ಯೂಟ್ಯೂಬ್​ನಲ್ಲಿ ಸಲ್ಮಾನ್​ ಖಾನ್​ಗೆ ಕೊಲೆ ಬೆದರಿಕೆ ಹಾಕಿದ 25ರ ಯುವಕನ ಬಂಧನ

ಸಲ್ಮಾನ್ ಖಾನ್.. ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ತಮ್ಮ ಚಿತ್ರಕ್ಕಿಂತ ತಾವು ಹಿಂದೆ ಮಾಡಿದ್ದ ಕೆಟ್ಟ ಕೆಲಸಗಳಿಂದನೇ ಇತ್ತೀಚೆಗೆ ಸದ್ದು ಮಾಡ್ತಿರುವ ಸಲ್ಮಾನ್ ಖಾನ್ ಅವರನ್ನ ಕೊಲ್ಲುವುದಾಗಿ ಹೇಳಿದ್ದ ವ್ಯಕ್ತಿಯೊಬ್ಬನನ್ನ ಬಂಧಿಸಲಾಗಿದೆ.

ಆರೋಪಿಯನ್ನು ರಾಜಸ್ಥಾನದ ಬುಂದಿ ಮೂಲದ 25 ವರ್ಷದ ಬನ್ವಾರಿಲಾಲ್ ಲಾತುರ್‌ಲಾಲ್ ಗುಜಾರ್ ಎಂದು ಅಪರಾಧ ವಿಭಾಗದ ಅಧಿಕಾರಿ ತಿಳಿಸಿದ್ದಾರೆ. ಗುರ್ಜರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದು, ಅದರಲ್ಲಿ 'ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್ ಮತ್ತು ಇತರ ಗ್ಯಾಂಗ್ ಸದಸ್ಯರು ನನ್ನೊಂದಿಗಿದ್ದಾರೆ ಮತ್ತು ಸಲ್ಮಾನ್ ಖಾನ್ ಅವರು ಇನ್ನೂ ಕ್ಷಮೆ ಕೇಳದ ಕಾರಣ ನಾನು ಅವರನ್ನು ಕೊಲ್ಲಲಿದ್ದೇನೆ' ಎಂದಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ. ಆರೋಪಿಯು ರಾಜಸ್ಥಾನದ ಹೆದ್ದಾರಿಯೊಂದರಲ್ಲಿ ವಿಡಿಯೋ ಮಾಡಿ ತನ್ನ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದ. ತನಿಖೆಗಾಗಿ ತಂಡವನ್ನು ರಾಜಸ್ಥಾನಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಆತನನ್ನು ಅರೆಸ್ಟ್​ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

mumbai-police-arrest-rajasthan-man-for-video-threatening-to-kill-salman-khan

ಇನ್ನೂ ಕೇಳೊದಕ್ಕೆ ಇದು ವಿಚಿತ್ರವಾದ ಕಥೆಯಂತೆ ಕಾಣುವ ಈ ಸತ್ಯಕಥೆಯಲ್ಲಿ ಈ ಹಿಂದೆ ಸಲ್ಮಾನ್ ಖಾನ್ ಅವರನ್ನ ಕೊಲ್ಲಲು ಹೊಸದಾಗಿ ಸ್ಕೆಚ್ ಹಾಕಿದ್ದ ನಾಲ್ವರನ್ನ ಪೊಲೀಸರು ಬಂಧಿಸಿದ್ದರು. ಮುಂಬೈನ ಪನ್‌ವೇಲ್ ನಲ್ಲಿರುವ ಸಲ್ಮಾನ್ ಖಾನ್ ಅವರ ಫಾರ್ಮ್ ಹೌಸ್ ಬಳಿ, ಸಲ್ಮಾನ್ ಖಾನ್ ಬರುವಿಕೆಗಾಗಿ ನಾಲ್ವರು ಹೊಂಚು ಹಾಕಿ ಕುಳಿತಿದ್ದರು. ಎಕೆ-47 ಗನ್ ಸಮೇತ ಕಾರಿನಲ್ಲಿಯೇ ಕಾಯುತ್ತಿದ್ದ ಬಿಷ್ಣೋಯ್ ಗ್ಯಾಂಗ್‌ನ ನಾಲ್ವರು ಶಾರ್ಪ್‌ ಶೂಟರ್‌ಗಳನ್ನು ಆಗ ಪೊಲೀಸರು ಬಂಧಿಸಿದ್ದರು. ಎಕೆ-47 ರೈಫಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

ಇನ್ನೂ.. ಸಲ್ಮಾನ್ ಖಾನ್ ಅವರನ್ನ ಕೊಲ್ಲಲು M16, AK-47 ಮತ್ತು AK-92 ರೈಫಲ್‌ಗಳನ್ನು ಖರೀದಿಸಲು ಪಾಕಿಸ್ತಾನದಲ್ಲಿರುವ ಡೋಗಾ ಎಂಬ ಶಸ್ತ್ರಾಸ್ತ್ರ ವ್ಯಾಪಾರಿಯೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಸ್ಪೋಟಕ ಮಾಹಿತಿಯನ್ನು ಬಂಧಿತ ಆರೋಪಿ ಅಜಯ್ ಕಶ್ಯಪ್ ಪೊಲೀಸ್ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದರು. ಸಲ್ಮಾನ್ ಖಾನ್ ಅವರನ್ನ ಕೊಲ್ಲುವಲ್ಲಿ ಈ ಬಾರಿ ಯಶಸ್ವಿ ಆದರೆ ಬಂಧಿತ ಆರೋಪಿಗಳಿಗೆ ದೊಡ್ಡ ಮೊತ್ತದ ಹಣ ನೀಡುವುದಾಗಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಕೆನಡಾದ ಗೋಲ್ಡಿ ಬ್ರಾರ್ ಭರವಸೆಯನ್ನ ನೀಡಿದ್ದರು ಎಂಬ ಮಾಹಿತಿ ಕೂಡ ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿತ್ತು.

mumbai-police-arrest-rajasthan-man-for-video-threatening-to-kill-salman-khan


ಲಾರೆನ್ಸ್ ಬಿಷ್ಣೋಯ್ ಮತ್ತು ಸಲ್ಮಾನ್ ಖಾನ್..!

ಕೃಷ್ಣಮೃಗಗಳನ್ನು ಬಿಷ್ಣೋಯ್ ಸಮುದಾಯವು ಪವಿತ್ರವೆಂದು ಪರಿಗಣಿಸುತ್ತದೆ. ಆದರೆ ಸಲ್ಮಾನ್ ಖಾನ್ ಮೇಲೆ ಕೃಷ್ಣ ಮೃಗ ಬೇಟೆಯಾಡಿದ ಆರೋಪ ಇತ್ತು. ಹತ್ತಾರು ಬಾರಿ ಸಲ್ಮಾನ್ ಈ ಪ್ರಕರಣದಲ್ಲಿ ಕೋರ್ಟು-ಕಛೇರಿ ಎಂದು ಅಲೆದಾಡಿದ್ದು ಇದೆ. ಆದರೆ 2016ರಲ್ಲಿ ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಖುಲಾಸೆಯಾಗಿತ್ತು. ಆ ದಿನ ಆ ಕ್ಷಣದಿಂದ ಸಲ್ಮಾನ್ ಖಾನ್ ಬೆನ್ನು ಹತ್ತಿರುವ ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿ ಇದ್ದುಕೊಂಡೆ ಸಲ್ಮಾನ್ ಖಾನ್ ಗೆ ಅನೇಕ ಬಾರಿ ಸ್ಕೆಚ್ ಹಾಕಿದ್ದಾನೆ. ಎರಡು ಮೂರು ಬಾರಿ ಸಲ್ಮಾನ್ ಖಾನ್ ಅವರನ್ನ ಕೊಲ್ಲುವ ಪ್ರಯತ್ನವನ್ನೂ ಮಾಡಿದ್ದಾನೆ.

ಉಳಿದಂತೆ ಉತ್ತರ ಭಾರತದ ಕುಖ್ಯಾತ ದರೋಡೆಕೋರ. ಕೊಲೆ ಮತ್ತು ಸುಲಿಗೆ ಸೇರಿದಂತೆ ಅನೇಕ ಕ್ರಿಮಿನಲ್ ಆರೋಪಗಳನ್ನು ಹೊತ್ತಿರುವ ಲಾರೆನ್ಸ್ ಬಿಷ್ಣೋಯ್, ಖಲಿಸ್ತಾನ್ ಚಳವಳಿ ಮತ್ತು ಇತರ ರೀತಿಯ ದೇಶ ವಿರೋಧಿ ಚಟುವಟಿಕೆಗಳಿಗೆ ಕೂಡ ಹೆಸರುವಾಸಿ. ಇನ್ನೂ ಗಾಯಕ ಸಿದ್ದು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿಯೂ ಈ ವ್ಯಕ್ತಿಯ ಕೈವಾಡ ಇದೆ ಎಂದು ಹಿಂದೆ ಸುದ್ದಿಯಾಗಿತ್ತು

More from Filmibeat

English summary
The suspect, arrested for threatening to kill actor Salman Khan in a YouTube video, also purported ties to the Lawrence Bishnoi and Goldy Brar gangs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X