For Quick Alerts
  ALLOW NOTIFICATIONS  
  For Daily Alerts

  35 ಕೋಟಿ ಕೊಡುವಂತೆ ಖ್ಯಾತ ನಿರ್ದೇಶಕನಿಗೆ ಬೆದರಿಕೆ ಹಾಕಿದ್ದ ವ್ಯಕ್ತಿಯ ಬಂಧನ

  |

  ಬಾಲಿವುಡ್ ನ ಖ್ಯಾತ ನಟ ಮತ್ತು ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರಿಗೆ 35 ಕೋಟಿ ಹಫ್ತಾ ಕೊಡುವಂತೆ ಧಮ್ಕಿ ಹಾಕಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ 34 ವರ್ಷದ ಮಿಲಿಂದ್ ತುಸಾಂಕರ್ ಎನ್ನುವುದು ತಿಳಿದು ಬಂದಿದೆ. ಈತ ಇತ್ತೀಚಿಗೆ ಭೂಗತ ಲೋಕದ ಸದಸ್ಯನಂತೆ ನಟಿಸಿ ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರಿಗೆ ಬೆದರಿಕೆ ಹಾಕಿದ್ದ.

  ಹಳ್ಳಿ ಹುಡುಗಿ ಲುಕ್ಕಲ್ಲಿ ರಚಿತಾ ಫುಲ್ ಮಿಂಚಿಂಗ್ | Rachita Ram Grand entry | Filmibeat Kannada

  ಈ ವಿಷಯವಾಗಿ ಮಹೇಶ್ ಮಂಜ್ರೇಕರ್ ಖುದ್ದು ಮುಂಬೈನ ದಾದರ್ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ಭೂಗತ ಲೋಕಕ್ಕೆ ಸಂಬಂಧಿಸಿದ್ದರಿಂದ ಇದನ್ನು ಎಇಸಿ (ಆ್ಯಂಟಿ ಎಕ್ಸ್ಟಾರ್ಶನ್ ಸೆಲ್ ಗೆ) ವರ್ಗಾವಣೆ ಮಾಡಿದ್ದರು. ಈ ವಿಷಯವಾಗಿ ತನಿಖೆ ನಡೆಸಿದ ಎಇಸಿ, 34 ವರ್ಷದ ಮಿಲಿಂದ್ ನನ್ನು ಬಂಧಿಸಿದ್ದಾರೆ.

  'ಆ ಒಂದು ಪರೀಕ್ಷೆ ಮಾಡಿಸಿದರೆ ಬಾಲಿವುಡ್‌ನ ಸ್ಟಾರ್‌ಗಳೆಲ್ಲಾ ಜೈಲು ಸೇರುತ್ತಾರೆ'

  ಮಹೇಶ್ ಮಂಜ್ರೇಕರ್ ದೂರಿನಲ್ಲಿ, ತಾನು ಅಬು ಸಲೀಂ ಗ್ಯಾಂಗ್ ಕಡೆಯವನು, ಅವರು ನಿಮ್ಮಲ್ಲಿ 35 ಕೋಟಿ ವಸೂಲಿ ಮಾಡಲು ಹೇಳಿದ್ದಾರೆ ಎಂದು ಹಣ ಕೊಡುವಂತೆ ಬೆದರಿಕೆ ಹಾಕಿದ್ದ ಎಂದು ಹೇಳಿದ್ದಾರೆ.

  ಪ್ರಾಥಮಿಕ ತನಿಖೆಯಲ್ಲಿ ಮಿಲಿಂದ್ ಮಹಾರಾಷ್ಟ್ರದ ಖೇದ್ ಜಿಲ್ಲೆಯವನು ಎಂದು ಗೊತ್ತಾಗಿದೆ. ಈತನಿಗೂ ಭೂಗತ ಲೋಕಕ್ಕೂ ಯಾವುದೇ ಸಂಪರ್ಕವಿಲ್ಲ ಎನ್ನುವುದು ತಿಳಿದುಬಂದಿದೆ. ಮಿಲಿಂದ್ ಪದವೀಧರನಾಗಿದ್ದು, ಮುಂಬೈನ ಧಾರಾವಿಯಲ್ಲಿ ಚಹಾ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದನಂತೆ. ಆದರೆ ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಬೀದಿಗೆ ಬಿದ್ದಿದ್ದ ಮಿಲಿಂದ್ ವಾಪಸ್ ಖೇದ್ ಗೆ ಹೊರಟು ಹೋಗಿದ್ದಾನೆ.

  ಜೀವನ ನಡೆಸಲು ಕಷ್ಟಪಡುತ್ತಿದ್ದ ಮಿಲಿಂದ್ ಹಣ ಮಾಡುವ ಸುಲಭದ ದಾರಿ ಹುಡುಕಿದ್ದಾನೆ. ಯೂಟ್ಯೂಬ್ ನಲ್ಲಿ ಅಬು ಸಲೀಂ ಬಗ್ಗೆ ತಿಳಿದುಕೊಂಡು, ಬಳಿಕ ಮಂಜ್ರೇಕರ್ ಫೋನ್ ನಂಬರ್ ಹುಡುಕಿ ಫೋನ್ ಮಾಡಿ ಬೆದರಿಕೆ ಹಾಕಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಸಾವಂತ್ ತಿಳಿಸಿದ್ದಾರೆ. ಸದ್ಯ ಪೊಲೀಸರ ವಶದಲ್ಲಿರುವ ಮಿಲಿಂದ್ ನನ್ನು ವಿಚಾರಣೆ ಮಾಡುತ್ತಿದ್ದಾರೆ.

  English summary
  Bollywood filmmaker Mahesh Manjrekar gets threat allegedly from Abu Saleem gange. Mumbai police arrested 34 year old man.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X