twitter
    For Quick Alerts
    ALLOW NOTIFICATIONS  
    For Daily Alerts

    ಸೆಲೆಬ್ರಿಟಿಗಳಿಗೆ ಫಾಲೋವರ್ಸ್ ಹೆಚ್ಚಿಸಲು ಹೀಗೊಂದು ವಂಚನೆಯ ಜಾಲ

    |

    ತಮ್ಮ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಅನೇಕರಿಗೆ ವಂಚನೆ ಮಾಡಲಾಗುತ್ತಿದೆ ಎಂದು ಗಾಯಕಿ ಭೂಮಿ ತ್ರಿವೇದಿ ಆರೋಪಿಸಿದ ಬಳಿಕ ತನಿಖೆ ನಡೆಸಿದ ಪೊಲೀಸರು ಬೃಹತ್ ಅಂತಾರಾಷ್ಟ್ರೀಯ ವಂಚನೆಯ ಜಾಲವನ್ನು ಪತ್ತೆಹಚ್ಚಿದ್ದಾರೆ.

    Recommended Video

    ಹೊಸ ಟ್ಯಾಲೆಂಟ್ ಗೆ ಅಪ್ಪು ಅಣ್ಣ ಅವಕಾಶ ಕೊಡ್ತಾರೆ | Law | Ragini | Filmibeat Kannada

    ಸಾಮಾಜಿಕ ಜಾಲತಾಣದಲ್ಲಿ ಖ್ಯಾತನಾಮರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಲಾಗುತ್ತದೆ. ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ಸಂಸ್ಥೆಗಳಾಗಿ ಬಿಂಬಿಸಿಕೊಳ್ಳುವ ವೆಬ್‌ಸೈಟ್‌ಗಳ ಮೂಲಕ ನಕಲಿ ಹಿಂಬಾಲಕರು ಮತ್ತು ಲೈಕ್‌ಗಳನ್ನು ನೈಜ ಹಾಗೂ ನಕಲಿ ಖಾತೆಗಳಿಗೆ ಮಾರಾಟ ಮಾಡುವ ಮತ್ತು ಇತರೆ ವಂಚನೆಯ ಚಟುವಟಿಕೆಗಳನ್ನು ನಡೆಸುತ್ತಾರೆ.

    ತಪ್ಪಾಯಿತು ಕ್ಷಮಿಸಿ, ನನ್ನ ಕುಟುಂಬವನ್ನು ಬಿಟ್ಟುಬಿಡಿ: ಕೈ ಮುಗಿದ ಕಮಿಡಿಯನ್ತಪ್ಪಾಯಿತು ಕ್ಷಮಿಸಿ, ನನ್ನ ಕುಟುಂಬವನ್ನು ಬಿಟ್ಟುಬಿಡಿ: ಕೈ ಮುಗಿದ ಕಮಿಡಿಯನ್

    ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಪ್ರಭಾವವನ್ನು ಹೆಚ್ಚಿಸಲು ಇಂತಹ ಸೇವೆಗಳನ್ನು ಬಳಸಿಕೊಂಡ ಆರೋಪ ಎದುರಿಸುತ್ತಿರುವ ನಿರ್ದೇಶಕರು, ನೃತ್ಯ ಸಂಯೋಜಕರು ಮತ್ತು ಮಾಡೆಲ್‌ಗಳು ಸೇರಿದಂತೆ 18 ಸೆಲೆಬ್ರಿಟಿಗಳಿಗೆ ಪೊಲೀಸರು ಸಮನ್ಸ್ ನೀಡಿದ್ದಾರೆ.

    ಭೂಮಿ ತ್ರಿವೇದಿ ನೀಡಿದ್ದ ದೂರು

    ಭೂಮಿ ತ್ರಿವೇದಿ ನೀಡಿದ್ದ ದೂರು

    ಗಾಯಕಿ ಭೂಮಿ ತ್ರಿವೇದಿ ಅವರು ಇನ್‌ಸ್ಟಾಗ್ರಾಂನಲ್ಲಿ ನಕಲಿ ಖಾತೆಯೊಂದು ತಮ್ಮದೇ ಅಧಿಕೃತ ಖಾತೆಯೆಂಬಂತೆ ಪೋಸ್ಟ್‌ಗಳನ್ನು ಹಾಕುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಅದರ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಭಾರಿ ಹಗರಣವೊಂದು ಕಂಡುಬಂದಿದೆ.

    ನಕಲಿ ಹಿಂಬಾಲಕರ ಮಾರಾಟ

    ನಕಲಿ ಹಿಂಬಾಲಕರ ಮಾರಾಟ

    ಫಾಲೋವರ್ಸ್ ಕಾರ್ಟ್ ಡಾಟ್ ಕಾಂ ಎಂಬ ವೆಬ್‌ಸೈಟ್‌ ಒಂದಕ್ಕೆ ಕೆಲಸ ಮಾಡುತ್ತಿದ್ದ 21 ವರ್ಷದ ಅಭಿಷೇಕ್ ದಾವಡೆ ಎಂಬಾತನನ್ನು ಕ್ರೈಂ ಬ್ರಾಂಚ್‌ನ ಕೇಂದ್ರ ಗುಪ್ತಚರ ಘಟಕ ಮಂಗಳವಾರ ಬಂಧಿಸಿದೆ. ಈ ವೆಬ್‌ಸೈಟ್ ಸ್ವಯಂಚಾಲಿತ ಸಾಫ್ಟ್‌ವೇರ್‌ ಒಂದನ್ನು ಬಳಸಿಕೊಂಡು ನಕಲಿ ಹಿಂಬಾಲಕರು ಮತ್ತು ನಕಲಿ ಲೈಕ್‌ಗಳನ್ನು ಜನರಿಗೆ ಹಣಕ್ಕೆ ಮಾರುತ್ತದೆ.

    ನಿರ್ದೇಶಕ ಮಹೇಶ್ ಭಟ್ ಮಗಳಿಗೆ ಅತ್ಯಾಚಾರದ ಬೆದರಿಕೆನಿರ್ದೇಶಕ ಮಹೇಶ್ ಭಟ್ ಮಗಳಿಗೆ ಅತ್ಯಾಚಾರದ ಬೆದರಿಕೆ

    ಆರು ತಿಂಗಳಲ್ಲಿ ಒಂಬತ್ತು ಲಕ್ಷ ಸಂಪಾದನೆ

    ಆರು ತಿಂಗಳಲ್ಲಿ ಒಂಬತ್ತು ಲಕ್ಷ ಸಂಪಾದನೆ

    ದಾವಡೆ ಒಬ್ಬಾತನೇ 176 ಖಾತೆಗಳಿಗೆ ಐದು ಲಕ್ಷಕ್ಕೂ ಅಧಿಕ ನಕಲಿ ಫಾಲೋವರ್‌ಗಳನ್ನು ಒದಗಿಸುತ್ತಿದ್ದ ಎನ್ನಲಾಗಿದೆ. ಅದರಲ್ಲಿ ಪೊಲೀಸರು ಸಮನ್ಸ್ ನೀಡಿರುವ 18 ಸೆಲೆಬ್ರಿಟಿಗಳು ಸೇರಿದ್ದಾರೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟ್ಟರ್, ಟಿಕ್ ಟಾಕ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಿಗೆ ಆತ ನಕಲಿ ಫಾಲೋವರ್‌ಗಳನ್ನು ಒದಗಿಸುತ್ತಿದ್ದ. ಆತನ ಹೆಸರಿನಲ್ಲಿ ಮೂರು ಬ್ಯಾಂಕ್ ಖಾತೆಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಕಳೆದ ಆರು ತಿಂಗಳಲ್ಲಿ ಆ ಖಾತೆಗಳಿಗೆ 9 ಲಕ್ಷ ರೂಪಾಯಿಗೂ ಅಧಿಕ ವರ್ಗಾವಣೆ ನಡೆದಿದೆ.

    ಭಾರತದಲ್ಲಿವೆ ನೂರಾರು ವೆಬ್‌ಸೈಟ್‌ಗಳು

    ಭಾರತದಲ್ಲಿವೆ ನೂರಾರು ವೆಬ್‌ಸೈಟ್‌ಗಳು

    ಭಾರತದಲ್ಲಿ ಅಂತಹ ಕನಿಷ್ಠ 100 ವೆಬ್‌ಸೈಟ್‌ಗಳಿವೆ. ಅವುಗಳಲ್ಲಿ ಇದುವರೆಗೂ 54 ವೆಬ್‌ಸೈಟ್‌ಗಳನ್ನು ಪತ್ತೆಹಚ್ಚಲಾಗಿದೆ. ಈ ರೀತಿಯ ವಂಚನೆಯನ್ನು ನಿಯಂತ್ರಿಸುವ ಸಲುವಾಗಿ ಸಾಮಾಜಿಕ ಮಾಧ್ಯಮ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಕ್ರೈಂ ಬ್ರಾಂಚ್‌ನಿಂದ ವಿಶೇಷ ತನಿಖಾ ತಂಡ ಸ್ಥಾಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಅಕೌಂಟ್ ವೆರಿಫೈ ಹೆಸರಲ್ಲಿ ಮೋಸ

    ಅಕೌಂಟ್ ವೆರಿಫೈ ಹೆಸರಲ್ಲಿ ಮೋಸ

    ನನ್ನ ಇನ್‌ಸ್ಟಾಗ್ರಾಂ ಖಾತೆಯನ್ನು 4,000 ರೂ. ಗೆ ವೆರಿಫೈ ಮಾಡಿದ್ದೇವೆ ಎಂದು ಪಿಆರ್ ಏಜೆನ್ಸಿ ಒಂದರಿಂದ ಉದ್ಯಮದ ನನ್ನ ಕೆಲವು ಸ್ನೇಹಿತರು ಮತ್ತು ಫಾಲೋವರ್‌ಗಳಿಗೆ ಮೆಸೇಜ್ ಬಂದಿದೆ. ವಂಚಕರು ತಮ್ಮ ಹಾಗೂ ನಕಲಿ ಖಾತೆ ನಡೆಸುವ ವ್ಯಕ್ತಿ ನಡುವಿನ ಸಂಭಾಷಣೆಯ ಸ್ಕ್ರೀನ್ ಶಾಟ್ ಬಳಸಿ ಬೇರೆಯವರ ವಿಶ್ವಾಸ ಪಡೆದುಕೊಳ್ಳುವುದನ್ನು ಕಂಡು ಆಘಾತವಾಯಿತು ಎಂದು ಭೂಮಿ ತ್ರಿವೇದಿ ಹೇಳಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಹೆಸರು ಬದಲಾಯಿಸಿದ ದೀಪಿಕಾ ಪಡುಕೋಣೆ: ಕಾರಣವೇನು?ಸಾಮಾಜಿಕ ಜಾಲತಾಣದಲ್ಲಿ ಹೆಸರು ಬದಲಾಯಿಸಿದ ದೀಪಿಕಾ ಪಡುಕೋಣೆ: ಕಾರಣವೇನು?

    English summary
    Mumbai police has bust an international racket of fake social media profiles scam after the complaint from singer Bhoomi Trivedi.
    Friday, July 17, 2020, 10:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X