ಅಥರ್ವನ ಅವತಾರದಲ್ಲಿ ಎಂ.ಎಸ್.ಧೋನಿ: ಇದ್ಯಾಯ ಸಿನಿಮಾ?

ಕ್ರಿಕೆಟಿಗ ಎಂಎಸ್ ಧೋನಿಗೂ ಸಿನಿಮಾ ರಂಗಕ್ಕೂ ಹತ್ತಿರದ ಸಂಬಂಧವೇ ಇದೆ. ಎಂ.ಎಸ್.ಧೋನಿ ಕುರಿತಾಗಿ ಈಗಾಗಲೇ ಸಿನಿಮಾ ಸಹ ಆಗಿದೆ. ಎಂ.ಎಸ್.ಧೋನಿ ಸಹ ಹಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಆದರೆ ಧೋನಿ ಯಾವುದೇ ಸಿನಿಮಾದಲ್ಲಿ ಈವರೆಗೆ ನಟಿಸಿಲ್ಲ.

ಈ ನಡುವೆ ಎಂಎಸ್ ಧೋನಿ ವೀರ ಯೋಧನ ಅವತಾರದಲ್ಲಿರುವ ಪೋಸ್ಟರ್‌ಗಳು, ಮೋಷನ್ ಪೋಸ್ಟರ್‌ಗಳು ಬಿಡುಗಡೆ ಆಗಿದ್ದು, ಎಂಎಸ್ ಧೋನಿ ಸಿನಿಮಾ ನಟನೆ ಆರಂಭಿಸಿದರೆ ಎಂಬ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಸ್ವತಃ ಎಂಎಸ್ ಧೋನಿ 'ಅಥರ್ವ' ಹೆಸರಿನ ತಮ್ಮದೇ ಗ್ರಾಫಿಕ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಇದು ಯಾವುದೇ ಸಿನಿಮಾದ ಮೋಷನ್ ಪೋಸ್ಟರ್ ಅಲ್ಲ ಬದಲಿಗೆ ಗ್ರಾಫಿಕ್ ಕಾದಂಬರಿಯ ಮೋಷನ್ ಪೋಸ್ಟರ್ ಆಗಿದೆ.

MS Dhoni To Be Seen As Atharva In A Graphical Novel

'ಅಥರ್ವ' ಎಂಬುದು ಗ್ರಾಫಿಕ್ ಕಾದಂಬರಿ ಆಗಿದ್ದು, ಕಾದಂಬರಿಯಲ್ಲಿ ಅಥರ್ವನ ಪಾತ್ರಕ್ಕೆ ಎಂ.ಎಸ್.ಧೋನಿಯ ಮುಖ ಬಳಸಲಾಗಿದೆ. ಕಾದಂಬರಿಯನ್ನು ಧೋನಿ ಅವರೇ ಪ್ರೆಸೆಂಟ್ ಮಾಡುತ್ತಿದ್ದಾರೆ.

ಎಂಎಸ್ ಧೋನಿ ಪೌರಾಣಿಕ ಕಾಲದ ವೀರ ಯೋಧನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರಿ ಗಾತ್ರದ ಪ್ರಾಣಿಗಳ ಮೇಲೆ ಯುದ್ಧಕ್ಕೆ ಹೊರಟಿದ್ದಾರೆ. ಒಂದು ಕೈಯಲ್ಲಿ ರಕ್ತ ಮೆತ್ತಿದ ಭಯಾನಕ ಕತ್ತಿ, ಕತ್ತಿನಲ್ಲಿ ಹೆದರಿಕೆ ಹುಟ್ಟಿಸುವಂಥಹಾ ಆಭರಣಗಳು ಹಾಕಿಕೊಂಡು ವೈರಿಗಳ ರುಂಡವನ್ನು ಧೋನಿ ಚಂಡಾಡುತ್ತಿರುವಂತೆ ಗ್ರಾಫಿಕ್ ವಿಡಿಯೋ ಇದೆ.

'ಅಥರ್ವ; ದಿ ಒರಿಜಿನ್' ಕಾದಂಬರಿಯು ಗ್ರಾಫಿಕಲ್ ಕಾದಂಬರಿಯಾಗಿದ್ದು, ಇಲ್ಲಿ ಪಾತ್ರಗಳು, ಕತೆ ಗ್ರಾಫಿಕ್ಸ್ ರೀತಿಯಲ್ಲಿ ಕಾಣಿಸಿಕೊಳ್ಳುತ್ತವೆ. ಹಿನ್ನೆಲೆ ಧ್ವನಿಯೂ ಇರುತ್ತದೆ. ಒಂದು ರೀತಿ ಅನಿಮೇಷನ್ ಸಿನಿಮಾಕ್ಕೆ ಹತ್ತಿರದಲ್ಲಿರುತ್ತದೆ.

MS Dhoni To Be Seen As Atharva In A Graphical Novel

'ಅಥರ್ವ; ದಿ ಒರಿಜಿನ್' ಕಾದರಂಬರಿಯನ್ನು ರಮೇಶ್ ತಮಿಳ್‌ಮಣಿ ರಚಿಸಿದ್ದು, ಕಾದಂಬರಿಯನ್ನು ಎಂವಿಎಂ ಮೋಹನ್ ಈ ಪ್ರಾಜೆಕ್ಟ್‌ನ ಉಸ್ತುವಾರಿ ವಹಿಸಿದ್ದಾರೆ. ವಿರ್ಜು ಸ್ಟುಡಿಯೋಸ್‌ನವರು ಗ್ರಾಫಿಕಲ್ ಕಾದಂಬರಿಯನ್ನು ಡಿಸೈನ್ ಮಾಡಿವೆ. ಈಗ ಬಿಡುಗಡೆ ಆಗಿರುವುದು ಕಾದಂಬರಿಯ ಟೀಸರ್ ಮಾತ್ರ. ಕಾದಂಬರಿ ಮುಂದಿನ ದಿನಗಳಲ್ಲಿ ಬಿಡುಗಡೆ ಆಗಲಿದೆ.

ಎಂಎಸ್ ಧೋನಿ ಬಗ್ಗೆ 'ಎಂಎಸ್ ಧೋನಿ; ದಿ ಅನ್‌ಟೋಲ್ಡ್ ಸ್ಟೋರಿ' ಹೆಸರಿನ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ಸುಶಾಂತ್ ಸಿಂಗ್ ರಜಪೂತ್, ಧೋನಿ ಪಾತ್ರದಲ್ಲಿ ನಟಿಸಿದ್ದರು. ಬಳಿಕ 'ರೋರ್ ಆಫ್‌ ದಿ ಲಯನ್' ಹೆಸರಿನ ಡಾಕ್ಯುಡ್ರಾಮಾದಲ್ಲಿ ಸ್ವತಃ ಎಂಎಸ್ ಧೋನಿ ನಟಿಸಿದ್ದರು. ಈ ಡಾಕ್ಯುಡ್ರಾಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಯಿತು.

More from Filmibeat

English summary
Cricketer MS Dhoni to be seen as Atharva in a graphics Novel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X