For Quick Alerts
  ALLOW NOTIFICATIONS  
  For Daily Alerts

  ಮುಂಬೈ ಪೊಲೀಸರ ಎದುರು ಹೇಳಿಕೆ ದಾಖಲಿಸಿದ ನಟ ರಣ್ವೀರ್ ಸಿಂಗ್

  |

  ಬೆತ್ತಲೆ ಚಿತ್ರ ತೆಗೆಸಿಕೊಂಡು ಸುದ್ದಿಯಾಗಿದ್ದ ರಣ್ವೀರ್ ಸಿಂಗ್ ಅದೇ ಚಿತ್ರದಿಂದಾಗಿ ಸಂಕಷ್ಟವನ್ನೂ ಎದುರಿಸುತ್ತಿದ್ದಾರೆ. ಪೇಪರ್ ಹೆಸರಿನ ಮ್ಯಾಗಜೀನ್‌ಗಾಗಿ ನಗ್ನವಾಗಿ ಫೋಟೊಕ್ಕೆ ಫೋಸ್ ನೀಡಿದ್ದ ರಣ್ವೀರ್ ಸಿಂಗ್ ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

  ರಣ್ವೀರ್‌ರ ಬೆತ್ತಲೆ ಚಿತ್ರಗಳು ಸಖತ್ ವೈರಲ್ ಆಗಿದ್ದವು. ಜೊತೆಗೆ ಹಲವರು ಈ ಚಿತ್ರಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಚಿತ್ರವು ಮಹಿಳೆಯರಿಗೆ ಅಪಮಾನ ಎಸಗುತ್ತಿದೆ ಎಂದು ಎನ್‌ಜಿಓಗೆ ಸಂಬಂಧಿಸಿದ ವಕೀಲೆಯೊಬ್ಬರು ದೂರು ದಾಖಲಿಸಿದ್ದರು.

  ಎಫ್‌ಐಆರ್ ದಾಖಲಿಸಿಕೊಂಡಿದ್ದ ಮುಂಬೈನ ಚೆಂಬೂರ್ ಠಾಣೆ ಪೊಲೀಸರು ಆಗಸ್ಟ್ 12 ರಂದು ರಣ್ವೀರ್ ಸಿಂಗ್‌ಗೆ ಸಮನ್ಸ್ ಜಾರಿ ಮಾಡಿದ್ದರು. ಆದರೆ ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೇಳಿದ್ದ ರಣ್ವೀರ್ ಸಿಂಗ್ ಇಂದು (ಆಗಸ್ಟ್ 29) ರಂದು ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ.

  ಇಂದು ಬೆಳಿಗ್ಗೆ 7 ಗಂಟೆ ವೇಳೆಗೆ ತನಿಖಾಧಿಕಾರಿಯ ಎದುರು ವಿಚಾರಣೆಗೆ ಹಾಜರಾದ ರಣ್ವೀರ್ ಸಿಂಗ್ 9:30 ಸುಮಾರಿಗೆ ಪೊಲೀಸ್ ಠಾಣೆಯಿಂದ ಹೊರಬಂದರು. ಸುಮಾರು ಎರಡುವರೆ ಗಂಟೆಗಳ ಕಾಲ ರಣ್ವೀರ್ ಸಿಂಗ್ ವಿಚಾರಣೆ ನಡೆಸಲಾಯ್ತು ಹಾಗೂ ಹೇಳಿಕೆ ದಾಖಲು ಮಾಡಿಕೊಳ್ಳಲಾಯ್ತು. ಅವಶ್ಯಕತೆ ಬಿದ್ದರೆ ಮತ್ತೆ ರಣ್ವೀರ್ ಸಿಂಗ್ ಅವರನ್ನು ಕರೆಯಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

  ರಣ್ವೀರ್ ಸಿಂಗ್‌ರ ಬೆತ್ತಲೆ ಫೋಟೊಶೂಟ್‌ ವಿರುದ್ಧ ನೀಡಿದ್ದ ಎನ್‌ಜಿಓ, ''ಚಿತ್ರದ ಮೂಲಕ ಮಹಿಳೆಯರ ಗೌರವಕ್ಕೆ ಧಕ್ಕೆ ತರಲಾಗಿದೆ. ಅವರ ವಿರುದ್ಧ ಮಾನಸಿಕ ದೌರ್ಜನ್ಯ ಎಸಗಲಾಗಿದೆ. ಅಶಿಸ್ತು ಮೆರೆಯಲಾಗಿದೆ'' ಎಂದಿದ್ದರು. ಪೊಲೀಸರು ಎಫ್‌ಐಆರ್‌ನಲ್ಲಿ ಸಹ ಸಾರ್ವಜನಿಕ ಅಶಿಸ್ತು, ನೀಲಿ ಚಿತ್ರ ಮಾರಾಟ ಸೇರಿದಂತೆ ಇತರೆ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  Mumbai Chembur Police Record Statement Of Ranveer Singh In Indecent Photo Case

  ಪೇಪರ್ ಹೆಸರಿನ ಮ್ಯಾಗಜಿನ್‌ಗಾಗಿ ಬೆತ್ತಲಾಗಿ ಫೋಸು ನೀಡಿದ್ದರು ರಣ್ವೀರ್ ಸಿಂಗ್. ಬೆತ್ತಲಾಗಿದ್ದರೂ ಸಹ ಅವರ ಖಾಸಗಿ ಅಂಗಗಳು ಕಾಣದಂತೆ ಚಿತ್ರ ತೆಗೆಯಲಾಗಿತ್ತು. ಆ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಸೃಷ್ಟಿಸಿತ್ತು. ನಾನು ಇರೋದೇ ಹೀಗೆ, ಸಾವಿರ ಜನರ ನಡುವೆ ಬೇಕಾದರೂ ಬೆತ್ತಲಾಗಿ ಇರುತ್ತೀನಿ' ಅಂತೆಲ್ಲಾ ಹೇಳಿದ್ದ ರಣ್‌ವೀರ್‌ ಸಿಂಗ್‌, ನಾನು ಹಾಲಿವುಡ್‌ನ ಖ್ಯಾತ ಮಾಡೆಲ್, ನಟ ಬರ್ಟ್ ರೆನಾಲ್ಡ್ಸ್‌ ಅನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಅವರ ಗೌರವಾರ್ಥ ಹೀಗೆ ಬೆತ್ತಲಾಗಿ ಫೋಸು ನೀಡಿದ್ದೆ ಎಂದಿದ್ದರು.

  ಸಿನಿಮಾಗಳ ವಿಷಯಕ್ಕೆ ಬಂದರೆ ರಣ್ವೀರ್ ಸಿಂಗ್ ನಟನೆಯ ಕೊನೆಯ ಸಿನಿಮಾ 'ಜಯೇಶ್‌ ಭಾಯ್ ಜೋರ್ದಾರ್' ಬಾಕ್ಸ್‌ ಆಫೀಸ್‌ನಲ್ಲಿ ಧಾರುಣವಾಗಿ ಸೋಲು ಕಂಡಿದೆ. ಇದೀಗ ಅವರ ನಟನೆಯ 'ಸರ್ಕಸ್' ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಅದರ ಬಳಿಕ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ತೆರೆಗೆ ಬರಲಿದೆ. ತಮಿಳಿನ 'ಅನ್ನಿಯನ್' ಸಿನಿಮಾದ ಹಿಂದಿ ರೀಮೇಕ್‌ನಲ್ಲಿ ಸಹ ರಣ್ವೀರ್ ಸಿಂಗ್ ನಟಿಸುತ್ತಿದ್ದಾರೆ.

  English summary
  Mumbai's Chembur police officers record statement of actor Ranveer Singh in indecent photo case. A NGO complained against Ranveer Singh.
  Monday, August 29, 2022, 21:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X