For Quick Alerts
  ALLOW NOTIFICATIONS  
  For Daily Alerts

  ಅರ್ಜುನ್ ರಾಂಪಾಲ್-ಮೆಹರ್ ವಿಚ್ಛೇದನಕ್ಕೆ ಕೋರ್ಟ್ ಒಪ್ಪಿಗೆ: ಮಕ್ಕಳ ಸುಪರ್ದಿ ತಾಯಿಗೆ

  |

  ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಮತ್ತು ಮೆಹರ್ ಜೆಸಿಯಾ ದಂಪತಿಗೆ ಮುಂಬೈನ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನೀಡಲು ಒಪ್ಪಿಗೆ ಸೂಚಿಸಿದೆ. ಆ ಮೂಲಕ ಅರ್ಜುನ್-ಮೆಹರ್ ಜೋಡಿಯ ಇಪ್ಪತ್ತೊಂದು ವರ್ಷಗಳ ಸುದೀರ್ಘ ದಾಂಪತ್ಯ ಅಧಿಕೃತವಾಗಿ ಅಂತ್ಯಗೊಂಡಿದೆ.

  ವಿಶೇಷ ವಿವಾಹ ಕಾಯ್ದೆ ಅಡಿ, ಅರ್ಜುನ್ ರಾಂಪಾಲ್ ಮತ್ತು ಮೆಹರ್ ಜೆಸಿಯಾಗೆ ನ್ಯಾಯಾಧೀಶರಾದ ಶೈಲಜಾ ಸಾವಂತ್ ವಿಚ್ಛೇದನ ನೀಡಿದ್ದಾರೆ. ಮಕ್ಕಳಾದ ಮಹಿಕಾ ಮತ್ತು ಮೈರಾ ಸುಪರ್ದಿಯನ್ನ ತಾಯಿಗೆ ಕೋರ್ಟ್ ವಹಿಸಿದೆ.

  ಹೃತಿಕ್ ಮಾಜಿ ಪತ್ನಿಯಿಂದಾಗಿ ಅರ್ಜುನ್ ರಾಂಪಾಲ್ ಮನೆಯಲ್ಲಿ ಜೋರು ಗಲಾಟೆ ನಡೆದಿತ್ತು.!ಹೃತಿಕ್ ಮಾಜಿ ಪತ್ನಿಯಿಂದಾಗಿ ಅರ್ಜುನ್ ರಾಂಪಾಲ್ ಮನೆಯಲ್ಲಿ ಜೋರು ಗಲಾಟೆ ನಡೆದಿತ್ತು.!

  1998 ರಲ್ಲಿ ನಟ ಅರ್ಜುನ್ ರಾಂಪಾಲ್-ಮೆಹರ್ ಜೆಸಿಯಾ ವಿವಾಹ ನಡೆದಿತ್ತು. ಈ ದಾಂಪತ್ಯಕ್ಕೆ ಸಾಕ್ಷಿಯಾಗಿ ಇಬ್ಬರು ಹೆಣ್ಣು ಮಕ್ಕಳು ಜನಿಸಿದರು. ಇಪ್ಪತ್ತು ವರ್ಷಗಳ ಕಾಲ ಸಂಸಾರ ನಡೆಸಿದ್ದ ಈ ಜೋಡಿಯ ದಾಂಪತ್ಯದಲ್ಲಿ ವರ್ಷದ ಹಿಂದೆ ಬಿರುಗಾಳಿ ಎದ್ದಿತ್ತು.

  20 ವರ್ಷದ ದಾಂಪತ್ಯಕ್ಕೆ ಎಳ್ಳು ನೀರು ಬಿಟ್ಟ ನಟ ಅರ್ಜುನ್ ರಾಂಪಾಲ್20 ವರ್ಷದ ದಾಂಪತ್ಯಕ್ಕೆ ಎಳ್ಳು ನೀರು ಬಿಟ್ಟ ನಟ ಅರ್ಜುನ್ ರಾಂಪಾಲ್

  ''ನಾವಿಬ್ಬರು ಬೇರೆ ಆಗಿದ್ದೇವೆ. ಪ್ರತ್ಯೇಕವಾಗಿ ವಾಸಿಸುತ್ತೇವೆ'' ಅಂತ ಕಳೆದ ವರ್ಷ ಅರ್ಜುನ್ ರಾಂಪಾಲ್ ಮತ್ತು ಮೆಹರ್ ಘೋಷಿಸಿದ್ದರು. ಇನ್ಮುಂದೆ ಒಟ್ಟಿಗೆ ಬಾಳಲು ಸಾಧ್ಯವಿಲ್ಲ ಎಂದು ನಿರ್ಧರಿಸಿದ ಇವರಿಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದಾರೆ.

  ಮದುವೆಯಾಗದೆ ತಂದೆಯಾದ ಬಾಲಿವುಡ್ ನಟ ಮದುವೆಯಾಗದೆ ತಂದೆಯಾದ ಬಾಲಿವುಡ್ ನಟ

  ಮೆಹರ್ ನಿಂದ ದೂರ ಸರಿದ ಬಳಿಕ ಮಾಡೆಲ್ ಗೆಬ್ರಿಲ್ಲಾ ಡೆಮೆಟ್ರಿಯಾಡೆಸ್ ಜೊತೆಗೆ 46 ವರ್ಷದ ಅರ್ಜುನ್ ರಾಂಪಾಲ್ ರಿಲೇಶನ್ ಶಿಪ್ ನಲ್ಲಿದ್ದಾರೆ. ಮದುವೆ ಆಗದ ಅರ್ಜುನ್ ರಾಂಪಾಲ್ ಮತ್ತು ಗೆಬ್ರಿಲ್ಲಾ ಜೋಡಿಗೆ ಈಗಾಗಲೇ ಗಂಡು ಮಗು ಜನಿಸಿದೆ. ಮಗುವಿಗೆ ಅರಿಕ್ ರಾಂಪಾಲ್ ಎಂದು ನಾಮಕರಣ ಕೂಡ ಮಾಡಲಾಗಿದೆ.

  English summary
  Mumbai Family court has granted divorce to Bollywood Actor Arjun Rampal and Mehr Jessia.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X