ಎರಡನೇ ಮದುವೆ ಆದ 45 ವರ್ಷದ ಗಾಯಕ ಹಿಮೇಶ್ ರೇಶಮ್ಮಿಯಾ
ಬಾಲಿವುಡ್ ನಲ್ಲಿ ಸದ್ಯ ಮದುವೆ ಸಂಭ್ರಮ ಜೋರಾಗಿದೆ. ಮೊನ್ನೆ ಮೊನ್ನೆಯಷ್ಟೇ ಧಾಂ ಧೂಂ ಆಗಿ ನಡೆದ ವಿವಾಹ ಮಹೋತ್ವವದಲ್ಲಿ ನಟಿ ಸೋನಂ ಕಪೂರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇನ್ನೂ ನಿನ್ನೆಯಷ್ಟೇ ಬಾಲಿವುಡ್ ನಟಿ ನೇಹಾ ಧೂಪಿಯಾ ಹಾಗೂ ನಟ ಅಂಗದ್ ಸಿಂಗ್ ಬೇಡಿ ಕೂಡ ಹೊಸ ಜೀವನಕ್ಕೆ ಅಡ್ಡಿಯಿಟ್ಟರು. ಇದೀಗ ಬಾಲಿವುಡ್ ಗಾಯಕ, ಸಂಗೀತ ಸಂಯೋಜಕ, ನಟ ಹಿಮೇಶ್ ರೇಶಮ್ಮಿಯಾ ಕೂಡ ಸೀಕ್ರೆಟ್ ಆಗಿ ಎರಡನೇ ಮದುವೆ ಆಗಿದ್ದಾರೆ ಎಂದು ಸುದ್ದಿ ಬಿಟೌನ್ ಗಲ್ಲಿಗಳಲ್ಲಿ ಹರಿದಾಡುತ್ತಿದೆ.
ಮುಂಬೈನಲ್ಲಿ ಇರುವ ತಮ್ಮ ಅಪಾರ್ಟ್ ಮೆಂಟ್ ನಲ್ಲಿಯೇ ಇಂದು ಸೋನಿಯಾ ಕಪೂರ್ ಎಂಬುವರನ್ನು ಹಿಮೇಶ್ ರೇಶಮ್ಮಿಯಾ ವರಿಸಿದ್ದಾರೆ ಎಂದು 'ಬಾಲಿವುಡ್ ಬಬಲ್' ವರದಿ ಮಾಡಿದೆ.

ಮೆಹಂದಿ ಸಮಾರಂಭ ಮೇ 9 ರಂದು ನೆರವೇರಿದ್ದು, ಇಂದು ಮದುವೆ ನಡೆದಿದೆ. ತಮ್ಮ ಎರಡನೇ ಮದುವೆಗೆ ಆಪ್ತರಿಗಷ್ಟೇ ಹಿಮೇಶ್ ರೇಶಮ್ಮಿಯಾ ಆಹ್ವಾನ ನೀಡಿದ್ದರು ಎನ್ನಲಾಗಿದೆ.
ಕೆಲಕಾಲದಿಂದ ಲಿವ್-ಇನ್ ರಿಲೇಶನ್ ಶಿಪ್ ನಲ್ಲಿದ್ದ ಸೋನಿಯಾ ಕಪೂರ್ ಹಾಗೂ ಹಿಮೇಶ್ ರೇಶಮ್ಮಿಯಾ ಇಂದು ವಿವಾಹ ಮಾಡಿಕೊಂಡಿದ್ದಾರೆ.
ತಮಗೆ 21 ವರ್ಷ ವಯಸ್ಸಾಗಿದ್ದಾಗ, ಕೋಮಲ್ ಎಂಬುವರನ್ನು ಮದುವೆ ಆಗಿದ್ದ ಹಿಮೇಶ್ ರೇಶಮ್ಮಿಯಾಗೆ ಸ್ವಯಂ ಎಂಬ ಪುತ್ರನಿದ್ದಾನೆ. 22 ವರ್ಷಗಳ ತಮ್ಮ ದಾಂಪತ್ಯ ಜೀವನವನ್ನ ಹಿಮೇಶ್ ರೇಶಮ್ಮಿಯಾ-ಕೋಮಲ್ ಕಳೆದ ವರ್ಷ ಅಂತ್ಯಗೊಳಿಸಿದ್ದರು.
ಹಿಮೇಶ್ ರೇಶಮ್ಮಿಯಾ ಹಾಗೂ ಕೋಮಲ್ ಮದುವೆ ಮುರಿದು ಬೀಳಲು ಸೋನಿಯಾ ಕಾರಣ ಅಂತ ಬೆಟ್ಟು ಮಾಡಿ ತೋರಿಸುವವರೂ ಇದ್ದಾರೆ.


Click it and Unblock the Notifications











