ಸಿನಿಮಾ ಅವಕಾಶ ಕೊಡಿಸುವುದಾಗಿ ಹೇಳಿ ಲೈಂಗಿಕವಾಗಿ ಬಳಕೆ: ನಕಲಿ ನಿರ್ಮಾಪಕ ಬಂಧನ

ಸಿನಿಮಾದಲ್ಲಿ ನಟಿಸುವ ಆಸೆ ಹೊತ್ತು ಬರುವ ನಟಿಯರಿಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿಕೊಂಡು ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ನಕಲಿ ಕಾಸ್ಟಿಂಗ್ ಡೈರೆಕ್ಟರ್ ಕಮ್ ನಿರ್ಮಾಪಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿ ಓಂ ಪ್ರಕಾಶ್ ತಿವಾರಿ, ಈ ಮೊದಲು ಜನಪ್ರಿಯ ಸಿನಿಮಾ ನಿರ್ಮಾಣ ಸಂಸ್ಥೆಯಲ್ಲಿ ಕಾಸ್ಟಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ. ಸಿನಿಮಾಕ್ಕೆ ನಟಿಯರನ್ನು, ನಟರನ್ನು ಆಯ್ಕೆ ಮಾಡುವ ವಿಧಾನ, ಸಂಪರ್ಕ ಮಾಡುವ ವಿಧಾನವೆಲ್ಲ ಆತನಿಗೆ ಗೊತ್ತಿತ್ತು. ಅದನ್ನೇ ಬಳಸಿ ನಟಿಯರನ್ನು ಸೆಳೆದು ಅವರನ್ನು ಲೈಂಗಿಕತೆಗೆ ಬಳಸಿಕೊಳ್ಳುತ್ತಿದ್ದ.

ಇತ್ತೀಚೆಗೆ ನಟಿಯೊಬ್ಬರನ್ನು ತನ್ನ ವಂಚನೆಯ ಜಾಲಕ್ಕೆ ಇಳಿಸಿಕೊಂಡಿದ್ದ ತಿವಾರಿ ಆಕೆಗೆ ಬೆದರಿಕೆ ಒಡ್ಡಿದ್ದ. ತಾನು ಹೇಳಿದಂತೆ ನಡೆದುಕೊಳ್ಳಲಿಲ್ಲವಾದರೆ ನಟಿಯ ಖಾಸಗಿ ಚಿತ್ರಗಳನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಆ ಯುವ ನಟಿಯು ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಮುಂಬೈನ ಮಲಾಡ್ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Mumbai Police Arrested Fake Casting Director
ತಾನೊಂದು ವೆಬ್ ಸರಣಿ ನಿರ್ಮಾಣ ಮಾಡುತ್ತಿದ್ದು, ವೆಬ್ ಸರಣಿಯಲ್ಲಿನ ನಾಯಕಿಯ ಪಾತ್ರವನ್ನು ನೀಡುವುದಾಗಿ ನಟಿಯೊಬ್ಬರನ್ನು ನಂಬಿಸಿದ್ದ. ನಟಿಯ ಖಾಸಗಿ ಫೋಟೊಗಳನ್ನು ಕಳಿಸುವಂತೆ ಹೇಳಿದ್ದ. ಪಾತ್ರ ದೊರೆಯುವ ಆಸೆಗೆ ನಟಿಯು ತಿವಾರಿಗೆ ತನ್ನ ಖಾಸಗಿ ಚಿತ್ರಗಳನ್ನು ಕಳಿಸಿದ್ದರು. ಆ ಚಿತ್ರಗಳನ್ನು ಇಟ್ಟುಕೊಂಡು ಬೆದರಿಕೆ ಹಾಕಿದ್ದ ತಿವಾರಿ, ತಾನು ಹೇಳಿದಂತೆ ಕೇಳಲಿಲ್ಲವಾದರೆ, ತನಗೆ 'ಸಹಕರಿಸ'ಲಿಲ್ಲವಾದರೆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವುದಾಗಿ ಬೆದರಿಕೆ ಹಾಕಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಟಿಯರ ಕಾಸ್ಟಿಂಗ್‌ ಬಗ್ಗೆ ಮಾಹಿತಿ ಇದ್ದ ತಿವಾರಿ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಜಾಹೀರಾತುಗಳನ್ನು ನೀಡಿ ನಟಿಯರನ್ನು ಸೆಳೆಯುತ್ತಿದ್ದ. ತನ್ನದೇ ಒಂದು ನಿರ್ಮಾಣ ಸಂಸ್ಥೆಯಿದೆ ಎಂದು ಹೇಳಿಕೊಂಡಿದ್ದ ತಿವಾರಿ, ತಾನೂ ಸಿನಿಮಾ ನಿರ್ಮಾಪಕ ಎಂದೂ ಸಹ ಹೇಳಿಕೊಂಡಿದ್ದ. ಆದರೆ ಈ ಬಗ್ಗೆಯೂ ತನಿಖೆ ನಡೆಸಿರುವ ಪೊಲೀಸರು ತಿವಾರಿಗೆ ಯಾವುದೇ ನಿರ್ಮಾಣ ಸಂಸ್ಥೆ ಇಲ್ಲ ಎಂದು ಹೇಳಿದ್ದಾರೆ.

ತಿವಾರಿ ವಿರುದ್ಧ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಯತ್ನ ಹಾಗೂ ವಂಚನೆ ಪ್ರಕರಣಗಳನ್ನು ದಾಖಲಿಸಲಾಗಿದೆ.

More from Filmibeat

English summary
Mumbai police arrested fake casting director. Om Praksh Tiwari who worked in a production before, now started to attract aspirational actress and use them for his physical needs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X