For Quick Alerts
  ALLOW NOTIFICATIONS  
  For Daily Alerts

  ಬೆತ್ತಲಾಗಿ ಫೋಸು ಕೊಟ್ಟ ರಣ್ವೀರ್ ಸಿಂಗ್‌ ವಿರುದ್ಧ ಎಫ್‌ಐಆರ್

  |

  ನಟ ರಣ್ವೀರ್ ಸಿಂಗ್ ಬೆತ್ತಲೆ ಫೋಸು ಇನ್ನೂ ಸುದ್ದಿಯಲ್ಲಿದೆ. ಕಳೆದ ತಿಂಗಳು, ಮ್ಯಾಗಜೀನ್ ಒಂದಕ್ಕಾಗಿ ರಣ್ವೀರ್ ಸಿಂಗ್ ಬೆತ್ತಲಾಗಿ ಫೋಸು ನೀಡಿದ್ದರು. ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಹಲವರು ರಣ್ವೀರ್‌ ಅನ್ನು ಟೀಕಿಸಿದರೆ, ಇನ್ನು ಕೆಲವರು ಅದು ಅವರಿಷ್ಟ ಬಿಡಿ ಎಂದಿದ್ದರು.

  ರಣ್ವೀರ್ ಸಿಂಗ್‌ ಬೆತ್ತಲಾಗಿ ಫೋಸು ಕೊಟ್ಟಿದ್ದರ ವಿರುದ್ಧ ದೂರುಗಳು ಸಹ ದಾಖಲಾಗಿದ್ದವು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ರಣ್ವೀರ್‌ ಸಿಂಗ್‌ಗೆ ಸಮನ್ಸ್‌ ಜಾರಿ ಮಾಡಿದ್ದಾರೆ.

  ಶುಕ್ರವಾರದಂದು ಮುಂಬೈ ಪೊಲೀಸರು ರಣ್ವೀರ್ ಸಿಂಗ್‌ರ ಮುಂಬೈ ನಿವಾಸಕ್ಕೆ ತೆರಳಿ ಸಮನ್ಸ್ ನೀಡಿದ್ದಾರೆ. ಎನ್‌ಜಿಓಗೆ ಸಂಬಂಧಿಸಿದ ವಕೀಲೆಯೊಬ್ಬರು ರಣ್ವೀರ್ ಸಿಂಗ್ ವಿರುದ್ಧ ದೂರು ನೀಡಿದ್ದರು. ಅದರ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಇಂದು ಸಮನ್ಸ್ ನೀಡಿದ್ದಾರೆ.

  ಪೊಲೀಸರು ರಣ್ವೀರ್ ಸಿಂಗ್ ಮನೆಗೆ ಭೇಟಿ ನೀಡಿದಾಗ ಅಲ್ಲಿ ರಣ್ವೀರ್ ಸಿಂಗ್ ಇರಲಿಲ್ಲವಂತೆ. ಆದರೆ ರಣ್ವೀರ್ ಸಿಂಗ್‌ಗೆ ಸಮನ್ಸ್ ಜಾರಿ ಮಾಡಿರುವ ವಿಷಯವನ್ನು ಪೊಲೀಸರು ತಿಳಿಸಿದ್ದಾರೆ. ಹಾಗೂ ಅವರನ್ನು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.

  ರಣ್ವೀರ್ ಸಿಂಗ್ ಪೇಪರ್ ಹೆಸರಿನ ಮ್ಯಾಗಜಿನ್‌ಗಾಗಿ ಹೀಗೆ ಬೆತ್ತಲಾಗಿ ಫೋಸು ನೀಡಿದ್ದರು. ಬೆತ್ತಲಾಗಿದ್ದರೂ ಸಹ ಅವರ ಖಾಸಗಿ ಅಂಗಗಳು ಕಾಣದಂತೆ ಚಿತ್ರ ತೆಗೆಯಲಾಗಿತ್ತು. ಆ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಸೃಷ್ಟಿಸಿದೆ.

  ನಾನು ಇರೋದೇ ಹೀಗೆ, ಸಾವಿರ ಜನರ ನಡುವೆ ಬೇಕಾದರೂ ಬೆತ್ತಲಾಗಿ ಇರುತ್ತೀನಿ' ಅಂತೆಲ್ಲಾ ಹೇಳಿದ್ದ ರಣ್‌ವೀರ್‌ ಸಿಂಗ್‌, ನಾನು ಹಾಲಿವುಡ್‌ನ ಖ್ಯಾತ ಮಾಡೆಲ್, ನಟ ಬರ್ಟ್ ರೆನಾಲ್ಡ್ಸ್‌ ಅನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಅವರ ಗೌರವಾರ್ಥ ಹೀಗೆ ಬೆತ್ತಲಾಗಿ ಫೋಸು ನೀಡಿದ್ದೆ ಎಂದಿದ್ದರು.

  ಸಿನಿಮಾಗಳ ವಿಷಯಕ್ಕೆ ಬಂದರೆ ರಣ್ವೀರ್ ಸಿಂಗ್ ನಟನೆಯ ಕೊನೆಯ ಸಿನಿಮಾ 'ಜಯೇಶ್‌ ಭಾಯ್ ಜೋರ್ದಾರ್' ಬಾಕ್ಸ್‌ ಆಫೀಸ್‌ನಲ್ಲಿ ಧಾರುಣವಾಗಿ ಸೋಲು ಕಂಡಿದೆ. ಇದೀಗ ಅವರ ನಟನೆಯ 'ಸರ್ಕಸ್' ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಅದರ ಬಳಿಕ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ತೆರೆಗೆ ಬರಲಿದೆ. ತಮಿಳಿನ 'ಅನ್ನಿಯನ್' ಸಿನಿಮಾದ ಹಿಂದಿ ರೀಮೇಕ್‌ನಲ್ಲಿ ಸಹ ರಣ್ವೀರ್ ಸಿಂಗ್ ನಟಿಸುತ್ತಿದ್ದಾರೆ.

  English summary
  Mumbai police issued summons to actor Ranveer Singh over his indecent photoshoot. His pics went viral.
  Saturday, August 13, 2022, 22:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X