»   » ಹುಡುಗರ ಮೈ ಬಿಸಿ ಮಾಡುವ ಪೂನಂ ಪಾಂಡೆಗೆ ಚಳಿ

ಹುಡುಗರ ಮೈ ಬಿಸಿ ಮಾಡುವ ಪೂನಂ ಪಾಂಡೆಗೆ ಚಳಿ

Posted By:
Subscribe to Filmibeat Kannada

ಒಂದಲ್ಲಾ ಒಂದು ವಿವಾದ ಕ್ರಿಯೇಟ್ ಮಾಡುವ ಬಿಚ್ಚಮ್ಮ ಪೂನಂ ಪಾಂಡೆಗೆ ಸದ್ಯಕ್ಕೆ ರಜೆ ಬೇಕಂತೆ. ಈಕೆಗ್ಯಾಕಪ್ಪಾ ರಜೆ ಅನ್ಕೊಂಡ್ರಾ...ಮುಂಬೈನಲ್ಲಿ ಸುರಿಯುತ್ತಿರುವ ಸಿಕ್ಕಾಪಟ್ಟೆ ಮಳೆ ಕಂಡು ಚಳಿಯಲ್ಲಿ ನಡುಗುತ್ತಿರುವ ನಟಿ ಪೂನಂ ಪಾಂಡೆ ರಜೆಗಾಗಿ ಹಂಬಲಿಸ್ತಾ ಇದ್ದಾರೆ.

ಮುಂಬೈ ಯಲ್ಲಿ ಸದ್ಯಕ್ಕೆ ವರುಣನ ಆರ್ಭಟ ಜೋರಾಗಿದೆ. ಮಳೆ-ಗಾಳಿ-ಚಳಿಗೆ ಹೆದರಿ ನಡುಗಿದ ಪೂನಂ ಪಾಂಡೆ ರಜಾ ಕೊಡಿ ಅಂತ ತಮ್ಮ ಟ್ವಿಟ್ಟರ್ ನಲ್ಲಿ ಅವಲತ್ತುಕೊಂಡಿದ್ದಾರೆ.[ಯೂನಿಫಾರ್ಮ್ ಬದಲಿಸಿದ ಸೆಕ್ಸ್ ಬಾಂಬ್ ಪೂನಂ]

Mumbai Rain; Poonam Pandey pleads for holiday

ಮಹಾನಗರಿಯಲ್ಲಿ ಇತ್ತೀಚೆಗೆ ಭಾರಿ ಮಳೆ ಸುರಿಯುತ್ತಿದ್ದು, ಜನ-ಜೀವನ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಮೈ ತುಂಬಾ ಬಟ್ಟೆ ಹಾಕಿಕೊಳ್ಳುವ ನಮ್ಮಂಥವರಿಗೇ ಚಳಿ ಸಹಿಸಲಸಾಧ್ಯ. ಅಂತಹುದರಲ್ಲಿ ನಮ್ಮ ಬಿಚ್ಚಮ್ಮ ಪೂನಂ ಪಾಂಡೆಗೆ ಬಟ್ಟೆ ಎಂದರೆ ಅಲರ್ಜಿ. ಹೀಗಿರುವಾಗ ಅದು ಹೇಗೆ ಮ್ಯಾನೇಜ್ ಮಾಡ್ತಾರೋ, ನೀವೇ ಊಹಿಸಿ[ಮಾಲಿನಿ ಅವತಾರದಲ್ಲಿ ನಶೆಯೇರಿಸುತ್ತಿರುವ ಪೂನಂ]

''ಮಂಚ ಮತ್ತು ಬೆಚ್ಚನೆಯ ಹೊದಿಕೆ, ಕಿಟಕಿಯ ಹತ್ತಿರ ಹೋಗಿ ನೋಡಿದರೆ ಎಷ್ಟು ಮಳೆ ಸುರಿಯುತ್ತಿದೆ ಅಂತ ಗೊತ್ತಾಗುತ್ತೆ. ಆದ್ರೆ ಅದು ಅಸಾಧ್ಯ. ಪ್ಲೀಸ್ ಯಾರಾದ್ರೂ ರಜೆ ಡಿಕ್ಲೇರ್ ಮಾಡಿ'' ಅಂತ ಪೂನಂ ಪಾಂಡೆ ಟ್ವೀಟ್ ಮಾಡಿದ್ದಾರೆ.[ಪೂನಂ ಪಾಂಡೆ ಹಾಟ್ ಮಸಾಜ್ ಐಟಂ ಸಾಂಗ್!]

ಅಷ್ಟಕ್ಕೂ ಪೂನಂ ರಜೆ ಬೇಕು ಎಂದು ಯಾಕೆ ಕೇಳಿದ್ದಾರೋ ಗೊತ್ತಿಲ್ಲ. ಬಾಲಿವುಡ್ ಬೆಡಗಿಯರಲ್ಲಿ ಬಟ್ಟೆ ಎಂದರೆ ವೈರಾಗ್ಯದ ಮಾತನ್ನಾಡುವ ಪೂನಂ ಬಾಯಿಂದಲೂ ಚಳಿ ಎಂದು ಹೇಳಿಸಿದ ಮಳೆರಾಯನ ಸಾಧನೆ ಮೆಚ್ಚಲೇಬೇಕು.

English summary
Heavy Rain lashes Mumbai City and Bollywood Actress cum Model Poonam Pandey pleads for Holiday due to cloudy weather.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada