For Quick Alerts
  ALLOW NOTIFICATIONS  
  For Daily Alerts

  ಜಾಹೀರಾತು ಲೋಕಕ್ಕೆ ಎಂಟ್ರಿ ಕೊಟ್ಟ ಎಂ.ಎಸ್ ಧೋನಿ ಪುತ್ರಿ

  |

  ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಬಳಿಕ ಪತ್ನಿ ಮತ್ತು ಮುದ್ದಾದ ಮಗಳ ಜೊತೆ ಸಮಯ ಕಳೆಯುತ್ತಿದ್ದಾರೆ. ಈ ನಡುವೆ ಧೋನಿ ವ್ಯವಸಾಯದ ಕಡೆ ಮುಖ ಮಾಡಿದ್ದಾರೆ. ಧೋನಿ ತನ್ನ ಜಮೀನಿನಲ್ಲಿ ಬೆಳೆದ ತರಕಾರಿಗಳನ್ನು ದುಬೈಗೆ ಕಳುಹಿಸಲು ತಯಾರಿ ನಡೆಸುತ್ತಿದ್ದಾರೆ.

  ಈ ನಡುವೆ ಧೋನಿ ಮಗಳು ಜೀವಾ ಜಾಹೀರಾತು ಲೋಕಕ್ಕೆ ಕಾಲಿಟ್ಟಿದ್ದಾರೆ. ಈಗಾಗಲೇ ಧೋನಿ ಮತ್ತು ಪತ್ನಿ ಸಾಕ್ಷಿ ಇಬ್ಬರು ಜಾಹೀರಾತು ಕ್ಷೇತ್ರದಲ್ಲಿ ಖ್ಯಾತಿಗಳಿಸಿದ್ದಾರೆ. ಇದೀಗ ಪುತ್ರಿ ಜೀವಾ ಸಹ ಎಂಟ್ರಿ ಕೊಟ್ಟಿದ್ದಾರೆ. ಜೀವಾ ಮುದ್ದಾದ ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತೆ. ಇದೀಗ ಜೀವಾಳನ್ನು ಜಾಹೀರಾತಿನಲ್ಲಿ ನೋಡಿ ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಒದಗಿಬಂದಿದೆ.

  ಹೂಗಳೆಂದರೆ ಇಷ್ಟ ಎಂದ ಗೆಳತಿಗೆ ಹೂ ಕಳಿಸಿದ ಕೆಎಲ್ ರಾಹುಲ್

  ಅಂದಹಾಗೆ ಜೀವಾ ಪ್ರಸಿದ್ಧ ಬಿಸ್ಕೆಟ್ ತಯಾರಿಕಾ ಕಂಪನಿ ಓರಿಯೊಗೆ ರೂಪದರ್ಶಿಯಾಗಿದ್ದಾರೆ. ಈ ವಿಚಾರವನ್ನು ಓರಿಯೋ ಕಂಪನಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೀವಾ ಮತ್ತು ಧೋನಿ ಇಬ್ಬರು ಜಾಹೀರಾತಿನಲ್ಲಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಧೋನಿ ಈಗಾಗಲೇ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಮೊದಲ ಬಾರಿಗೆ ಮಗಳ ಜೊತೆ ಕಾಣಿಸಿಕೊಂಡಿರುವುದು ವಿಶೇಷ.

  ಮಗಳ ಜೊತೆ ಓರಿಯೋ ಬಿಸ್ಕೆಟ್ ತಿನ್ನುತ್ತಾ ಖುಷಿ ಪಡುತ್ತಿರುವ ಫೋಟೋ ವೈರಲ್ ಆಗಿದೆ. ಇಬ್ಬರನ್ನು ಒಟ್ಟಿಗೆ ಜಾಹೀರಾತಿನಲ್ಲಿ ನೋಡಲು ಅಭಿಮಾನಿಗಳ ಸಹ ಕಾತರರಾಗಿದ್ದಾರೆ. ಈ ತಿಂಗಳ ಕೊನೆಯಲ್ಲಿ ಈ ಜಾಹೀರಾತು ಪ್ರಸಾರವಾಗುವ ಸಾಧ್ಯತೆ ಇದೆ.

  ಜಾಹೀರಾತು ಲೋಕದಲ್ಲಿ ಧೋನಿಗೆ ಇರುವ ಬೇಡಿಕೆ ಇನ್ನು ಕಡಿಮೆ ಆಗಿಲ್ಲ. ಜಾಹೀರಾತಿನಲ್ಲಿ ಮಿಂಚುತ್ತಿರುವಾಗಲೇ ಮಗಳನ್ನು ಪರಿಚಯಿಸಿದ್ದಾರೆ ಧೋನಿ. ಇನ್ನೂ ಧೋನಿ ತನ್ನ ಹುಟ್ಟೂರಾದ ರಾಂಚಿಯ ಸೆಂಬೊ ಗ್ರಾಮದಲ್ಲಿರುವ ಸುಮಾರು 43 ಎಕರೆ ತೋಟದ ಮನೆಯಲ್ಲಿ 10 ಎಕೆರೆಯಲ್ಲಿ ಕೃಷಿ ಮಾಡುತ್ತಿದ್ದಾರೆ. ಸ್ಟ್ರಾಬೆರಿ, ಎಲೆಕೋಸು, ಟೊಮ್ಯಾಟೊ, ಬಟಾಣಿ, ಪಪ್ಪಾಯಿ ಸೇರಿದಂತೆ ಅನೇಕ ತರಕಾರಿ ಮತ್ತು ಹಣ್ಣುಗಳನ್ನು ಬೆಳೆದಿದ್ದಾರೆ. .

  English summary
  MS Dhoni Daughter Ziva make her debut in world of Advertising photo viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X