ಕುಂಭಮೇಳಕ್ಕೆ ಹೋಗಿ ಬಂದ ನಂತರ ಶ್ರವಣ್ ರಾಥೋಡ್‌ಗೆ ಕೊರೊನಾ

ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್‌ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಕಳೆದ ಮೂರು ದಿನಗಳಿಂದಲೂ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಶ್ರವಣ್ ರಾಥೋಡ್ ಅವರನ್ನು ಮುಂಬೈನ ಎಸ್‌ ಎಲ್ ರಹೇಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಅಂದ್ಹಾಗೆ, ವಿಶ್ವವಿಖ್ಯಾತ ಕುಂಭಮೇಳಕ್ಕೆ ಶ್ರವಣ್ ರಾಥೋಡ್ ಮತ್ತು ಆತನ ಪತ್ನಿ ಹೋಗಿ ಬಂದಿದ್ದರು. ಅಲ್ಲಿಂದ ಬಂದ ನಂತರವೇ ಅವರಲ್ಲಿ ಸೋಂಕು ಕಾಣಿಸಿಕೊಂಡಿತ್ತು ಎಂದು ಮಗ ಸಂಜೀವ್ ರಾಥೋಡ್ ಮಾಹಿತಿ ನೀಡಿದ್ದಾರೆ.

''ನಮ್ಮ ಇಡೀ ಕುಟುಂಬಕ್ಕೆ ಇಂತಹ ದುಸ್ಥಿತಿ ಬರುತ್ತದೆ ಎಂದು ನಾವು ಭಾವಿಸಿರಲಿಲ್ಲ. ಕೆಲವು ದಿನಗಳ ಹಿಂದೆಯಷ್ಟೇ ನಮ್ಮ ತಂದೆ-ತಾಯಿ ಕುಂಭಮೇಳದಿಂದ ವಾಪಸ್ ಆಗಿದ್ದರು. ನಂತರವೇ ಕೊರೊನಾ ಪಾಸಿಟಿವ್ ಬಂದಿತ್ತು. ದುರಾದೃಷ್ಟವಶಾತ್ ನಮ್ಮ ತಂದೆ ಕೊರೊನಾದಿಂದ ಸಾವನ್ನಪ್ಪಿದರು. ನನ್ನ ತಾಯಿ, ನನಗೆ ಹಾಗೂ ನನ್ನ ಸಹೋದರನಿಗೂ ಸೋಂಕು ತಗುಲಿದೆ'' ಎಂದು ಸಂಜೀವ್ ರಾಥೋಡ್ ಇಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

Music Director Shravan and His Wife tested Covid positive after visiting Kumbh Mela

''ನನ್ನ ತಾಯಿ, ನಾನು ಹಾಗು ನನ್ನ ಸಹೋದರ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇವೆ'' ಎಂದು ಸಂಜೀವ್ ರಾಥೋಡ್ ಹೇಳಿದ್ದಾರೆ.

ಕೊರೊನಾ ಭೀತಿಯಲ್ಲಿ ಕುಂಭಮೇಳ ನಡೆಸಿದ್ದನ್ನು ಅನೇಕರು ಖಂಡಿಸಿದರು. ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಇದೀಗ, ಕುಂಭಮೇಳಕ್ಕೆ ಹೋಗಿ ಬಂದವರಲ್ಲಿ ಸೋಂಕು ಪತ್ತೆಯಾಗುತ್ತಿರುವುದು ಆತಂಕ ಸೃಷ್ಟಿಸಿದೆ.

ಕೋವಿಡ್ ಪರಿಸ್ಥಿತಿ ನಡುವೆ ಕುಂಭಮೇಳ ಆಯೋಜನೆ ಮಾಡಲು ಅನುಮತಿ ನೀಡಿದರ ಬಗ್ಗೆ ರಾಮ್ ಗೋಪಾಲ್ ವರ್ಮಾ ಖಂಡಿಸಿದ್ದರು.

'ಕಳೆದ ವರ್ಷ ದೆಹಲಿಯ 'ಜಮಾತ್' ಕಾರ್ಯಕ್ರಮ ಕೊರೊನಾ ಹಬ್ಬಿಸುವುದರಲ್ಲಿ ಕೇವಲ ಕಿರುಚಿತ್ರವಾಗಿತ್ತು ಆದರೆ ಇಂದಿನ ಕುಂಭ ಮೇಳ ಬಾಹುಬಲಿ ಮಾದರಿಯ ಸಿನಿಮಾ ಆಗಿದೆ. ಎಲ್ಲ ಹಿಂದುಗಳು ಮುಸ್ಲೀಮರ ಬಳಿ ಕ್ಷಮೆ ಕೇಳಬೇಕು. ಅವರು ಗೊತ್ತಿಲ್ಲದೆ ಜಮಾತ್ ಮಾಡಿದ್ದರು, ಆದರೆ ನಾವು ಗೊತ್ತಿದ್ದೂ ಸಹ ಮಾಡಿದ್ದೇವೆ (ಕುಂಭ ಮೇಳ)' ಎಂದು ಆರ್‌ಜಿವಿ ಟ್ವೀಟ್ ಮಾಡಿದ್ದರು.

More from Filmibeat

English summary
Music Director Shravan rathod and His Wife tested Covid positive after visiting Kumbh Mela.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X