ಶಾರುಖ್ ಖಾನ್ 'ಜವಾನ್' ಭಾರೀ ಡೀಲ್: ಓಟಿಟಿ, ಮ್ಯೂಸಿಕ್, ಸ್ಯಾಟಿಲೈಟ್ ರೈಟ್ಸ್ ದಾಖಲೆ ಬೆಲೆಗೆ ಮಾರಾಟ

ಬಾಲಿವುಡ್ ಬಾದ್‌ದಾ ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. 'ಪಠಾಣ್' ನಂತರ ಮತ್ತೊಂದು ಹಿಟ್ ಮೇಲೆ ಶಾರುಖ್ ಕಣ್ಣಿಟ್ಟಿದ್ದಾರೆ. ತಮ್ಮದೇ ರೆಡ್ ಚಿಲ್ಲೀಸ್ ಬ್ಯಾನರ್‌ನಲ್ಲಿ ಬಹಳ ಅದ್ಧೂರಿಯಾಗಿ 'ಜವಾನ್' ಸಿನಿಮಾ ನಿರ್ಮಾಣ ಮಾಡಿದ್ದಾರೆ. ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನದ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡೋಕೆ ಬರ್ತಿದೆ.

ಜನವರಿಯಲ್ಲಿ ಬಿಡುಗಡೆಯಾದ ಶಾರುಖ್ ಅಭಿನಯದ 'ಪಠಾಣ್' ಸಿನಿಮಾ ಜಗತ್ತಿನಾದ್ಯಂತ 1000 ಕೋಟಿ ರೂ. ಗಳಿಕೆ ಮಾಡಿತ್ತು. ಈಗ 'ಜವಾನ್' ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಾಗಿರುವುದರಿಂದ, ಈ ಚಿತ್ರದ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಮುಂದಾಗಿದ್ದು, ಭಾರೀ ಮೊತ್ತ ಕೊಟ್ಟು ಹಕ್ಕುಗಳನ್ನು ಖರೀದಿಸಿರುವ ಸುದ್ದಿ ಬಂದಿದೆ. ಚಿತ್ರದ ಓಟಿಟಿ, ಸ್ಯಾಟಿಲೈಟ್ ಮತ್ತು ಸಂಗೀತ ರೈಟ್ಸ್‌ಗೆ ಬೇರೆಬೇರೆ ಸಂಸ್ಥೆಗಳು ದೊಡ್ಡ ಆಫರ್ ನೀಡಿದ್ದು, ಭಾರೀ ಮೊತ್ತಕ್ಕೆ ಹಕ್ಕುಗಳನ್ನು ಕೊಂಡುಕೊಂಡಿರುವ ಸುದ್ದಿ ಇದೆ.

Music, OTT, satellite rights of Shahrukh Khans Jawan sold for a whopping amount

ಚಿತ್ರತಂಡ ಮಾತ್ರ ಎಷ್ಟು ಮೊತ್ತಕ್ಕೆ ರೈಟ್ಸ್ ಎಷ್ಟಕ್ಕೆ ಮಾರಾಟವಾಗಿವೆ ಎಂಬ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ. ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಸೇರಿದಂತೆ ಹಲವು ಪ್ರಸಿದ್ಧ ಕಲಾವಿದರು ಅಭಿನಯಿಸಿದ್ದಾರೆ. ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕರಾದ ಅನಿರುದ್ಧ್ ರವಿಚಂದರ್, ಈ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ಅದ್ಧೂರಿ ಸಿನಿಮಾ

5 ವರ್ಷಗಳಿಂದ ಸೈಲೆಂಟ್ ಆಗಿದ್ದ ಕಿಂಗ್ ಖಾನ್ ಶಾರುಖ್ ಇದೀಗ ದೊಡ್ಡ ದೊಡ್ಡ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. 'ಪಠಾಣ್' ಸಕ್ಸಸ್ ಶಾರೂಖ್‌ಗೆ ಆನೆ ಬಲ ತಂದುಕೊಟ್ಟಿದೆ. ಹಾಗಾಗಿ ಮುಂದಿನ ಸಿನಿಮಾಗಳನ್ನು ಮತ್ತಷ್ಟು ಸೊಗಸಾಗಿ ಕಟ್ಟಿಕೊಡುವ ಕೆಲಸ ಮಾಡುತ್ತಿದ್ದಾರೆ. ಪಾತ್ರಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎನ್ನುತ್ತಿದ್ದಾರೆ. ಸಾಕಷ್ಟು ನಿರ್ದೇಶಕರು ಬಾಲಿವುಡ್ ಬಾದ್‌ಶಾ ಜೊತೆ ಸಿನಿಮಾ ಮಾಡಲು ಕಾಯ್ತಿದ್ದಾರೆ. ಎಲ್ಲರನ್ನು ಬಿಟ್ಟು ಅಟ್ಲಿ ಹೇಳಿದ ಕಥೆಯನ್ನು ಶಾರುಕ್ ಓಕೆ ಮಾಡಿರೋದು ಅಚ್ಚರಿ ಮೂಡಿಸಿದೆ.

Music, OTT, satellite rights of Shahrukh Khans Jawan sold for a whopping amount

ಶಾರುಖ್ ಜೊತೆ ನಯನತಾರಾ

ಸೌತ್ ಸಿನಿದುನಿಯಾದಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿ ನಯನತಾರ ಮೆರೆಯತ್ತಿದ್ದಾರೆ. ಸೂಪರ್ ಸ್ಟಾರ್‌ಗಳ ಜೊತೆ ತೆರೆಹಂಚಿಕೊಂಡು ಸಕ್ಸಸ್ ಕಂಡಿದ್ದಾರೆ. ಇದೀಗ ನಯನ್ ಬಾಲಿವುಡ್‌ಗೂ ಎಂಟ್ರಿ ಕೊಡ್ತಿದ್ದಾರೆ. ಅದು ಕೂಡ ಶಾರುಖ್ ಜೊತೆ ನಟಿಸೋ ಮೂಲಕ ಅನ್ನೋದು ವಿಶೇಷ. ಇನ್ನು 'ಜವಾನ್' ಚಿತ್ರದಲ್ಲಿ ದಳಪತಿ ವಿಜಯ್, ದೀಪಿಕಾ ಪಡುಕೋಣೆ, ಸಂಜಯ್‌ ದತ್‌ರಂತಹ ಘಟಾನುಘಟಿ ಕಲಾವಿದರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಪ್ಯಾನ್ ಇಂಡಿಯಾ ಸಿನಿಮಾ

ಬಾಲವುಡ್ ಸಿನಿಮಾಗಳು 5 ಭಾಷೆಗೆ ಡಬ್ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುವುದು ಕಮ್ಮಿ. ಆದರೆ ಶಾರುಖ್ ಖಾನ್ 'ಜವಾನ್' ಚಿತ್ರವನ್ನು ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಡಬ್ ಮಾಡಿ ರಿಲೀಸ್ ಮಾಡಲು ಮುಂದಾಗಿದ್ದಾರೆ. ಸೌತ್ ಸಿನಿಮಾಗಳು ಉತ್ತರ ಭಾರತ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದಂತೆ ದಕ್ಷಿಣದಲ್ಲಿ ತಮ್ಮ ಸಿನಿಮಾಗಳನ್ನು ದೊಡ್ಡಮಟ್ಟದಲ್ಲಿ ಗೆಲ್ಲಿಸಿಕೊಳಳುವ ಪ್ರಯತ್ನ ನಡೀತಿದೆ.

ಸೆಪ್ಟೆಂಬರ್ 7ಕ್ಕೆ ಸಿನಿಮಾ ರಿಲೀಸ್

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವಾರವೇ 'ಜವಾನ್' ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಶೂಟಿಂಗ್ ತಡವಾದ ಕಾರಣ ರಿಲೀಸ್ ಡೇಟ್ ಪೋಸ್ಟ್‌ಪೋನ್ ಮಾಡಲಾಗಿದೆ. ಸೆಪ್ಟೆಂಬರ್ 7ಕ್ಕೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ. ಕೃಷ್ಣ ಜನ್ಮಾಷ್ಟಮಿ ದಿನ ಸಿನಿಮಾ ತೆರೆಗೆ ಬರುತ್ತಿರುವುದು ವಿಶೇಷ. ಈ ಸಿನಿಮಾ ಕಲೆಕ್ಷನ್ ಕೂಡ 1000 ಕೋಟಿ ರೂ. ಗಡಿ ಮೀರುವ ಸಾಧ್ಯತೆ ಇದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.

More from Filmibeat

English summary
Music, OTT, satellite rights of Shahrukh Khan's Jawan sold for a whopping amount. Atlee Directed action thriller Movie scheduled for theatrical release on 7 September 2023. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X