For Quick Alerts
  ALLOW NOTIFICATIONS  
  For Daily Alerts

  ಉದ್ಯಮಿಗೆ ಹಣ ವಂಚನೆ: ನಟ ಮತ್ತು ಸಹಚರನ ಬಂಧನ

  |

  ನಟನೊಬ್ಬ ತನ್ನ ಗೆಳೆಯನೊಡನೆ ಸೇರಿ ಉದ್ಯಮಿಯೊಬ್ಬನಿಗೆ ಹಣ ವಂಚನೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

  ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸುವ ಫಿರೋಜ್ ಅಬ್ಬಾಸಿ ಮತ್ತು ಆತನ ಗೆಳೆಯ ಮುಶಿರ್ ಖಾನ್ ಉದ್ಯಮಿಯೊಬ್ಬರಿಗೆ ಖಾಸಗಿ ಸಾಲ ಕೊಡುವುದಾಗಿ ಹೇಳಿ ಮುಂಗಡವಾಗಿ 7.20

  ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾರೆ. ಇವರು ಇನ್ನೂ ಹಲವರಿಗೆ ಇದೇ ರೀತಿ ವಂಚನೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

  ಭದ್ರತಾ ಸಂಸ್ಥೆ ನಡೆಸುತ್ತಿರುವ ಉದ್ಯಮಿ ಕುನಾಲ್ ಸೌರಾಟಿಯಾಗೆ 2016ರಲ್ಲಿ 10 ಕೋಟಿ ಸಾಲ ಬೇಖಾಗಿತ್ತು. ಆಗ ಧಿರೇನ್ ಖಜಾರಿಯಾ ಎಂಬಾತನನ್ನು ಭೇಟಿಯಾಗಿ ಆತ ಹೇಳಿದಂತೆ 18 ಲಕ್ಷ ಹಣ ಮುಂಗಡವಾಗಿ ಕೊಟ್ಟಿದ್ದರು. ಅದರ ಬಳಿಕ ಧಿರೇನ್, ಫಿರೋಜ್ ಅಬ್ಬಾಸಿಯನ್ನು ಭೇಟಿ ಮಾಡಿಸಿದ್ದಾರೆ. ತಾನೊಬ್ಬ ಸೂಪರ್ ಸ್ಟಾರ್ ನಿರ್ದೇಶಕನ ಸಂಬಂಧಿ ಎಂದು ಹೇಳಿಕೊಂಡ ಫಿರೋಜ್ ಅಬ್ಬಾಸಿ ಸಾಲ ನೀಡಲು ಮುಂಗಡವಾಗಿ 10 ಲಕ್ಷ ಬಡ್ಡಿ ಪಾವತಿಸಬೇಕು ಎಂದಿದ್ದಾರೆ.

  ಅಂತೆಯೇ ಕುನಾಲ್ ಸೌರಾಟಿಯಾ 7.2 ಲಕ್ಷ ಹಣವನ್ನು ಫಿರೋಜ್ ಅಬ್ಬಾಸಿ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಫಿರೋಜ್ ಮತ್ತು ಆತನ ಗೆಳೆಯ ಮುಶಿರ್ ಖಾನ್ 75 ಲಕ್ಷ ಹಾಗೂ 25 ಲಕ್ಷ ಹಣದ ಚೆಕ್ ನೀಡಿದ್ದಾರೆ. ಆ ಚೆಕ್ ಅನ್ನು ತಾವು ಹೇಳುವವರೆಗೆ ಬ್ಯಾಂಕ್‌ಗೆ ಡೆಪಾಸಿಟ್ ಮಾಡಬೇಡ ಎಂದು ಸಹ ಹೇಳಿದ್ದಾರೆ. ಬಹಳ ದಿನಗಳ ವರೆಗೆ ಡೆಪಾಸಿಟ್ ಮಾಡಲು ಹೇಳದಾಗ ಅನುಮಾನಗೊಂಡ ಫಿರೋಕ್ ಅಬ್ಬಾಸಿ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಆ ಖಾತೆಯಲ್ಲಿ ಹಣವಿಲ್ಲವೆಂಬುದು ಗೊತ್ತಾಗಿದೆ.

  ಮುಂಬೈನ ಖಾರ್ ಠಾಣೆಯ ಪೊಲೀಸರು ಫಿರೋಜ್ ಅಬ್ಬಾಸಿ ಮತ್ತು ಆತನ ಗೆಳೆಯ ಕಿಂಗ್ ಮುಶಿರ್ ಖಾನ್ ಅನ್ನು ಬಂಧಿಸಿದ್ದು ಇವರುಗಳ ಮೇಲೆ ವಂಚನೆ, ಫೋರ್ಜರಿ, ಪಿತೂರಿ ಆರೋಪಗಳನ್ನು ಹೊರಿಸಿ ಎಫ್‌ಐಆರ್ ದಾಖಲಿಸಿದ್ದಾರೆ. 18 ಲಕ್ಷ ಹಣ ಪಡೆದುಕೊಂಡು ಧಿರೇನ್‌ಗಾಗಿ ಹುಡುಕಾಟ ನಡೆಸುತ್ತಿದ್ದು ಆತ ಕಣ್ಮರೆಯಾಗಿದ್ದಾನೆ. ಇವರು ಈ ಉದ್ಯಮಿಗೆ ಮಾತ್ರವೇ ಅಲ್ಲದೆ ಇನ್ನೂ ಕೆಲವರಿಗೆ ಹಣ ವಂಚನೆ ಮಾಡಿರಬಹುದಾದ ಗುಮಾನಿಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

  English summary
  Mumbai police arrest small time actor and his friend for cheating a businessman rs 7.20 lakh rs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X