Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಜ್ ಕುಂದ್ರಾ ಪ್ರಕರಣ: ಮುಂಬೈ ಪೊಲೀಸರ ಮೇಲೆ ನಟಿ ಗೆಹನಾ ಬಾಂಬ್!
ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ರಾಜ್ ಕುಂದ್ರಾ ಪ್ರಕರಣವು ದಿನೇ-ದಿನೇ ಹೊಸ ತಿರುವುಗಳನ್ನು ತೆಗೆದುಕೊಳ್ಳುತ್ತಲೇ ಇದೆ. ಪೊಲೀಸರು ರಾಜ್ ಕುಂದ್ರಾ ಅನ್ನು ಉದ್ದೇಶಪೂರ್ವಕವಾಗಿ ಪ್ರಕರಣದಲ್ಲಿ ಸಿಕ್ಕಿ ಹಾಕಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನಟಿಯೊಬ್ಬರು ಹೇಳಿದ್ದಾರೆ.
ರಾಜ್ ಕುಂದ್ರಾ ಬಂಧನಕ್ಕೆ ಮುಂಚೆ ಇದೇ ಪ್ರಕರಣದಲ್ಲಿ ಬಂಧನಕ್ಕೆ ಒಳಪಟ್ಟಿದ್ದ ಗೆಹನಾ ವಸಿಷ್ಠ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಮುಂಬೈ ಪೊಲೀಸರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ''ಮುಂಬೈ ಪೊಲೀಸರು ರಾಜ್ ಕುಂದ್ರಾ ಅನ್ನು ಸಿಕ್ಕಿಹಾಕಿಸಲು ಉದ್ದೇಶಪೂರ್ವಕವಾಗಿ ವ್ಯೂಹ ಹೆಣೆದಿದ್ದಾರೆ'' ಎಂದಿದ್ದಾರೆ. ಅಷ್ಟೇ ಅಲ್ಲದೆ ಮುಂಬೈ ಪೊಲೀಸರ ಮೇಲೆ ಲಂಚಕ್ಕೆ ಬೇಡಿಕೆ ಇಟ್ಟ ಆರೋಪವನ್ನು ಸಹ ಗೆಹನಾ ವಸಿಷ್ಠ ಹೊರಿಸಿದ್ದಾರೆ.
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಮೊದಲು ಬಂಧನಕ್ಕೆ ಒಳಪಟ್ಟಿದ್ದ ಗೆಹನಾಗೆ ವಿಚಾರಣೆ ವೇಳೆ ಬಾಲಿವುಡ್‌ನ ಖ್ಯಾತ ನಾಮರ ಹೆಸರನ್ನು ಪ್ರಕರಣದಲ್ಲಿ ಹೇಳುವಂತೆ ಒತ್ತಾಯ ಮಾಡಲಾಗಿತ್ತಂತೆ. ಹೀಗೆಂದು ಸ್ವತಃ ಗೆಹನಾ ವಸಿಷ್ಠ ಹೇಳಿದ್ದಾರೆ. ಗೆಹನಾ ಹೇಳಿಕೆಯು ಪ್ರಕರಣಕ್ಕೆ ಹೊಸ ತಿರುವೊಂದನ್ನು ನೀಡಿದೆ.
''ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಹಾಗೂ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಹೆಸರನ್ನು ಹೇಳುವಂತೆ ಮುಂಬೈ ಪೊಲೀಸರು ನನ್ನ ಮೇಲೆ ಒತ್ತಡ ಹೇರಿದ್ದರು. ಆದರೆ ನಾನು ಅವರಿಬ್ಬರ ಹೆಸರನ್ನು ಹೇಳಲಿಲ್ಲ'' ಎಂದಿದ್ದಾರೆ ನಟಿ ಗೆಹನಾ ವಸಿಷ್ಠ. ಅಷ್ಟೇ ಅಲ್ಲದೆ, ''ನಿಮ್ಮನ್ನು ಬಂಧಿಸಬಾರದು ಎಂದರೆ ನಮಗೆ 15 ಲಕ್ಷ ಹಣ ಕೊಡಿ ಎಂದು ಲಂಚಕ್ಕೆ ಒತ್ತಾಯಿಸಿದ್ದರು'' ಎಂದು ಸಹ ಗೆಹನಾ ಆರೋಪ ಮಾಡಿದ್ದಾರೆ. ನನ್ನ ಮನೆಯಲ್ಲಿ ಕುಳಿತುಕೊಂಡು ಪೊಲೀಸರು ನನಗೆ ಲಂಚದ ಬೇಡಿಕೆ ಇಟ್ಟರು ಎಂದು ಗೆಹನಾ ಹೇಳಿದ್ದಾರೆ.

ಈ ಮೊದಲೇ ಬಂಧನಕ್ಕೆ ಒಳಗಾಗಿದ್ದ ಗೆಹನಾ
ಫೆಬ್ರವರಿ ತಿಂಗಳಲ್ಲಿ ಅಶ್ಲೀಲ ವಿಡಿಯೋ ನಿರ್ಮಾಣ, ಮಾಡೆಲ್‌ಗೆ ವಂಚನೆ ಪ್ರಕರಣದಲ್ಲಿ ಮುಂಬೈ ಪೊಲೀಸರು ಗೆಹನಾ ವಸಿಷ್ಠ ಅನ್ನು ಬಂಧಿಸಿದ್ದರು. ಕೆಲವು ದಿನಗಳಲ್ಲಿ ಗೆಹನಾಗೆ ಜಾಮೀನು ದೊರೆತ ನಂತರ ಆಕೆಯನ್ನು ಅತ್ಯಾಚಾರ ಆರೋಪದಲ್ಲಿ ಬಂಧಿಸಲಾಗಿತ್ತು. ಗೆಹನಾ ವಸಿಷ್ಠ, ರಾಜ್ ಕುಂದ್ರಾಗಾಗಿಯೇ ಕೆಲವು ಎರೊಟಿಕಾ ವಿಡಿಯೋಗಳನ್ನು ಚಿತ್ರೀಕರಿಸಿ ನೀಡುತ್ತಿದ್ದರು. ಗೆಹನಾ ಹೇಳಿರುವಂತೆ ಅವು ಪಾರ್ನ್ ವಿಡಿಯೋಗಳಾಗಿರಲಿಲ್ಲ ಬದಲಿಗೆ ಶೃಂಗಾರ ಮಾದರಿಯ ವಿಡಿಯೋಗಳಷ್ಟೆ ಆಗಿದ್ದವು. ಅವುಗಳನ್ನು ಹಾಟ್‌ಶಾಟ್ಸ್ ಆಪ್‌ನಲ್ಲಿ ಪ್ರಕಟಿಸಲಾಗುತ್ತಿತ್ತು.

ಗೆಹನಾ ವಸಿಷ್ಠ, ರಾಜ್ ಕುಂದ್ರಾಗೆ ಸಂಪರ್ಕ ಇತ್ತು
ಗೆಹನಾ ಹಾಗೂ ರಾಜ್ ಕುಂದ್ರಾಗೆ ಈ ಮೊದಲೇ ಸಂಪರ್ಕ ಇತ್ತು ಆದರೆ ನೇರವಾಗಿ ಅಲ್ಲ. ಬದಲಿಗೆ ರಾಜ್ ಕುಂದ್ರಾ ಸಂಸ್ಥೆಯಿಂದಲೇ ಗೆಹನಾ ವಸಿಷ್ಠ ತಮ್ಮದೇ ಆದ ಪ್ರತ್ಯೇಕ ಆಫ್ ಮಾಡಿಸಿಕೊಂಡಿದ್ದರು ಮತ್ತು ಸಾಕಷ್ಟು ಹಣವನ್ನು ಆಪ್ ಮೂಲಕ ಸಂಪಾದಿಸಿದ್ದರು. ಶೆರ್ಲಿನ್ ಚೋಪ್ರಾ ಹಾಗೂ ಪೂನಂ ಪಾಂಡೆ ಸಹ ರಾಜ್ ಕುಂದ್ರಾ ಸಂಸ್ಥೆ ನಿರ್ಮಿಸಿಕೊಟ್ಟ ಆಪ್ ಮೂಲಕ ವಿಡಿಯೋ ಅಪ್‌ಲೋಡ್ ಮಾಡಿ ಸಾಕಷ್ಟು ಹಣ ಸಂಪಾದನೆ ಮಾಡಿದ್ದರು.

ಕುಂದ್ರಾ ವಿರುದ್ಧ ಶೆರ್ಲಿನ್, ಪೂನಂ ಆರೋಪ
ಗೆಹನಾ ವಸಿಷ್ಠ, ರಾಜ್ ಕುಂದ್ರಾ ಪರವಾಗಿ ಹೇಳಿಕೆ ನೀಡಿದರೆ ಶೆರ್ಲಿನ್ ಚೋಪ್ರಾ ಮತ್ತು ಪೂನಂ ಪಾಂಡೆ ರಾಜ್ ಕುಂದ್ರಾ ವಿರುದ್ಧವಾಗಿ ಹೇಳಿಕೆಗಳನ್ನು ನೀಡಿದ್ದಾರೆ. ''ಮೀಟಿಂಗ್ ಎಂದು ಕರೆದು ನನ್ನನ್ನ ಬಲವಂತವಾಗಿ ಕಿಸ್ ಮಾಡಲು ಯತ್ನಿಸಿದರು. ಇದಕ್ಕೆ ನಾನು ವಿರೋಧಿಸಿದೆ. ಆಗ ನಮ್ಮಿಬ್ಬರ ನಡುವೆ ಜಗಳ ಶುರುವಾಯಿತು. ನನ್ನನ್ನು ಎಳೆದಾಡಿದರು. ಭಯದಿಂದ ನಾನು ಕೇಳಿಕೊಂಡೆ. ಆದರೂ ರಾಜ್ ಕುಂದ್ರಾ ಸುಮ್ಮನಾಗಲಿಲ್ಲ. ಅವರಿಂದ ತಪ್ಪಿಸಿಕೊಳ್ಳಲು ನಾನು ಬಾತ್‌ರೂಂನಲ್ಲಿ ಅಡಗಿ ಕುಳಿತಿದ್ದೆ'' ಎಂದು ಶೆರ್ಲಿನ್ ಚೋಪ್ರಾ ಹೇಳಿದ್ದಾರೆ. ಇನ್ನು ಪೂನಂ ಪಾಂಡೆ ಸಹ ರಾಜ್ ಕುಂದ್ರಾ ವಿರುದ್ಧ ಆರೋಪ ಮಾಡಿದ್ದು, ''ರಾಜ್ ಕುಂದ್ರ ತನಗೆ ಬ್ಲಾಕ್ ಮೇಲ್ ಮಾಡಿದ್ದಾರೆ. ತನ್ನ ಫೋನ್ ನಂಬರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಮಾಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಪೂನಂ ಪಾಂಡೆ, "ನಾನು ಅವರೊಂದಿಗೆ ಒಂದು ಒಪ್ಪಂದಕ್ಕೆ ಸಹಿ ಹಾಕಿದಾಗ, ಅದು ತಿಂಗಳ ಕಾಲ ನಡೆಯಿತು. ಬಳಿಕ ಅವರು ಮೋಸ ಮಾಡುತ್ತಿದ್ದಾರೆ, ವೃತ್ತಿಪರರಲ್ಲ ಎನ್ನುವುದು ತಿಂಗಳ ಬಳಿಕ ಸ್ಪಷ್ಟವಾಗಿ ಗೊತ್ತಾಯಿತು. ಇದರಿಂದ ನಾನು ತಕ್ಷಣ ನನ್ನ ಒಪ್ಪಂದವನ್ನು ಕೊನೆಗೊಳಿಸಿದೆ" ಎಂದಿದ್ದಾರೆ.

ಜುಲೈ 19 ರಂದು ರಾಜ್ ಕುಂದ್ರಾ ಬಂಧನ
ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಅನ್ನು ಮುಂಬೈ ಪೊಲೀಸರು ಜುಲೈ 19 ರಂದು ಬಂಧಿಸಿದ್ದಾರೆ. ಭಾರತದಲ್ಲಿ ಅಶ್ಲೀಲ ವಿಡಿಯೋಗಳ ನಿರ್ಮಾಣ ಮಾಡುತ್ತಿದ್ದ ರಾಜ್ ಕುಂದ್ರಾ ಆ ವಿಡಿಯೋಗಳನ್ನು ಲಂಡನ್‌ನ ತಮ್ಮ ಸಂಬಂಧಿಯ ಕಂಪೆನಿಯೊಟ್ಟಿಗೆ ಸೇರಿಕೊಂಡು ಅಲ್ಲಿಂದ ಹಾಟ್‌ಶಾಟ್ಸ್ ಎಂಬ ಆಪ್‌ಗೆ ಅಪ್‌ಲೋಡ್ ಮಾಡಿಸಿ ದಿನವೊಂಕ್ಕೆ ಲಕ್ಷಾಂತರ ಹಣ ಗಳಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ರಾಜ್ ಕುಂದ್ರಾ ಪತ್ನಿ ನಟಿ ಶಿಲ್ಪಾ ಶೆಟ್ಟಿಗೂ ಈ ಪ್ರಕರಣದ ಜೊತೆಗೆ ಸಂಬಂಧ ಇದೆಯೇ ಎಂಬ ತನಿಖೆ ಸದ್ಯಕ್ಕೆ ಜಾರಿಯಲ್ಲಿದೆ.