For Quick Alerts
  ALLOW NOTIFICATIONS  
  For Daily Alerts

  ಯಾರಿದು ಮುನ್‌ಮುನ್‌ ದತ್? ಆಕೆಯನ್ನು ಬಂಧಿಸುವಂತೆ ಟ್ರೆಂಡ್ ಏಕೆ?

  |

  ಜಾತಿ ನಿಂದನೆ ಮಾಡಿರುವ ನಟಿ ಮುನ್‌ಮುನ್ ದತ್ತ ಅನ್ನು ಬಂಧಿಸಬೇಕು ಎಂಬ ಒತ್ತಾಯ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಕೇಳಿಬರುತ್ತಿದೆ.

  ಕೆಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ ಮುನ್‌ಮುನ್‌ ದತ್ತ ನಿನ್ನೆಯಷ್ಟೆ ಸಾಮಾಜಿಕ ಜಾಲತಾಣದಲ್ಲಿ ಲೈವ್‌ ಬಂದು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದರು.

  ತಮ್ಮ ಸೌಂದರ್ಯ ಹಾಗೂ ತಾವು ಮಾಡಿಕೊಳ್ಳುವ ಮೇಕಪ್‌ ಬಗ್ಗೆ ಮಾತನಾಡುತ್ತಾ, 'ನಾನು ಯೂಟ್ಯೂಬ್‌ನಲ್ಲಿ ಬರುತ್ತಿದ್ದೇನೆ ಆದ್ದರಿಂದ ತುಸು ಮೇಕಪ್‌ ಮಾಡಿಕೊಂಡಿದ್ದೇನೆ ನನಗೆ ಆ ಜಾತಿಯವರಂತೆ ಕಾಣಲು ಇಷ್ಟವಿಲ್ಲ' ಎಂದಿದ್ದರು. ವಿಡಿಯೋದಲ್ಲಿ ಅವರು ಒಂದು ಜಾತಿಯ ಹೆಸರು ಹೇಳಿದ್ದರು.

  ಮುನ್‌ಮುನ್‌ ದತ್ತ ಅವರು ಜಾತಿ ನಿಂದನೆ ಮಾಡಿದ ವಿಡಿಯೋ ಇದೀಗ ಟ್ವಿಟ್ಟರ್‌ ಹಾಗೂ ಇತರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜಾತಿನಿಂದನೆ ಮಾಡಿರುವ ಮುನ್‌ಮುನ್‌ ದತ್ತ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.

  ತಪ್ಪು ಅರಿವಾಗುತ್ತಿದ್ದಂತೆ ನಟಿ ಮುನ್‌ಮುನ್‌ ದತ್ತ ತಮ್ಮ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ಆದರೂ ಸಹ ಕೆಲವರು ವಿಡಿಯೋ ರೆಕಾರ್ಡ್ ಮಾಡಿಕೊಂಡು ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ತಮ್ಮ ಪ್ರಮಾದದ ಬಗ್ಗೆ ಸ್ಪಷ್ಟನೆ ನೀಡಿರುವ ಮುನ್‌ಮುನ್‌ ದತ್ತ, 'ನನಗೆ ಆ ಪದದ ಅರ್ಥ ಗೊತ್ತಿರಲಿಲ್ಲ. ಯಾರನ್ನೊ ನೋಯಿಸಬೇಕು, ನಿಂದಿಸಬೇಕು ಎಂಬ ಉದ್ದೇಶದಿಂದ ನಾನು ಆ ಪದ ಬಳಕೆ ಮಾಡಿಲ್ಲ. ಎಲ್ಲ ಜಾತಿಯ, ಲಿಂಗದವರ ಬಗ್ಗೆ ನನಗೆ ಗೌರವವಿದೆ. ನನ್ನ ಮಾತಿನಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮಿಸಿ' ಎಂದಿದ್ದಾರೆ ನಟಿ.

  Ragini Dwivedi, Corona Vaccination ಹಾಕಿಸಿಕೊಂಡ್ಮೇಲೆ ಏನಾಗುತ್ತೆ?ಎಲ್ಲೆಲ್ಲಿ ಸಿಗುತ್ತೆ ವ್ಯಾಕ್ಸಿನೇಷನ್?

  ಜನಪ್ರಿಯ ಧಾರಾವಾಹಿ 'ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ' ಧಾರಾವಾಹಿಯಲ್ಲಿ ಮುನ್‌ಮುನ್‌ ದತ್ತ ಪ್ರಮುಖ ಮಹಿಳಾ ಪಾತ್ರಧಾರಿಯಾಗಿದ್ದಾರೆ.

  English summary
  Tarak Mehta Ka Ulta Chashma actress Munmun Dutta used casteist slur in her recent video. People demanding to arrest her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X