For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟ ರಣ್‌ವೀರ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲು

  |

  ಕಳೆದ ಮೂರು ದಿನಗಳಿಂದ ರಣ್‌ವೀರ್ ಸಿಂಗ್ ಬೆತ್ತಲೆ ಫೋಟೊಶೂಟ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಈ ಬಗ್ಗೆ ಪರ ವಿರೋಧ ಚರ್ಚೆ ಜೋರಾಗಿ ನಡೀತಿದೆ. 'ನಾನು ಇರೋದೇ ಹೀಗೆ, ಸಾವಿರ ಜನರ ನಡುವೆ ಬೇಕಾದರೂ ಬೆತ್ತಲಾಗಿ ಇರುತ್ತೀನಿ' ಅಂತೆಲ್ಲಾ ಹೇಳಿದ್ದ ರಣ್‌ವೀರ್‌ ಸಿಂಗ್‌ಗೆ ಈಗ ಸಂಕಷ್ಟ ಎದುರಾಗಿದೆ. ಫೋಟೊಶೂಟ್‌ನಲ್ಲಿ ಬೆತ್ತಲೆಯಾಗಿ ದರ್ಶನ ಕೊಟ್ಟಿದ್ದ ನಟನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮ್ಯಾಗಝೀನ್‌ವೊಂದರ ಫೋಟೊಶೂಟ್‌ನಲ್ಲಿ ಬೆತ್ತಲಾಗಿ ಕಾಣಿಸಿಕೊಂಡಿದ್ದ ರಣ್‌ವೀರ್ ಇನ್‌ಸ್ಟಾಗ್ರಾಮ್‌ನಲ್ಲಿ ಆ ಫೋಟೊಗಳನ್ನು ಹಂಚಿಕೊಂಡಿದ್ದರು. ಇದರ ವಿರುದ್ಧ ಮುಂಬೈನ ಚೆಂಬೂರು ಪೊಲೀಸ್ ಸ್ಟೇಷನ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ.

  ರಣ್‌ವೀರ್‌ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 292, 293, 509 ಹಾಗೂ ಐಟಿ ಕಾಯ್ದೆಯ ಸೆಕ್ಷನ್ 67A ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ರಣವೀರ್ ಬೆತ್ತಲಾಗುವ ಮೂಲಕ ಮಹಿಳೆಯರ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಮುಂಬೈನ ಎನ್‌ಜಿಓ ಒಂದರ ಅಧಿಕಾರಿಯೊಬ್ಬರು ರಣ್ವೀರ್ ಸಿಂಗ್ ವಿರುದ್ಧ ಚೆಂಬೂರ್ ಪೊಲೀಸ್ ಠಾಣೆಯಲ್ಲಿ ಲಿಖಿತ ರೂಪದಲ್ಲಿ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಪೊಲೀಸರು ಈಗ ಎಫ್‌ಐಆರ್ ದಾಖಲಿಸಿಕೊಂಡಿದ್ದು, ರಣ್‌ವೀರ್ ಸಿಂಗ್ ಕಾನೂನು ಹೋರಾಟಕ್ಕೆ ಸಿದ್ಧವಾಗಬೇಕಿದೆ. ಇನ್ನು ರಣ್‌ವೀರ್ ಹಾದಿಯಲ್ಲೇ ಕೆಲವರು ಬೆತ್ತಲಾಗಿ ಫೋಟೋಗಳನ್ನು ಶೇರ್‌ ಮಾಡಲು ಶುರು ಮಾಡಿದ್ದಾರೆ. ತಮಿಳು ನಟ ವಿಷ್ಣು ವಿಶಾಲ್ ಕೂಡ ಇಂತದ್ದೇ ಪ್ರಯತ್ನ ಮಾಡಿದ್ದು, ಖುದ್ದು ಅವರ ಪತ್ನಿಯೇ ಫೋಟೊಗಳನ್ನು ಕ್ಲಿಕ್ಕಿಸಿದ್ದಾಗ ಅವರು ತಿಳಿಸಿದ್ದರು.

  ರಣ್ವೀರ್ ಸಿಂಗ್ ನಗ್ನ ಅವತಾರಕ್ಕೆ ಪತ್ನಿ ದೀಪಿಕಾ ಶಾಕಿಂಗ್ ಕಮೆಂಟ್!ರಣ್ವೀರ್ ಸಿಂಗ್ ನಗ್ನ ಅವತಾರಕ್ಕೆ ಪತ್ನಿ ದೀಪಿಕಾ ಶಾಕಿಂಗ್ ಕಮೆಂಟ್!

  ಪ್ರಕರಣ ಸಂಬಂಧ ಮುಂಬೈ ಪೊಲೀಸರು ಪ್ರಕಟಣೆ ಹೊರಡಿಸಿದ್ದು, 'ಹೆಚ್ಚು ಹಣ ಗಳಿಸುವ ಉದ್ದೇಶದಿಂದ ರಣ್‌ವೀರ್ ಸಿಂಗ್​ ಈ ರೀತಿ ಮ್ಯಾಗಜೀನ್‌ಗೆ ಬೆತ್ತಲಾಗಿ ಪೋಸ್​ ನೀಡಿ, ಆ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಆ ಮೂಲಕ ಮಕ್ಕಳ ಮೇಲೆ ಹಾಗೂ ಸಮಾಜದ ಮೇಲೆ ರಣ್‌ವೀರ್ ಸಿಂಗ್ ಕೆಟ್ಟ ಪರಿಣಾಮ ಬೀರಿದ್ದಾರೆ. ಇದರಿಂದ ಮಹಿಳೆಯರ ಸಭ್ಯತೆಗೂ ಧಕ್ಕೆ ಆಗಿದೆ' ಎಂದು ತಿಳಿಸಿದ್ದಾರೆ.

  Recommended Video

  Salman Khan and Kiccha Sudeep dance | 'ರಾ ರಾ ರಕ್ಕಮ್ಮ' ಹಾಡಿಗೆ ಸಲ್ಮಾನ್ ಖಾನ್ ಡ್ಯಾನ್ಸ್ *Press Meet
  English summary
  Mumbai Police Register FIR Against Actor Ranveer Singh For Sharing Nude Pics On Instagram. Know More.
  Tuesday, July 26, 2022, 16:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X