ಮದುವೆಗೂ ಮುನ್ನವೇ ತಾಯಾಗಲು ಬಯಸಿದ 'ಸೀತಾ ರಾಮನ್'​​ ನಟಿ

ಹಿಂದಿ ಧಾರಾವಾಹಿ ಹಾಗೂ ಮರಾಠಿ ಚಿತ್ರಗಳ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ ಮೃಣಾಲ್​ ಠಾಕೂರ್​ ಇತ್ತೀಚಿಗೆ ತೆರೆ ಕಂಡ 'ಸೀತಾ ರಾಮನ್'​ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ದುಲ್ಕರ್​ ಸಲ್ಮಾನ್​ ನಾಯಕ ನಟನಾಗಿ ನಟಿಸಿರುವ 'ಸೀತಾ ರಾಮನ್​' ಸಿನಿಮಾ, ಚಿತ್ರಮಂದಿರ ಹಾಗೂ ಓಟಿಟಿ ಎರಡರಲ್ಲೂ ಯಶಸ್ಸು ಕಂಡಿದೆ.

'ಸೀತಾ ರಾಮನ್'​ ಚಿತ್ರದಲ್ಲಿ ಪ್ರಿನ್ಸ್​ಸ್​ ನೂರ್​ ಜಹಾನ್​ ಹಾಗೂ ಸೀತಾ ಪಾತ್ರಗಳನ್ನು ನಿರ್ವಹಿಸಿರುವ ಮೃಣಾಲ್​ ಠಾಕೂರ್ ನಟನೆಗೆ ಪ್ರೇಕ್ಷಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆಕೆಯ ನಟನೆಗೆ ನೂರಕ್ಕೆ ನೂರು ಅಂಕ ಕೊಟ್ಟಿದ್ದಾರೆ. ಚಿತ್ರದಲ್ಲಿ ಆಕೆಯ ವೇಷ ಭೂಷಣ, ನೋಟ, ಮಾತು ಎಲ್ಲವೂ ಪ್ರೇಕ್ಷಕರಿಗೆ ಹತ್ತಿರವಾಗಿದ್ದು, ಚಿತ್ರದಲ್ಲಿ ಮೃಣಾಲ್​ ಠಾಕೂರ್ ​ಮನೋಜ್ಞವಾಗಿ ನಟಿಸಿದ್ದಾರೆ.

'ಸೀತಾ ರಾಮನ್'​ ಚಿತ್ರದ ಯಸ್ಸಿನ ಬಳಿಕ ಮೃಣಾಲ್​ ಠಾಕೂರ್ ಕೂಡ ಬೇಡಿಕೆಯ ನಟಿಯಾಗಿದ್ದು, ಅನೇಕ ನಿರ್ಮಾಪಕರು ತಮ್ಮ ಚಿತ್ರಕ್ಕೆ ನಾಯಕಿಯಾಗುವಂತೆ ಮೃಣಾಲ್ ​ ಠಾಕೂರ್ ಅವರ ಬಳಿ ಪ್ರಸ್ತಾಪ ​ ಮಾಡಿದ್ದಾರೆ. ಸದ್ಯ ಮೃಣಾಲ್​ ಠಾಕೂರ್​ 'ಎನ್​ಟಿಆರ್​ 30' ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ. ಈ ನಡುವೆಯೇ ನಟಿ ಮೃಣಾಲ್​ ಠಾಕೂರ್​ ವಿಚಾರವಾಗಿ ಕುತೂಹಲಕಾರಿಯಾದ ಸಂಗತಿಯೊಂದು ಹರಿದಾಡುತ್ತಿದೆ.

 ತಾಯಿಯ ಸಲಹೆಗೆ ನಟಿಯೇ ಶಾಕ್​

ತಾಯಿಯ ಸಲಹೆಗೆ ನಟಿಯೇ ಶಾಕ್​

ದಕ್ಷಿಣ ಭಾರತದ ಚಿತ್ರಗಳಲ್ಲಿ ಬ್ಯೂಸಿಯಾಗಿರುವ ಮೃಣಾಲ್​ ಠಾಕೂರ್ ಸಂದರ್ಶನವೊಂದರಲ್ಲಿ ಅಚ್ಚರಿಯ ಹೇಳಿಕೆ ಕೊಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 30 ವರ್ಷದ ಈ ನಟಿ ತಾಯಿ ಆಗಲು ಬಯಸಿದ್ದಾರಂತೆ. ಈ ವಿಚಾರವನ್ನು ಆಕೆ ತನ್ನ ತಾಯಿ ಮುಂದೆ ಕೂಡ ವ್ಯಕ್ತಪಡಿಸಿದ್ದು, ಅವರ ಈ ಬಗ್ಗೆ ನಟಿಯ ತಾಯಿ ಹೇಳಿಕೆ ಸ್ವತ: ನಟಿಗೆ ಆಶ್ಚರ್ಯ ತಂದಿದೆ ಎಂದು ನಟಿ ಸಂದರ್ಶನಲ್ಲಿ ತಿಳಿಸಿದ್ದಾರೆ. ನಟಿಯ ತಾಯಿ ಮದುವೆಗೂ ಮುನ್ನವೇ ಮಗಳಿಗೆ ತಾಯಾಗಲು ಒಪ್ಪಿಗೆ ನೀಡಿದ್ದು, ಆಕೆಗೆ ಸಿಂಗಲ್​ ಮದರ್​ ಆಗಲು ಸಪೋರ್ಟ್ ಮಾಡಿದ್ದಾರೆ ಎಂದು ಬ್ಯೂಸಿಯಾಗಿರುವ ಮೃಣಾಲ್​ ಠಾಕೂರ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

 ಪ್ರೀತಿಯಲ್ಲಿ ಬೀಳಲು ಇಷ್ಟವಿಲ್ಲ ಎಂದ ಮೃಣಾಲ್​ ಠಾಕೂರ್

ಪ್ರೀತಿಯಲ್ಲಿ ಬೀಳಲು ಇಷ್ಟವಿಲ್ಲ ಎಂದ ಮೃಣಾಲ್​ ಠಾಕೂರ್

'ಸೀತಾ ರಾಮನ್'​ ಚಿತ್ರದಲ್ಲಿ ಮೃಣಾಲ್​ ಠಾಕೂರ್​ ಅವರನ್ನು ನೋಡಿ ಇಷ್ಟಪಡದವರಿಲ್ಲ. ಆಕೆಯ ಕಣ್ಣ ನೋಟಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇಂತಹ ಸುಂದರಿ ತಮ್ಮ ನಿಜ ಜೀವನಕ್ಕಕೆ ಸಂಗಾತಿ ಹೇಗಿರಬೇಕೆಂದು ಮನಬಿಚ್ಚಿ ಮಾತನಾಡಿದ್ದಾರೆ. ನಾನು ಚಿತ್ರರಂಗದಲ್ಲಿರುವ ನಟಿ ಹೀಗಾಗಿ ನನ್ನ ಜೀವನ ಸಂಗಾತಿ ನನ್ನ ವೃತ್ತಿ ಬದುಕಿಗೆ ಬೆಂಬಲ ನೀಡಬೇಕು. ನಾನು ಬಂದ ಹಾದಿ ಬಗ್ಗೆ ಹಾಗೂ ನನ್ನ ಮುಂದಿನ ಆಲೋಚನೆಗಳ ಬಗ್ಗೆ ಆತ ತಿಳಿದಿರಬೇಕು. ನಮ್ಮ ಸುತ್ತಮುತ್ತ ಅನೇಕ ಅಭದ್ರತೆಗಳಿವೆ ಹೀಗಾಗಿ ಆತನ ಆಗಮನದಿಂದ ನನ್ನ ಜೀವನ ಸುರಕ್ಷಿತ ಎನಿಸಬೇಕು. ನನಗೆ ಪ್ರೀತಿಯಲ್ಲಿ ಬೀಳಲು ಇಷ್ಟವಿಲ್ಲ. ಪ್ರೀತಿಯಲ್ಲಿ ಗೆಲ್ಲಬೇಕು ಎಂದಿದ್ದಾರೆ.

 ಬಾಲಿವುಡ್​ನಲ್ಲಿ ಸಿಂಗಲ್​ ಮದರ್​

ಬಾಲಿವುಡ್​ನಲ್ಲಿ ಸಿಂಗಲ್​ ಮದರ್​

ಮಕ್ಕಳು ತಂದೆ ತಾಯಿ ಇಬ್ಬರ ಆಶ್ರಯದಲ್ಲಿ ಬೆಳೆಯಬೇಕು. ಆದರೆ ಹಲವು ಕಾರಣಗಳಿಂದ ಸಿಂಗಲ್​ ಮದರ್​ ಎನ್ನುವ ವಿಚಾರ ಈಗ ಟ್ರೆಂಡ್​ ಆಗುತ್ತಿದೆ. ಅದರಲ್ಲೂ ಬಾಲಿವುಡ್​ನಲ್ಲಿ ಅನೇಕ ತಾರೆಯರು ತಮ್ಮ ಪತಿಯಿಂದ ವಿಚ್ಛೇದನ ಪಡೆದು ಅಥವಾ ಮದುವೆಗೆ ಮುನ್ನವೇ ಮಕ್ಕಳನ್ನು ದತ್ತು ಪಡೆದು ಸಿಂಗಲ್​ ಮದರ್​ಗಳಾಗಿದ್ದಾರೆ. ತಮ್ಮ ವೃತ್ತಿ ಜೀವನದ ಜೊತೆಗೆ ಮಕ್ಕಳ ಪಾಲನೆ ಪೋಷಣೆ, ಶಿಕ್ಷಣದ ಜೊತೆಗೆ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ತಾಯಿ ಒಬ್ಬೊಳೆ ನಿರ್ವಹಿಸುವ ಸಿಂಗಲ್​ ಮದರ್​. ಬಾಲಿವುಡ್​ನ ಅನೇಕ ತಾರೆಯರು ಸಿಂಗಲ್​ ಮದರ್​ಗಳಾಗಿ ಯಶಸ್ವಿಯಾಗಿದ್ದಾರೆ.

 ದತ್ತು ಪಡೆದು ಸಿಂಗಲ್​ ಮದರ್​ ಆದ ಮಾಜಿ ವಿಶ್ವ ಸುಂದರಿ

ದತ್ತು ಪಡೆದು ಸಿಂಗಲ್​ ಮದರ್​ ಆದ ಮಾಜಿ ವಿಶ್ವ ಸುಂದರಿ

ಅನೇಕ ಬಾಲಿವುಡ್​ ತಾರೆಗಳು ತಮ್ಮ ಪತಿಯಿಂದ ವಿಚ್ಛೇದನ ಪಡೆದು ಸ್ವತಂತ್ರವಾಗಿ ಜೀವನ ನಡೆಸುತ್ತಿದ್ದಾರೆ. ಜೊತೆಗೆ ಸಿಂಗಲ್​ ಮದರ್​ ಆಗಿ ಕೂಡ ಯಶಸ್ವಿಯಾಗಿದ್ದಾರೆ. ನಟ ಸೈಫ್​ ಅಲಿ ಖಾನ್​ ಪತ್ನಿ ಅಮೃತಾ ಸಿಂಗ್​, ಕರಿಷ್ಮಾ ಕಪೂರ್​, ಪೂನಂ ಧಿಲ್ಲೋನ್​, ರವೀನಾ ಟಂಡನ್​ ಸೇರಿದಂತೆ ಅನೇಕರು ಸಿಂಗಲ್​ ಮದರ್​ಗಳಾಗಿದ್ದಾರೆ. ಇನ್ನು ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್​ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆಯುವ ಮೂಲಕ ಸಿಂಗಲ್​ ಮದರ್​ ಆಗಿದ್ದಾರೆ.

More from Filmibeat

English summary
Sita Raman movie actress Mrunal Thakur reveals she wants to have a baby. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X