ಕದ್ದು ಮುಚ್ಚಿ ಎರಡನೇ ಮದುವೆಯಾದ ಬಿಗ್ ಬಾಸ್ ವಿನ್ನರ್...?
ಮುನಾವರ್ ಫಾರುಕಿ.. ಒಂದಿಲ್ಲೊಂದು ವಿವಾದಗಳಿಂದ ಸದ್ದು ಮಾಡುವ ವ್ಯಕ್ತಿ. ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಹಿಂದಿಯ ಬಿಗ್‌ಬಾಸ್ ಶೋನಲ್ಲಿಯೂ ಭಾಗಿಯಾಗಿ ವಿಜೇತನಾಗಿಯೂ ಹೊರ ಹೊಮ್ಮಿದ ಮುನಾವರ್, ಸದ್ಯಕ್ಕೆ.. ಸದ್ದಿಲ್ಲದೇ ಎರಡನೇ ಮದುವೆಯಾಗಿದ್ದಾರೆ. ಹೀಗೊಂದು ಸುದ್ದಿ ಸದ್ಯಕ್ಕೆ ಗುಲ್ಲಾಗಿದೆ.
ಹೌದು, ಹೆಚ್ಚೇನ್ ಇಲ್ಲ.. ಎರಡು ದಿನದ ಹಿಂದೆಯಷ್ಟೇ ಮುನಾವರ್ ಫಾರುಕಿ, ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಅನ್ನುವ ಸುದ್ದಿ ಹಬ್ಬಿತ್ತು. ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ಫೋಟೋ ಕೂಡ ಒಂದು ವೈರಲ್ ಆಗಿತ್ತು. ಆದರೆ ಈಗ ಮೊದಲ ಹೆಂಡ್ತಿಯಿಂದ ವಿಚ್ಛೇದನ ಪಡೆದು ದೂರವಾಗಿದ್ದ ಮುನಾವರ್ ತುಂಬಾನೇ ಗೌಪ್ಯವಾಗಿ ಎರಡನೇ ಮದುವೆಯಾಗಿದ್ದಾರೆ ಅನ್ನುವ ಸುದ್ದಿ ಹಬ್ಬಿದೆ. ಈ ಕಾರಣಕ್ಕೆ ಮುನಾವರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಯಾವಾಗ, ಮದುವೆಯಾಗಿದ್ದು ಯಾವಾಗ ಅನ್ನುವ ಪ್ರಶ್ನೆ ಹಿಂದಿಯ ಬಿಗ್ ಬಾಸ್ ನಲ್ಲಿ ಇವರಿಗೆ ಮತ ಹಾಕಿದವರನ್ನ ಈಗ ಕಾಡುತ್ತಿದೆ

ಮುಂಬೈನ ಐಟಿಸಿದಲ್ಲಿ ಮುನಾವರ್ ಮದುವೆಯಾದ ಸುದ್ದಿ ಇದೆ. ಇನ್ನೂ ಮೇಕಪ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿರುವ ಮೆಹಜಬೀನ್ ಕೊತ್ವಾಲಾ ಇವರ ಎರಡನೇ ಪತ್ನಿಯ ಹೆಸರು. ಇದು ನಿಜಾನಾ..? ಖುದ್ದು ಮುನಾವರ್ ಅವರೇ ಹೇಳಬೇಕಾದರೂ ಇವರ ಮದುವೆಯಲ್ಲಿ ಕಿರುತೆರೆಯ ನಾಯಕಿ ಹೀನಾ ಖಾನ್ ಭಾಗಿಯಾಗಿದ್ದರು ಎಂಬ ಮಾತು ಕೂಡ ಇದೇ ಸಮಯದಲ್ಲಿ ಕೇಳಿ ಬರುತ್ತಿದೆ. ಹೀಗಾಗಿಯೇ.. ಮುಂಬೈನಲ್ಲಿ ಅನೇಕರು ಹೀನಾ ಖಾನ್ ಬೆನ್ನ ಹಿಂದೆ ಬಿದ್ದಿದ್ದಾರೆ. ಮುನಾವರ್ ಮದುವೆ ಕಥೆಯನ್ನ ಹೇಳಿ ಎನ್ನುತ್ತಿದ್ದಾರೆ
ಉಳಿದಂತೆ ಮುನಾವರ್ ಫಾರುಕಿ ಹಿಂದೆಯೆಲ್ಲ ಹೆಸರು ಮಾಡಿದ್ದು ಸ್ಟಾಂಡಪ್ ಕಾಮಿಡಿಯಿಂದ. ಆ ಕಾಲದಲ್ಲಿ ಇವರ ಹಾಸ್ಯಪ್ರಜ್ಞೆ.. ಜಾಣ್ಮೆ.. ಮಾನವೀಯ ಗುಣಕ್ಕೆ.. ಅನೇಕರು ಮನ ಸೋತಿದ್ದರು. ಆದರೆ, ಆ ನಂತರ ಕಾಲ ಉರುಳಿದಂತೆ ಜನಪ್ರಿಯತೆಯ ಅಲೆಯ ಮೇಲೇರಿ ಹಾರಾಡಲು ಶುರು ಮಾಡಿದ ಮುನಾವರ್ ಬಿಗ್ ಬಾಸ್ ನಂತರ ಸದ್ದು ಮಾಡುತ್ತಿರುವುದು ಕೇವಲ ವಿವಾದಗಳಿಂದ ಮಾತ್ರ.

ಇಂಥ ಮುನಾವರ್ 2017ರಲ್ಲಿ ಜಾಸ್ಮಿನ್ ಜೊತೆ ಮದುವೆಯಾದರು. ಆದರೆ ಈ ಸಂಬಂಧ ಐದು ವರ್ಷ ಕೂಡ ಉಳಿಯಲಿಲ್ಲ. 2022ರಲ್ಲಿ ಜಾಸ್ಮಿನ್ ಅವರಿಂದ ದೂರವಾದರು ಮುನಾವರ್. ಅಲ್ಲಿಂದಾಚೆ.. ಇವರ ಎರಡನೇ ಮದುವೆಯ ಬಗ್ಗೆ ಕುತೂಹಲ ಅನೇಕರಲ್ಲಿತ್ತು. ಅವರಿವರ ಜೊತೆ ಹೆಸರು ಥಳುಕು ಹಾಕಿಕೊಂಡಿತ್ತು. ಆದರೆ ಈಗ ಮುನಾವರ್ ಫಾರುಕಿ ಕದ್ದು ಮುಚ್ಚಿ ಮದುವೆಯಾಗಿದ್ದಾರೆ ಅನ್ನುವ ಸುದ್ದಿ ಸದ್ಯಕ್ಕೆ ಎಲ್ಲೆಡೆ ಕೇಳಿ ಬರುತ್ತಿದೆ. ಮುನಾವರ್ ಆಗಲಿ ಅವರ ಕುಟುಂಬದರವಾಗಲಿ ಈ ಸುದ್ದಿಯನ್ನ ಒಪ್ಪಿಕೊಂಡಿಲ್ಲ.


Click it and Unblock the Notifications











