ಬಿ-ಟೌನ್ ಪ್ರವೇಶ ಮಾಡಲಿದ್ದಾರಂತೆ ಕೂಲ್ ಕ್ಯಾಪ್ಟನ್ ಧೋನಿ
Recommended Video
ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸುವ ಸೂಚನೆ ನೀಡಿದ್ದಾರೆ. ವಿಶ್ವಕಪ್ ಮುಗಿದ ಬಳಿಕ ಎರಡು ವಿಶ್ರಾಂತಿ ಪಡೆದುಕೊಂಡಿರುವ ಧೋನಿ, ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದರು.
ಇದೀಗ, ಸೇನೆಯಿಂದ ವಾಪಸ್ ಆಗಿರುವ ಎಂ.ಎಸ್.ಡಿ ಕುಟುಂಬದ ಜೊತೆ ಕಾಲಕಳೆಯುತ್ತಿದ್ದಾರೆ. ಈ ಮಧ್ಯೆ ಬಾಲಿವುಡ್ ಗೆ ಪ್ರವೇಶ ಮಾಡುವ ಬಗ್ಗೆ ಸುಳಿವು ಕೊಟ್ಟಿದ್ದಾರೆ ಎನ್ನಲಾಗಿದೆ.
ಹೌದು, ಚಿತ್ರರಂಗದ ಮೇಲೆ ಆಸಕ್ತಿ ಹೊಂದಿರುವ ಧೋನಿ ಸಿನಿಮಾ ನಿರ್ಮಾಣ ಮಾಡುವ ಆಸೆ ಹೊಂದಿದ್ದಾರೆ. ಅವಕಾಶ ಸಿಕ್ಕ ಕೂಡಲೇ ಚಿತ್ರ ನಿರ್ಮಾಣಕ್ಕೆ ಮುಂದಾಗ್ತಾರಂತೆ.

ಟಿ20 ತಂಡದಿಂದ ಧೋನಿ ಕೈಬಿಟ್ಟಿದ್ದೇಕೆಂದು ಬಾಯ್ಬಿಟ್ಟ ಎಂಎಸ್‌ಕೆ ಪ್ರಸಾದ್
'ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ' ಸಿನಿಮಾ ಬಂದಾಗ ಸಹಜವಾಗಿ ಚಿತ್ರೋಧ್ಯಮದ ಬಗ್ಗೆ ಆಸಕ್ತಿ ಮೂಡಿದೆ. ಆ ಚಿತ್ರದ ವೇಳೆ ಬಹಳ ಹತ್ತಿರದಿಂದ ಇಂಡಸ್ಟ್ರಿ ನೋಡಿದ್ದಾರೆ. ಹಾಗಾಗಿ, ಸಿನಿಮಾ ಮಾಡಬೇಕು ಎಂಬ ಆಸೆ ಹುಟ್ಟಿಕೊಂಡಿದೆ' ಎಂದು ಆಪ್ತರು ತಿಳಿಸಿದ್ದಾರೆ.
ಧೋನಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ಸ್ನೇಹಿತರಿದ್ದಾರೆ. ಧೋನಿ ಸಿನಿಮಾ ನಿರ್ಮಿಸುತ್ತಾರೆ ಅಂದ್ರೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡುವ ಮಂದಿ ಬಿ-ಟೌನ್ ನಲ್ಲಿದ್ದಾರೆ. ಬಹುಶಃ ಕ್ರಿಕೆಟ್ ನಿಂದ ದೂರ ಆದ ಬಳಿಕ ಈ ಬಗ್ಗೆ ಅಧಿಕೃತವಾಗಿ ಘೋಷಿಸಬಹುದು.


Click it and Unblock the Notifications