For Quick Alerts
  ALLOW NOTIFICATIONS  
  For Daily Alerts

  ಧೋನಿಗೆ 33M ಫಾಲೋವರ್ಸ್, ಮಾಹೀ ಫಾಲೋ ಮಾಡೋದು ಒಬ್ಬ ನಟನನ್ನ ಮಾತ್ರ

  |

  ಸೋಶಿಯಲ್ ಮೀಡಿಯಾದಲ್ಲಿ ಯಾರು ಹೆಚ್ಚು ಸಕ್ರಿಯರಾಗಿರ್ತಾರೆ, ಯಾರಿಗೆ ಹೆಚ್ಚು ಫಾಲೋವರ್ಸ್ ಹಾಗೂ ಯಾರು ಯಾರನ್ನ ಫಾಲೋ ಮಾಡ್ತಾರೆ ಎನ್ನುವುದು ಪ್ರತಿಷ್ಠೆ. ಅದರಲ್ಲೂ ಸೆಲೆಬ್ರಿಟಿಗಳ ಫಾಲೋವರ್ಸ್ ವಿಷಯ ಸದಾ ಚರ್ಚೆಯಲ್ಲಿರುತ್ತದೆ.

  33M ಫಾಲೋವರ್ಸ್ ಹೊಂದಿರೋ ಮಾಹಿ ಫಾಲೋ ಮಾಡೋದು ಇವ್ರನ್ನು‌ ಮಾತ್ರ!! | Filmibeat Kannada

  ಫಾಲೋವರ್ಸ್ ವಿಚಾರದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಾಲಿ ನಾಯಕ ಎಂಎಸ್ ಧೋನಿ ವಿಶೇಷ. ಇನ್ಸ್ಟಾಗ್ರಾಂ ಖಾತೆಯಲ್ಲಿ ಧೋನಿಗೆ ಬರೋಬ್ಬರಿ 33 ಮಿಲಿಯನ್ ಹಿಂಬಾಲಕರಿದ್ದಾರೆ.

  ಆದರೆ ಧೋನಿ ಫಾಲೋ ಮಾಡೋದು ಮಾತ್ರ ಕೇವಲ ನಾಲ್ಕು ಜನರನ್ನ. ಅದರಲ್ಲಿ ಒಬ್ಬ ಸಿನಿಮಾ ನಟರು ಎನ್ನುವುದು ಬಹಳ ಇಂಟರೆಸ್ಟಿಂಗ್ ವಿಚಾರ. ಸಿನಿಮಾರಂಗದ ಜೊತೆ ಅದರಲ್ಲೂ ಬಾಲಿವುಡ್ ಇಂಡಸ್ಟ್ರಿಯೊಂದಿಗೆ ಹೆಚ್ಚು ಒಡನಾಟ ಹೊಂದಿರುವ ಧೋನಿ ಕೇವಲ ಒಬ್ಬರನ್ನು ಮಾತ್ರ ಫಾಲೋ ಮಾಡ್ತಿದ್ದಾರೆ ಎನ್ನುವುದು ಈಗ ಸುದ್ದಿಯಾಗಿದೆ. ಮುಂದೆ ಓದಿ...

  1 ಸಾಕ್ಷಿ ಧೋನಿ

  1 ಸಾಕ್ಷಿ ಧೋನಿ

  ಮಹೇಂದ್ರ ಸಿಂಗ್ ಧೋನಿಯ ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡುವ ನಾಲ್ಕು ಜನರಲ್ಲಿ ಮೊದಲನೇಯವರು ತಮ್ಮ ಪತ್ನಿ ಸಾಕ್ಷಿ. ಧೋನಿ ಪತ್ನಿಗೆ 4.3 ಮಿಲಿಯನ್ ಹಿಂಬಾಲಕರಿದ್ದಾರೆ. ಸಾಕ್ಷಿ ಧೋನಿ 981 ಮಂದಿಯನ್ನು ಫಾಲೋ ಮಾಡ್ತಾರೆ.

  ಬಿ-ಟೌನ್ ಪ್ರವೇಶ ಮಾಡಲಿದ್ದಾರಂತೆ ಕೂಲ್ ಕ್ಯಾಪ್ಟನ್ ಧೋನಿಬಿ-ಟೌನ್ ಪ್ರವೇಶ ಮಾಡಲಿದ್ದಾರಂತೆ ಕೂಲ್ ಕ್ಯಾಪ್ಟನ್ ಧೋನಿ

  2 ಧೋನಿ ಪುತ್ರಿ

  2 ಧೋನಿ ಪುತ್ರಿ

  ಧೋನಿ ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡುವ ಎರಡನೇ ಖಾತೆ ತಮ್ಮ ಪುತ್ರಿ ಹೆಸರಿನಲ್ಲಿರುವ ಜಿವಾ ಸಿಂಗ್ ಧೋನಿ. ಜಿವಾ ಇನ್ಸ್ಟಾದಲ್ಲಿ 1.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, 132 ಮಂದಿಯನ್ನು ತಾನು ಫಾಲೋ ಮಾಡ್ತಾರೆ.

  3 ಫಾರ್ಮ್‌ಹೌಸ್‌

  3 ಫಾರ್ಮ್‌ಹೌಸ್‌

  ಧೋನಿ ಫಾಲೋ ಮಾಡುವ ಮೂರನೇ ಖಾತೆ ಈಜಾಫಾರ್ಮ್. ಈ ಖಾತೆಯಲ್ಲಿ ಕೃಷಿ ಬಗ್ಗೆ ಮಾಹಿತಿಗಳು ಸಿಗುತ್ತದೆ. ಇದರಲ್ಲಿ ಧೋನಿ ಅವರ ತೋಟದಲ್ಲಿ ಬೆಳೆಯುವ ಬೆಳೆ-ಕೃಷಿಗೆ ಸಂಬಂಧಿಸಿದ ಫೋಟೋ, ವಿಡಿಯೋಗಳು ಸಿಗುತ್ತದೆ.

  ಅಮಿತಾಬ್ ಬಚ್ಚನ್ ಏನೂ ಮಾಡಿಲ್ಲ ಎಂದವರಿಗೆ ಸಮಾಜ ಸೇವೆಯ ಪಟ್ಟಿ ನೀಡಿದ ನಟಅಮಿತಾಬ್ ಬಚ್ಚನ್ ಏನೂ ಮಾಡಿಲ್ಲ ಎಂದವರಿಗೆ ಸಮಾಜ ಸೇವೆಯ ಪಟ್ಟಿ ನೀಡಿದ ನಟ

  4 ಬಿಗ್ ಬಿ ಅಮಿತಾಭ್

  4 ಬಿಗ್ ಬಿ ಅಮಿತಾಭ್

  ಧೋನಿ ಇನ್ಸ್ಟಾದಲ್ಲಿ ಫಾಲೋ ಮಾಡುವ ನಾಲ್ಕನೇ ಹಾಗೂ ಕೊನೆಯ ವ್ಯಕ್ತಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್. ಬಾಲಿವುಡ್‌ ಜೊತೆ ಹೆಚ್ಚು ಒಡನಾಟ, ಹೆಚ್ಚು ಸ್ನೇಹಿತರಿದ್ದರೂ ಕೇವಲ ಅಮಿತಾಭ್‌ರನ್ನು ಮಾತ್ರ ಧೋನಿ ಫಾಲೋ ಮಾಡ್ತಾರೆ. ಇದು ನಿಜಕ್ಕೂ ವಿಶೇಷ ಸಂಗತಿ.

  English summary
  Team India Ex Captain MS Dhoni follows only four accounts in Instagram. one is Bollywood actor. whos that actor?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X