ರಾಜ್ ಕುಂದ್ರಾ ಬಂಧನ ಕೇಸ್: ಇಡಿ ಎಂಟ್ರಿ, ನಟಿ ಗೆಹನಾಗೆ ಸಮನ್ಸ್

ಉದ್ಯಮಿ, ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾ ಬಂಧನವಾಗಿದ್ದು, ಜುಲೈ 27ರವರೆಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇತ್ತೀಚಿಗಷ್ಟೆ ರಾಜ್ ಕುಂದ್ರಾ ಬಂಗಲೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದೀಗ, ರಾಜ್ ಕುಂದ್ರಾ ಪರವಾಗಿ ಹೇಳಿಕೆ ಕೊಡ್ತಿದ್ದ ನಟಿ ಗೆಹನಾ ವಸಿಸ್ತ್‌ಗೆ ಮುಂಬೈ ಕ್ರೈಂ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ. ಇನ್ನು ಮುಂಬೈ ಪೊಲೀಸರ ಜೊತೆ ಜಾರಿ ನಿರ್ದೇಶನಾಲಯ ಸಹ ಕೈ ಜೋಡಿಸಿದ್ದು, ರಾಜ್ ಕುಂದ್ರಾ ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರತಿ ಪಡೆದುಕೊಂಡಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಮುಂದೆ ಓದಿ...

ಮೂರು ಜನರಿಗೆ ಸಮನ್ಸ್

ಮೂರು ಜನರಿಗೆ ಸಮನ್ಸ್

ರಾಜ್ ಕುಂದ್ರಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ಜನರಿಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅದರಲ್ಲಿ ನಟಿ ಗೆಹನಾ ವಸಿಸ್ತ್‌ ಸಹ ಒಬ್ಬರು. ವರದಿ ಪ್ರಕಾರ, ಮುಂಬೈ ಪೊಲೀಸರ ಎದುರು ಭಾನುವಾರ ವಿಚಾರಣೆ ಎದುರಿಸಲಿದ್ದಾರೆ.

ರಾಜ್ ಕುಂದ್ರಾ ಪರವಾಗಿದ್ದ ಗೆಹನಾ

ರಾಜ್ ಕುಂದ್ರಾ ಪರವಾಗಿದ್ದ ಗೆಹನಾ

ರಾಜ್ ಕುಂದ್ರಾ ಬಂಧನದ ಬಳಿಕ ನಟಿ ಗೆಹನಾ ವಸಿಸ್ತ್, ಕುಂದ್ರಾ ಪರವಾಗಿ ಹೇಳಿಕೆಗಳನ್ನು ಕೊಟ್ಟಿದ್ದರು. "ಬೋಲ್ಡ್ ಮತ್ತು ಎರೋಟಿಕಾ ಸಿನಿಮಾಗಳನ್ನು ಪೋರ್ನ್ ಸಿನಿಮಾಗಳಿಗೆ ಹೋಲಿಸಬೇಡಿ. ರಾಜ್ ಕುಂದ್ರಾ ಕಂಪೆನಿಯಲ್ಲಿ ಏನು ಮಾಡುತ್ತಾರೆ ಎನ್ನುವುದು ನನಗೆ ಗೊತ್ತಿದೆ. ರಾಜ್ ಕುಂದ್ರಾ ನಿರ್ಮಿಸಿದ ಆಪ್ ಗಳಲ್ಲಿ ಮೂರು ಚಿತ್ರಗಳಲ್ಲಿ ನಾನು ನಟಿಸಿದ್ದೇನೆ. ಅವರು ಎಂದಿಗೂ ನನಗೆ ಇದನ್ನೆ ಮಾಡಿ ಎಂದು ಒತ್ತಾಯ ಮಾಡಿಲ್ಲ. ನಾನು ಮಾಡಿದ ಕೆಲಸದ ಪ್ರಕಾರ ನನಗೆ ಸಂಬಳ ನೀಡಲಾಗಿದೆ" ಎಂದು ಹೇಳಿದ್ದರು.

ಗೆಹನಾ ಬಂಧನ ಆಗಿತ್ತು

ಗೆಹನಾ ಬಂಧನ ಆಗಿತ್ತು

ಅಂದ್ಹಾಗೆ, ನಟಿ ಗೆಹನಾ ವಸಿಸ್ತ್ ಅವರನ್ನು ಸಹ ಈ ಹಿಂದೆ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಇದೇ ಕೇಸ್‌ನಲ್ಲಿ ಈಗ ರಾಜ್ ಕುಂದ್ರಾರನ್ನು ಅರೆಸ್ಟ್ ಮಾಡಲಾಗಿದೆ. ಐದು ತಿಂಗಳು ಜೈಲಿನಲ್ಲಿದ್ದರು ಗೆಹನಾ. ಮೊಬೈಲ್, ಲ್ಯಾಪ್‌ಟ್ಯಾಪ್ ಸಹ ಪೋಲಿಸರ ವಶದಲ್ಲಿದೆ.

Recommended Video

ಜೀವನ ಪಯಣ ಮುಗಿಸಿದ ಕನ್ನಡದ ಯಶಸ್ವಿ ನಾಯಕಿ
ಇಡಿ ಎಂಟ್ರಿ, ಮತ್ತಷ್ಟು ಕಂಟಕ

ಇಡಿ ಎಂಟ್ರಿ, ಮತ್ತಷ್ಟು ಕಂಟಕ

ರಾಜ್ ಕುಂದ್ರಾ ಬಂಧನ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಮಧ್ಯಪ್ರವೇಶಿಸಿದೆ ಎಂದು ವರದಿಯಾಗಿದೆ. ಅದಾಗಲೇ ಮುಂಬೈ ಪೊಲೀಸರಿಂದ ಎಫ್ ಐ ಆರ್ ಕಾಪಿ ಪಡೆದುಕೊಂಡಿದೆ. ಬಹುಶಃ ಮನಿಲಾಂಡರಿಂಗ್ ಪ್ರಕರಣ ದಾಖಲಿಸಿ ತನಿಖೆ ಮಾಡುವ ಸಾಧ್ಯತೆ ಇದೆ.

More from Filmibeat

English summary
Raj Kundra Case: Mumbai crime branch has summoned actress Gehana Vasisth for questioning.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X