ನಿರ್ದೇಶಕ ಅನುರಾಗ್ ಕಶ್ಯಪ್‌ಗೆ ಸಮನ್ಸ್ ನೀಡಿದ ಮುಂಬೈ ಪೊಲೀಸ್

ನಟಿ ಪಾಯಲ್ ಘೋಷ್ ದೂರಿನ ಹಿನ್ನೆಲೆ ನಿರ್ದೇಶಕ ಅನುರಾಗ್ ಕಶ್ಯಪ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಗುರುವಾರ ಬೆಳಗ್ಗೆ 11 ಗಂಟೆಗೆ ವರ್ಸೋವಾ ಪೊಲೀಸ್ ಠಾಣೆಗೆ ಬಂದು ಹೇಳಿಕೆ ನೀಡುವಂತೆ ಸೂಚಿಸಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.

ಅನುರಾಗ್ ಕಶ್ಯಪ್ ನನಗೆ ಲೈಂಗಿಕ ಕಿರುಕುಳ ನೀಡಿದ್ದರು, ಅತ್ಯಾಚಾರಕ್ಕೆ ಯತ್ನಿಸಿ ಹಿಂಸಾಚಾರ ನೀಡಿದ್ದ ಎಂದು ಆರೋಪಿಸಿ ನಟಿ ಪಾಯಲ್ ಘೋಷ್ ದೂರು ದಾಖಲಿಸಿದ್ದಾರೆ. ಪಾಯಲ್ ಅವರ ದೂರಿನ ಹಿನ್ನೆಲೆ ಎಫ್ ಐ ಆರ್ ಸಹ ದಾಖಲಾಗಿದೆ.

Mumbai Police summons film director Anurag Kashyap

ಇತ್ತೀಚಿಗಷ್ಟೆ ನಟಿ ಪಾಯಲ್ ಘೋಷ್ ಮಹಾರಾಷ್ಟ್ರ ರಾಜ್ಯಾಪಾಲರನ್ನು ಭೇಟಿ ಮಾಡಿ ''ನನಗೆ ನ್ಯಾಯ ಕೊಡಿಸಿ'' ಎಂದು ಮನವಿ ಮಾಡಿದ್ದರು. ದೂರು ದಾಖಲಿಸಿ ವಾರಗಳೇ ಕಳೆದರೂ ಇದುವರೆಗೂ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದ್ದರು.

ಒಂದು ವೇಳೆ ಅನುರಾಗ್ ಕಶ್ಯಪ್ ಅವರನ್ನು ಬಂಧಿಸದೆ ಹೋದರೆ ನಾನು ಉಪವಾಸ ಸತ್ಯಾಗ್ರಹ ಕೂರುವುದಾಗಿ ಸಹ ಎಚ್ಚರಿಕೆ ನೀಡಿದ್ದರು. ಇನ್ನು ಕಶ್ಯಪ್ ವಿರುದ್ಧ ದೂರು ನೀಡಿರುವ ಹಿನ್ನೆಲೆ ನನಗೆ ಜೀವ ಬೆದರಿಕೆ ಇದೆ, 'ವೈ' ಶ್ರೇಣಿಯ ಭದ್ರತೆ ನೀಡಿ ಎಂದು ಸಹ ಸರ್ಕಾರಕ್ಕೆ ಮನವಿ ಮಾಡಿದ್ದರು.

Recommended Video

ರಶ್ಮಿಕಾ ಮಂದಣ್ಣ ಬೀಚ್ ವರ್ಕೌಟ್ | Filmibeat Kannada

More from Filmibeat

English summary
Mumbai Police summons film director Anurag Kashyap asking him to appear at Versova Police station tomorrow at 11 am.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X