ಹೆಸರು ಬದಲಾಯಿಸಿಕೊಂಡ ಬಾಲಿವುಡ್‌ನ ಮುಸ್ಲಿಂ ನಟಿಯರಿವರು

ಕಲೆಗೂ ಧರ್ಮಕ್ಕೂ ನಂಟಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲದರಲ್ಲೂ ಧರ್ಮ, ಜಾತಿ ನೋಡುವ ಚಾಳಿ ಹೆಚ್ಚಿಕೊಂಡು ಬಿಟ್ಟಿದೆ.

Recommended Video

ಯಶ್ ವಿರುದ್ಧ ಆಕ್ರೋಶ ಹೊರಹಾಕಿದ ರೆಬೆಲ್ ಫ್ಯಾನ್ಸ್ | Rebel Star Ambareesh Fans about Yash

ಕೆಲ ಧರ್ಮದವರು ಕೀಳರಿಮೆ ಅನುಭವಿಸುವುದು, ಕೆಲವು ಧರ್ಮ, ಜಾತಿ, ಕುಟುಂಬಕ್ಕೆ ಸೇರಿದವರು ತಾವೇ ಮೇಲೆಂದು ಮೆರೆಯುವುದು ಬಾಲಿವುಡ್‌ ಅನ್ನೂ ಬಿಟ್ಟಿಲ್ಲ. ಅಸಲಿಗೆ ಇದು ಅಲ್ಲಿ ತುಸು ಹೆಚ್ಚಿಗೆಯೇ ಇದೆ.

ಆದರೆ ಈ ಧರ್ಮದ ಕೀಳರಿಮೆ ಇಂದು ನಿನ್ನೆಯದಲ್ಲ ಬಾಲಿವುಡ್‌ ಅನ್ನು ಬಹು ವರ್ಷಗಳಿಂದಲೂ ಇದು ಕಾಡುತ್ತಿದೆ. ಹಲವು ನಟ-ನಟಿಯರು ತಮ್ಮ ಧರ್ಮದ ಹೆಸರುಗಳನ್ನು ಬದಲಾಯಿಸಿಕೊಂಡು ಸಿನಿಮಾ ರಂಗಕ್ಕೆ ಬರುತ್ತಾರೆ. ಆದರೆ ಈ ಬೆರಳ ತುದಿಯ ಮಾಹಿತಿ ಸಮಯದಲ್ಲಿ ಎಲ್ಲಾ ಖುಲ್ಲಂ-ಖುಲ್ಲಂ ಆಗುತ್ತಿದೆ.

ತಮ್ಮ ಮೂಲ ಹೆಸರನ್ನು ಧರ್ಮದ ಕಾರಣಕ್ಕೆ ಬದಲಾಯಿಸಿಕೊಂಡ ನಟಿಯರ ಪಟ್ಟಿ ಇಲ್ಲಿದೆ...

ನಟಿ ಮಧುಬಾಲಾ ಮೂಲ ಹೆಸರು

ನಟಿ ಮಧುಬಾಲಾ ಮೂಲ ಹೆಸರು

ಬಾಲಿವುಡ್‌ ಎಂದೂ ಮರೆಯಲಾಗದ ನಾಯಕ ನಟಿ ಮಧುಬಾಲಾ ಮೂಲ ಹೆಸರು ಮುಮ್ತಾಜ್ ಜೆಹಾನ್ ಬೇಗಂ ದೆಹಲಾವಿ ಎಂದು. ಆಕೆ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಿದ್ದಂತೆಯೇ ತನ್ನ ಮೂಲ ಹೆಸರನ್ನು ಬದಲಾಯಿಸಿಕೊಂಡರು. ಮಧುಬಾಲಾ ಹೆಸರಲ್ಲಿ ಬಾಲಿವುಡ್ ಅನ್ನು ಆಳಿದರು.

ನಟಿ ನಟು ಹೆಸರೇನು ಗೊತ್ತಾ?

ನಟಿ ನಟು ಹೆಸರೇನು ಗೊತ್ತಾ?

ಬಹುಭಾಷಾ ನಟಿ ಟಬು ಮೂಲ ಹೆಸರು ತಬಸ್ಸುಮ್ ಫಾತಿಮಾ ಹಶ್ಮಿ. ತೆಲುಗು, ತಮಿಳು, ಮರಾಟಿ, ಬೆಂಗಾಳಿ, ಹಿಂದಿ ಭಾಷೆಗಳಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಈ ಪ್ರತಿಭಾವಂತ ನಟಿಯ ಮೂಲ ಹೆಸರು ಹೆಚ್ಚಿನ ಮಂದಿಗೆ ಗೊತ್ತಿಲ್ಲ.

ಸಂಜಯ್ ದತ್ ಪತ್ನಿ ಮಾನ್ಯತಾ ದತ್‌ ಹೆಸರೇನು?

ಸಂಜಯ್ ದತ್ ಪತ್ನಿ ಮಾನ್ಯತಾ ದತ್‌ ಹೆಸರೇನು?

ಸಂಜಯ್ ದತ್ ಪತ್ನಿ ಮಾನ್ಯತಾ ಮದುವೆ ಆಗುವ ಮುನ್ನಾ ಕೆಲವಾರು ಸಿನಿಮಾಗಳಲ್ಲಿ ನಟಿಸಿದ್ದರು. ಇವರ ಮೂಲ ಹೆಸರು ದಿಲ್‌ನವಾಜ್ ಶೇಖ್. ಮೊದಲ ಸಿನಿಮಾದ ನಂತರ ಅವರ ಹೆಸರನ್ನು ನಿರ್ದೇಶಕ ಝಾ ಬದಲಾಯಿಸಿದರು.

ರೀನಾ ರಾಯ್ ಅವರ ನಿಜ ನಾಮಧೇಯ?

ರೀನಾ ರಾಯ್ ಅವರ ನಿಜ ನಾಮಧೇಯ?

ರೀನಾ ರಾಯ್ ಸಹ ಬಾಲಿವುಡ್‌ನಲ್ಲಿ ದೊಡ್ಡ ಹೆಸರನ್ನೇ ಮಾಡಿದವರು. ಅವರ ಮೂಲ ಹೆಸರು ಸಾಯಿರಾ ಅಲಿ. ಅವರ ತಂದೆ ಮತ್ತು ತಾಯಿ ಸಹ ಪೋಷಕ ನಟರೇ ಆಗಿದ್ದರು. ಕೆಲ ಉತ್ತಮ ಸಿನಿಮಾಗಳಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ ರೀನಾ ರಾಯ್.

ಖ್ಯಾತ ನಟಿ ಮೀನಾ ಕುಮಾರಿ ಹೆಸರು?

ಖ್ಯಾತ ನಟಿ ಮೀನಾ ಕುಮಾರಿ ಹೆಸರು?

ಬಾಲಿವುಡ್‌ನ ನಲ್ಲಿ ದಂತಕತೆ ಎಂದು ಕರೆಯಲಾಗುವ ನಟಿಯರಲ್ಲಿ ಒಬ್ಬರಾದ ಮೀನಾ ಕುಮಾರಿ ಅವರ ಮೂಲ ಹೆಸರು ಮೆಹಜಬೀನ್ ಬಾನೋ ಎಂದು. ಬೈಜು ಭವರಾ ಸೇರಿ ಹಲವು ನೆನಪುಳಿಯುವ ಸಿನಿಮಾಗಳಲ್ಲಿ ನಟಿಸಿದ್ದ ಅವರು ಬಾಲಿವುಡ್‌ನಲ್ಲಿ ಬಹುಕಾಲ ಉಳಿದಿದ್ದರು. ಈ ನಟಿಯರ ಧರ್ಮವಾಗಲಿ ಹೆಸರಾಗಲಿ ಅವರ ಪ್ರತಿಭೆಯ ಮೇಲೆ ಪರಿಣಾಮ ಬೀರಿಲ್ಲ. ಕತೆಯಲ್ಲಿ ನಟಿಯರ ಹೆಸರುಗಳು ಪ್ರೇಕ್ಷಕರಿಗೆ ಮುಖ್ಯವಾಗಿತ್ತೇ ಹೊರತು ನಿಜವಾದ ಹೆಸರುಗಳಲ್ಲ.

More from Filmibeat

English summary
Here is the list of Heroines who changed their name or some one changed their name for their religion.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X