Battle With Beauty Standards I Didn t Think I Was Beautiful

ತಮ್ಮ ಹೊಸ ಚಿತ್ರ 'ದೋ ದೀವಾನೆ ಶೆಹರ್ ಮೇ' ಪ್ರಚಾರದ ವೇಳೆ ಮೃಣಾಲ್ ಈ ಕಹಿ ನೆನಪನ್ನು ಹಂಚಿಕೊಂಡಿದ್ದಾರೆ. ಚಿತ್ರದ ಟ್ರೇಲರ್‌ನಲ್ಲಿ ಅವರು "ನಾನು ಸುಂದರಿ ಎಂದು ನನಗನ್ನಿಸುವುದಿಲ್ಲ" ಎಂಬ ಸಂಭಾಷಣೆ ಹೇಳುತ್ತಾರೆ. ಈ ಸಾಲುಗಳು ಅವರ ನಿಜ ಜೀವನಕ್ಕೆ ಅಕ್ಷರಶಃ ಹತ್ತಿರವಾಗಿದ್ದವಂತೆ. ಇದೇ ಕಾರಣಕ್ಕೆ ಅವರು ಈ ಸಿನಿಮಾವನ್ನು ಒಪ್ಪಿಕೊಂಡಿದ್ದಾರಂತೆ.

ಸೌಂದರ್ಯದ ಮಾನದಂಡಗಳು

ಸಿನಿಮಾ ರಂಗದಲ್ಲಿ ನಟಿಯರು ಅಂದರೆ ಹೀಗೆ ಇರಬೇಕು ಎಂಬ ಕೆಲವು ಅಲಿಖಿತ ನಿಯಮಗಳಿವೆ. ಈ ನಿಯಮಗಳನ್ನು ಪಾಲಿಸಲು ಹೋಗಿ ಮೃಣಾಲ್ ಸಾಕಷ್ಟು ನೋವು ಅನುಭವಿಸಿದ್ದಾರೆ. "2025ರ ವರೆಗೂ ನಾನು ಹೇಗೆ ಕಾಣುತ್ತೇನೆ ಎಂಬ ಬಗ್ಗೆ ನನಗೆ ವಿಶ್ವಾಸವೇ ಇರಲಿಲ್ಲ. ನಾನು ಈ ಲೋಕಕ್ಕೆ ಸರಿ ಹೊಂದುವುದಿಲ್ಲ, ನಾನು ಮಿಸ್ ಫಿಟ್ ಅನಿಸುತ್ತಿತ್ತು" ಎಂದು ಮೃಣಾಲ್ ಹೇಳಿದ್ದಾರೆ.

ವದಂತಿಗಳಿಗೆ ಮೃಣಾಲ್ ಖಡಕ್ ಉತ್ತರ

ಕಳೆದ ಕೆಲವು ದಿನಗಳಿಂದ ಮೃಣಾಲ್ ಠಾಕೂರ್ ಮತ್ತು ಕಾಲಿವುಡ್ ಸ್ಟಾರ್ ಧನುಷ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿತ್ತು. ಅಷ್ಟೇ ಅಲ್ಲ 2026ರ ಫೆಬ್ರವರಿ 14ರಂದು ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಗಾಳಿಸುದ್ದಿ ಲೋಕದಾದ್ಯಂತ ಹರಡಿತ್ತು. ಆದರೆ ಈ ಸುದ್ದಿಗೆ ಮೃಣಾಲ್ ಈಗ ಎಂಡ್ ಕಾರ್ಡ್ ಹಾಕಿದ್ದಾರೆ.

ಮದುವೆಯ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಮೃಣಾಲ್ "ಇದೆಲ್ಲಾ ಏಪ್ರಿಲ್ ಫೂಲ್ ಜೋಕ್ ಇದ್ದಂತೆ" ಎಂದು ತಮಾಷೆ ಮಾಡಿದ್ದಾರೆ. "ನಾನು ಧನುಷ್ ಅವರನ್ನು ಒಬ್ಬ ಸಹೋದರನಂತೆ ಕಾಣುತ್ತೇನೆ. ನಮ್ಮಿಬ್ಬರ ಮಧ್ಯೆ ಅಂತಹ ಯಾವುದೇ ಸಂಬಂಧವಿಲ್ಲ" ಎಂದು ಖಡಕ್ ಆಗಿ ಹೇಳಿದ್ದಾರೆ. ಸದ್ಯಕ್ಕೆ ತಾನು ಸಿಂಗಲ್ ಆಗಿದ್ದು, ಕೇವಲ ಸಿನಿಮಾಗಳ ಮೇಲೆ ಗಮನ ಹರಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಆತ್ಮವಿಶ್ವಾಸವೇ ಅಸಲಿ ಸೌಂದರ್ಯ...

ಮೃಣಾಲ್ ಠಾಕೂರ್ ಈ ಮಾತುಗಳು ಇಂದಿನ ಯುವ ಪೀಳಿಗೆಗೆ ದೊಡ್ಡ ಪಾಠ. ಬಾಹ್ಯ ರೂಪಕ್ಕಿಂತ ನಮ್ಮ ಆಂತರಿಕ ಧೈರ್ಯ ಮುಖ್ಯ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಕೀಳರಿಮೆಯಿಂದ ಹೊರಬಂದು ಇಂದು ಅವರು ಗ್ಲಾಮರ್ ಲೋಕದ ರಾಣಿಯಾಗಿ ಮೆರೆಯುತ್ತಿದ್ದಾರೆ. ಮೃಣಾಲ್ ಅವರ ಈ ಸುದೀರ್ಘ ಪಯಣ ಮತ್ತು ಬದಲಾದ ಆಲೋಚನೆ ನಿಜಕ್ಕೂ ಮೆಚ್ಚುವಂತದ್ದು.

More from Filmibeat

Read more about: mrunal thakur dhanush
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X