ಸಲ್ಮಾನ್ ಖಾನ್ ನಟನೆಯ 'ಭಜರಂಗಿ ಭಾಯಿಜಾನ್'ನ ಮುನ್ನಿ ಈಗ ಹೇಗಿದ್ದಾರೆ ನೋಡಿ

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅಭಿನಯದ 'ಭಜರಂಗಿ ಭಾಯಿಜಾನ್' ಸಿನಿಮಾ ರಿಲೀಸ್ ಆಗಿ 5 ವರ್ಷಗಳಾಗಿದೆ. 2015ರಲ್ಲಿ ರಿಲೀಸ್ ಆದ ಈ ಸಿನಿಮಾ ಭಾರತದಲ್ಲಿ ಸುಮಾರು 4200 ಚಿತ್ರಮಂದಿರಗಳಲ್ಲಿ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 700 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಭಾರತೀಯ ಸಿನಿಮಾರಂಗದಲ್ಲಿ ದಾಖಲೆ ಬರೆದ ಭಜರಂಗಿ ಭಾಯಿಜಾನ್ ಸಿನಿಮಾದ ಭಾವುಕ ಕಥೆಗೆ ಅಭಿಮಾನಿಗಳು ಫಿದಾ ಆಗಿದ್ದರು.

ಕಬೀರ್ ಖಾನ್ ನಿರ್ದೇಶನದಲ್ಲಿ ಮೂಡಿಬಂದ ಭಜರಂಗಿ ಭಾಯಿಜಾನ್ ಸಿನಿಮಾದಲ್ಲಿ ಹನುಮಾನ್ ಭಕ್ತನೊಬ್ಬ ಪಾಕಿಸ್ತಾನದಿಂದ ಕಾಣೆಯಾಗಿ ಭಾರತಕ್ಕೆ ಬಂದ ಪುಟ್ಟ ಹುಡುಗಿಯನ್ನು ಮರಳಿ ಪೋಷಕರ ಬಳಿ ಸೇರಿಸುವ ಕಥೆ ಇದೆ. ಈ ಭಾವುಕ ಕಥೆಗೆ ಚಿತ್ರಪ್ರೇಕ್ಷಕರು ಮನಸೋತಿದ್ದರು.

ಸಲ್ಮಾನ್ ಖಾನ್‌ಗೆ ಮೇಲೆ ಸಿನಿಮಾ ಪ್ರದರ್ಶಕರ ಮುನಿಸು; ಬಹಿರಂಗ ಪತ್ರ

ಪಾಕಿಸ್ತಾನದಿಂದ ಕಾಣೆಯಾಗಿ ಭಾರತಕ್ಕೆ ಬಂದ ಪುಟ್ಟ ಹುಡುಗಿಯ ಪಾತ್ರದಲ್ಲಿ ಹರ್ಷಾಲಿ ಮಲ್ಹೋತ್ರಾ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಮುನ್ನಿಯಾಗಿ ಹರ್ಷಾಲಿ ಮಿಂಚಿದ್ದರು. ಇದೀಗ ಹರ್ಷಾಲಿ ಮಲ್ಹೋತ್ರಾ ಹೇಗಾಗಿದ್ದಾರೆ ಗೊತ್ತಾ? ಸುಮಾರು 5 ವರ್ಷಗಳ ಬಳಿಕ ಹರ್ಷಾಲಿ ಸಾಮಾಜಿಕ ಜಾಲತಾಣದಲ್ಲಿ ಮುನ್ನಿ ನೋಡಿ ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ.

Munni From Salman Khans Bajrangi Bhaijaan Is All Grown Up

ಹರ್ಷಾಲಿ ದೀಪಾವಳಿಯ ಹಬ್ಬದ ವಿಶೇಷವಾಗಿ ಫೋಟೋಶೂಟ್ ಮಾಡಿಸಿದ್ದು, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಪುಟ್ಟ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಹರ್ಷಾಲಿ ಈಗ ಎತ್ತರಕ್ಕೆ ಬೆಳೆದಿದ್ದಾರೆ. ಹರ್ಷಾಲಿ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

Munni From Salman Khans Bajrangi Bhaijaan Is All Grown Up

ಕೆಂಪು ಬಣ್ಣದ ಸಲ್ವಾರ್ ಧರಿಸಿರುವ ಹರ್ಷಾಲಿ ದೀಪಬೆಳಗುತ್ತಾ ಎಲ್ಲರಿಗೂ ದೀಪಾವಳಿಯ ಶುಭಾಶಯ ತಿಳಿಸಿದ್ದಾರೆ. ಬಾಲನಟಿಯಾಗಿ ಭಜರಂಗಿ ಭಾಯಿಜಾನ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟಿದ್ದರು. ಬಳಿಕ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜಾಹೀರಾತುಗಳಲ್ಲೂ ಮಿಂಚಿದ್ದಾರೆ.

More from Filmibeat

English summary
Munni from Salman Khan's Bajrangi Bhaijaan is all grown up.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X