ಬಾಲಿವುಡ್ ನಟ ಸೈಫ್ ಅಲಿಖಾನ್‌ಗೆ ಚೂರಿ ಇರಿದಿದ್ದ ಆರೋಪಿ ಅರೆಸ್ಟ್
ನಿನ್ನೆ ರಾತ್ರಿ ನಟ ಸೈಫ್ ಅಲಿಖಾನ್ ಮೇಲೆ ಹಲ್ಲೆ ನಡೆದಿತ್ತು. ನಟನ ನಿವಾಸಕ್ಕೆ ನುಗ್ಗಿದ್ದ ದುಷ್ಕರ್ಮಿಯೊಬ್ಬ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಬಳಿಕ ಸೈಫ್ ಅಲಿಖಾನ್ ದೇಹದ ಭಾಗಗಳಿಗೆ ಚಾಕುವಿನಿಂದ ಇರಿದು ಓಡಿ ಹೋಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ನಟ ಆಸ್ಪತ್ರೆಯಲ್ಲಿದೆ ಚಿಕಿತ್ಸೆ ಪಡೆಯುತ್ತಿದ್ದಾರೆ. 30 ಗಂಟೆಗಳ ಬಳಿಕ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಸೈಫ್ ಅಲಿಖಾನ್ ನಿವಾಸಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ಅಪಾರ್ಟ್‌ಮೆಂಟ್ ಒಳಗೆ, ಹೊರಗೆ ಇದ್ದ ಸಿಸಿಟಿವಿ ಪರಿಶೀಲನೆ ನಡೆಸಿದ್ದರು. ಸಂಜೆ ವೇಳೆಗೆ ದುಷ್ಕರ್ಮಿಯೊಬ್ಬ ಫೈರ್ ಎಕ್ಸಿಟ್ ಮೆಟ್ಟಿಲು ಇಳಿದು ಓಡಿ ಹೋಗುತ್ತಿದ್ದ ಸಿಸಿಟಿವಿ ದೃಶ್ಯಾವಳಿ ಬಹಿರಂಗವಾಗಿತ್ತು. ಆತನ ಪತ್ತೆಗೆ ಬಾಂದ್ರಾ ಪೊಲೀಸರು ಬಲೆ ಬೀಸಿದ್ದರು.

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ಸೇರಿದಂತೆ ಇಡೀ ಮುಂಬೈ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು. ಸೂಕ್ತ ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಬಾಂದ್ರಾ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.ಘಟನೆ ಬೆಳಕಿಗೆ ಬರುತ್ತಿದ್ದಂತೆ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಸೈಫ್ ಅಲಿಖಾನ್ ನಿವಾಸಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ಅಪಾರ್ಟ್‌ಮೆಂಟ್ ಒಳಗೆ, ಹೊರಗೆ ಇದ್ದ ಸಿಸಿಟಿವಿ ಪರಿಶೀಲನೆ ನಡೆಸಿದ್ದರು. ಸಂಜೆ ವೇಳೆಗೆ ದುಷ್ಕರ್ಮಿಯೊಬ್ಬ ಫೈರ್ ಎಕ್ಸಿಟ್ ಮೆಟ್ಟಿಲು ಇಳಿದು ಓಡಿ ಹೋಗುತ್ತಿದ್ದ ಸಿಸಿಟಿವಿ ದೃಶ್ಯಾವಳಿ ಬಹಿರಂಗವಾಗಿತ್ತು. ಆತನ ಪತ್ತೆಗೆ ಬಾಂದ್ರಾ ಪೊಲೀಸರು ಬಲೆ ಬೀಸಿದ್ದರು.
ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ಸೇರಿದಂತೆ ಇಡೀ ಮುಂಬೈ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು. ಸೂಕ್ತ ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಬಾಂದ್ರಾ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. 20 ತಂಡಗಳಾಗಿ ಮುಂಬೈ ಪೊಲೀಸರು ದುಷ್ಕರ್ಮಿಯ ಹುಡುಕಾಟ ನಡೆಸಿದ್ದರು. ಕೊನೆಗೆ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಂದ್ರಾ ರೈಲು ನಿಲ್ದಾಣದ ಬಳಿ ಆತನನ್ನು ಪೊಲೀಸರು ವಶಕ್ಕೆ ಪಡೆದರು ಎಂದು ವರದಿಯಾಗಿದೆ.
ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ದುಷ್ಕರ್ಮಿಯೊಬ್ಬ ಮನೆಯೊಳಗೆ ಪ್ರವೇಶಿಸಿದ್ದಾಗಿ ಮನೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೈಫ್ ಅಲಿಖಾನ್ ಮಗನ ಜೇಹ್‌ನ ಹಾರೈಕೆ ಮಾಡುವ ದಾದಿ ಎಲಿಯಾಮ ಫಿಲಿಪ್ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಸೈಫ್ ಅಲಿಖಾನ್ ನೆಲೆಸಿರುವ ಅಪಾರ್ಟ್‌ಮೆಂಟ್ ಫೈರ್ ಎಕ್ಸಿಟ್ ಮೆಟ್ಟಿಲು ಏರಿ ಆರೋಪಿ ಮನೆಯೊಳಗೆ ಬಂದಿದ್ದಾನೆ, ಅದೇ ಮಾರ್ಗವಾಗಿ ಹೊರಗೆ ಹೋಗಿದ್ದಾನೆ ಎನ್ನಲಾಗ್ತಿದೆ.
ಎಲಿಯಾಮ ಫಿಲಿಪ್ ಹೇಳಿಕೆ ಪ್ರಕಾರ ದುಷ್ಕರ್ಮಿ ರಾತ್ರಿ 11ರ ಸುಮಾರಿಗೆ ಮನೆಯೊಳಗೆ ಬಂದಿದ್ದ. ಮೊದಲು ಬಾಲಕ ಜೇಹ್ ಇರುವ ಕೋಣೆಯತ್ತ ಹೋಗಿದ್ದಾನೆ. ಕೂಡಲೇ ಎಚ್ಚರಗೊಂಡ ಫಿಲಿಪ್ ಯಾರು ಎಂದು ಕೇಳಿದಾಗ ದುಷ್ಕರ್ಮಿ 1 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ. ನನ್ನ ಮೇಲೆ ಕೂಡ ಹಲ್ಲೆ ಮಾಡಿದ್ದ. ನಮ್ಮ ಕೂಗಾಟ ಕೇಳಿ ಸೈಫ್ ಅಲಿಖಾನ್ ಬಂದರು. ಆಗ ಇಬ್ಬರ ನಡುವೆ ತಳ್ಳಾಟ ನೂಕಾಟ ನಡೆದು ಆತ ಹಲ್ಲೆ ಮಾಡಿ ಓಡಿ ಹೋದ ಎಂದಿದ್ದಾರೆ.
ಬಂಧಿನ ಆರೋಪಿ ಇತ್ತೀಚೆಗೆ ಬಾಲಿವುಡ್ ನಟ ಶಾರುಖ್ ಖಾನ್ ನಿವಾಸ ಸುತ್ತಾಮುತ್ತಾ ಸುತ್ತಾಡಿದ್ಧಾನೆ ಎಂದು ಗೊತ್ತಾಗಿದೆ. ಕಿಂಗ್ ಖಾನ್ ಮನೆಯ ಬಳಿಯ ಸಿಸಿಟಿವಿ ಕ್ಯಾಮರಾಗಳಲ್ಲಿ ಆತನ ಚಲನವಲನ ಸೆರೆಯಾಗಿದೆ. ಬಂಧಿತ ಆರೋಪಿಯನ್ನು 10 ದಿನ ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


Click it and Unblock the Notifications











