For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಚಿತ್ರಗಳಿಂದ ಹೆಸರಾಗಿದ್ದ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ ನಿಧನ

  |

  ಹಿಂದಿ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ವಾಜಿದ್ ಖಾನ್ (42) ಸೋಮವಾರ ನಸುಕಿನಲ್ಲಿ ನಿಧನರಾದರು. ಸಾಜಿದ್- ವಾಜಿದ್ ಸಹೋದರ ಜೋಡಿಯ ಸಂಗೀತ ನಿರ್ದೇಶನ ಬಾಲಿವುಡ್‌ನಲ್ಲಿ ಮನೆ ಮಾತಾಗಿತ್ತು. ಅವರಲ್ಲಿ ವಾಜಿದ್ ಅವರ ಹಠಾತ್ ನಿರ್ಗಮನ ಬಾಲಿವುಡ್‌ಗೆ ಆಘಾತ ಮೂಡಿಸಿದೆ.

  ಬಾಲಿವುಡ್ ನ ಖ್ಯಾತ ಮ್ಯೂಸಿಕ್ ಕಂಪೋಸರ್ ವಾಜಿದ್ ಖಾನ್ ನಿಧನ | Wajid Khan Passed Away | Music Composer

  ಮೂತ್ರಪಿಂಡದ ಸೋಂಕಿನ ಕಾರಣದಿಂದ ಮುಂಬೈನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ಅವರಲ್ಲಿ ಕೆಲವು ದಿನಗಳ ಹಿಂದೆ ಕೊರೊನಾ ವೈರಸ್ ಪಾಸಿಟಿವ್ ಕೂಡ ಪತ್ತೆಯಾಗಿತ್ತು. ಸಲ್ಮಾನ್ ಖಾನ್ ಚಿತ್ರಗಳಿಗೆ ಸಾಜಿದ್-ವಾಜಿದ್ ಜೋಡಿಯ ಸಂಗೀತ ನಿರ್ದೇಶನ ಕಾಯಂ ಆಗಿತ್ತು. ಬಾಲಿವುಡ್‌ನಲ್ಲಿ ಅನೇಕ ಹಿಟ್ ಹಾಡುಗಳನ್ನು ನೀಡಿದ್ದಾರೆ. ಮುಂದೆ ಓದಿ...

  ವೆಂಟಿಲೇಟರ್‌ನಲ್ಲಿ ಇದ್ದರು

  ವೆಂಟಿಲೇಟರ್‌ನಲ್ಲಿ ಇದ್ದರು

  ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ವಾಜಿದ್ ಖಾನ್ ಅವರನ್ನು ಕೆಲವು ದಿನಗಳ ಹಿಂದೆ ಚೆಂಬೂರ್‌ನ ಸುರಾನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ದೇಹದಲ್ಲಿ ಬಹು ಅಂಗಾಂಗ ವೈಫಲ್ಯ ಸಮಸ್ಯೆ ಉಂಟಾಗಿತ್ತು. ಅವರಿಗೆ ಕೆಲವು ಸಮಯಗಳ ಹಿಂದೆ ಕಿಡ್ನಿ ಕಸಿ ಕೂಡ ಮಾಡಲಾಗಿತ್ತು. ಇತ್ತೀಚೆಗೆ ಕಿಡ್ನಿ ಸೋಂಕಿನ ತೊಂದರೆ ಕಾಣಿಸಿಕೊಂಡಿತ್ತು. ನಾಲ್ಕು ದಿನಗಳಿಂದ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರ ಅನಾರೋಗ್ಯದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತ್ತು ಎಂದು ಸಂಗೀತ ನಿರ್ದೇಶಕ ಸಲೀಮ್ ಮರ್ಚೆಂಟ್ ಮಾಹಿತಿ ನೀಡಿದ್ದಾರೆ.

  'ಮತ್ತೆ ಸಿಗೋಣ, ಮಾತನಾಡೋಣ...': ಇರ್ಫಾನ್ ಖಾನ್ ನೆನಪಲ್ಲಿ ಪತ್ನಿಯ ಹೃದಯಸ್ಪರ್ಶಿ ಬರಹ'ಮತ್ತೆ ಸಿಗೋಣ, ಮಾತನಾಡೋಣ...': ಇರ್ಫಾನ್ ಖಾನ್ ನೆನಪಲ್ಲಿ ಪತ್ನಿಯ ಹೃದಯಸ್ಪರ್ಶಿ ಬರಹ

  1998ರಲ್ಲಿ ಪಾದಾರ್ಪಣೆ

  1998ರಲ್ಲಿ ಪಾದಾರ್ಪಣೆ

  1998ರಲ್ಲಿ ಸಲ್ಮಾನ್ ಖಾನ್ ನಟಿಸಿದ್ದ 'ಪ್ಯಾರ್ ಕಿಯಾ ತೋ ಡರ್ನಾ ಕ್ಯಾ' ಚಿತ್ರದ ಮೂಲಕ ಸಾಜಿದ್-ವಾಜಿದ್ ಜೋಡಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿತ್ತು. ಅಲ್ಲಿಂದ ಸಲ್ಮಾನ್ ಖಾನ್ ಅವರ ಬಹುತೇಕ ಸಿನಿಮಾಗಳಿಗೆ ಅವರೇ ಸಂಗೀತ ನೀಡಿದ್ದರು.

  ಬ್ಲಾಕ್ ಬಸ್ಟರ್ ಹಿಟ್ ಹಾಡುಗಳು

  ಬ್ಲಾಕ್ ಬಸ್ಟರ್ ಹಿಟ್ ಹಾಡುಗಳು

  ಗರ್ವ್, ಮುಝ್ಸೆ ಶಾದಿ ಕರೋಗಿ, ಚೋರಿ ಚೋರಿ, ಹೆಲೋ ಬ್ರದರ್, ವಾಂಟೆಡ್, ತೇರೇ ನಾಮ್, ತುಮ್ಕೋ ನಾ ಭೂಲ್ ಪಾಯೇಂಗೆ, ಪಾರ್ಟ್ನರ್, ದಬಾಂಗ್ ಸರಣಿಯ ಸಿನಿಮಾಗಳಿಗಾಗಿ ಸಲ್ಮಾನ್ ಜತೆ ಕೆಲಸ ಮಾಡಿದ್ದರು. ಇತ್ತೀಚೆಗಷ್ಟೇ ಸಲ್ಮಾನ್ ಅವರ ಭಾಯಿ ಭಾಯಿ, ಪ್ಯಾರ್ ಕರೋನಾ ಮುಂತಾದ ಹಾಡುಗಳಿಗೆ ಸಂಗೀತ ನೀಡಿದ್ದರು. ವಾಜಿದ್ ಉತ್ತಮ ಗಾಯಕರೂ ಆಗಿದ್ದು, ಮೇರಾ ಹೆ ಜವಾ. ಫೆವಿಕಾಲ್ ಸೆ, ಚಿಂತಾ ಚಿತಾ ಚಿತಾ, ಹುದ್ ಹುದ್ ದಬಾಂಗ್ ಮುಂತಾದ ಹಾಡುಗಳನ್ನು ಹಾಡಿದ್ದಾರೆ.

  ಬಾಲಿವುಡ್‌ನ ಹಿರಿಯ ಗೀತರಚನೆಕಾರ ಯೋಗೇಶ್ ಗೌರ್ ನಿಧನಬಾಲಿವುಡ್‌ನ ಹಿರಿಯ ಗೀತರಚನೆಕಾರ ಯೋಗೇಶ್ ಗೌರ್ ನಿಧನ

  ಐಪಿಎಲ್ ಹಾಡು

  ಐಪಿಎಲ್ ಹಾಡು

  ಸಾಜಿದ್ ಮತ್ತು ವಾಜಿದ್ ಸಹೋದರರು ಸರಿಗಮಪ 2012 ಮತ್ತು ಸರಿಗಮಪ ಸಿಂಗಿಂಗ್ ಸೂಪರ್ ಸ್ಟಾರ್ ರಿಯಾಲಿಟಿ ಶೋ ಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. ಐಪಿಎಲ್4ರ ಆವೃತ್ತಿಯ ಧೂಮ್ ಧೂಮ್ ಧೂಮ್ ಧಡಕ ಹಾಡನ್ನು ಈ ಸಹೋದರರು ಸಂಯೋಜಿಸಿದ್ದರು. ಈ ಹಾಡನ್ನು ವಾಜಿದ್ ಹಾಡಿದ್ದರು.

  ಪ್ರಿಯಾಂಕಾ ಸಂತಾಪ

  ಪ್ರಿಯಾಂಕಾ ಸಂತಾಪ

  ವಾಜಿದ್ ನಿಧನಕ್ಕೆ ನಟಿ ಪ್ರಿಯಾಂಕಾ ಚೋಪ್ರಾ ಆಘಾತ ವ್ಯಕ್ತಪಡಿಸಿದ್ದಾರೆ. 'ಕೆಟ್ಟ ಸುದ್ದಿ. ವಾಜಿದ್ ಭಾಯ್ ಅವರ ನಗುವನ್ನು ನಾನು ಎಂದಿಗೂ ನೆನಪಿಸಿಕೊಳ್ಳುತ್ತೇನೆ. ಯಾವಾಗಲೂ ನಗುತ್ತಿದ್ದರು. ಬಹು ಬೇಗನೆ ಹೊರಟು ಹೋದಿರಿ. ಅವರ ಕುಟುಂಬ ಮತ್ತು ದುಃಖದಲ್ಲಿರುವ ಪ್ರತಿಯೊಬ್ಬರಿಗೂ ನನ್ನ ಸಂತಾಪಗಳು ಎಂದು ಪ್ರಿಯಾಂಕಾ ಹೇಳಿದ್ದಾರೆ.

  ಕಿರುತೆರೆ ನಟಿ ಆತ್ಮಹತ್ಯೆಗೆ ಕಾರಣವೇನು?: ಮಗಳ ಶವ ನೋಡಿದ ತಂದೆಯ ಭಾವುಕ ಮಾತುಕಿರುತೆರೆ ನಟಿ ಆತ್ಮಹತ್ಯೆಗೆ ಕಾರಣವೇನು?: ಮಗಳ ಶವ ನೋಡಿದ ತಂದೆಯ ಭಾವುಕ ಮಾತು

  English summary
  Singer and music composer Wajid Khan of Sajid-Wajid duo was died on Monday early hours due to kidney ailments and Covid 19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X