ದೀಪಿಕಾಗೆ ನಾನೇ ಕೈ ಕೊಟ್ಟಿದ್ದು, ಆಕೆಯನ್ನು ಕಳೆದುಕೊಂಡಿದ್ದಕ್ಕೆ ಪಶ್ಚಾತ್ತಾಪ ಇಲ್ಲ ; ಮಾಜಿ ಬಾಯ್‌ಫ್ರೆಂಡ್ ವಿಡಿಯೋ ವೈರಲ್

ಮಾತನಾಡಿದವರು ತಮ್ಮ ಮಾತುಗಳನ್ನೇ ಮರೆಯುವ ಕಾಲ ಹಿಂದೆ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ನಾವು ಎಂದೋ ಆಡಿದ್ದ ಮಾತನ್ನು ಸಾಮಾಜಿಕ ಜಾಲತಾಣ ನೆನಪಿಸುತ್ತೆ. ನೆನಪುಗಳನ್ನು ಕೂಡ ಹಸಿರಾಗಿಸುತ್ತೆ. ಇಷ್ಟೇ ಅಲ್ಲ ಇನ್ನೂ ಕೆಲ ಒಮ್ಮೆ ಹಿಂದೊಮ್ಮೆ ಆಡಿದ್ದ ಮಾತುಗಳಿಂದ ವರ್ಷಗಳ ನಂತರ ನೆಮ್ಮದಿಯೂ ಹಾಳಾಗುತ್ತೆ. ವಿವಾದ ಭುಗಿಲೆಳುತ್ತೆ. ಉದಾಹರಣೆಗೆ ದೀಪಿಕಾ ಪಡುಕೋಣೆಯ ಕುರಿತು ಮುಜಮ್ಮಿಲ್ ಇಬ್ರಾಹಿಂ ಆಡಿದ್ದ ಮಾತುಗಳನ್ನೇ ತೆಗೆದುಕೊಳ್ಳಿ.

ಹೌದು, ಮುಜಮ್ಮಿಲ್ ಇಬ್ರಾಹಿಂ.. ಕಾಶ್ಮೀರದ ಕುಮಾರ. ಸೂಪರ್ ಮಾಡೆಲ್. ಲಕ್ಕಿ ಅಲಿಯ ''ಕಭಿ ಐಸಾ ಲಗ್ತಾ ಹೈ'' ಮತ್ತು ರಾಖಿ ಸಾವಂತ್ ಅವರ ''ಪರ್ದೇಸಿಯಾ'' ಹಾಡುಗಳ ಮೂಲಕ ಆ ಕಾಲದಲ್ಲಿ ಭಾರತದೆಲ್ಲೆಡೆ ಸದ್ದು ಮಾಡಿ ಸುದ್ದಿಯಾದವರು ಇವರು.

Muzammil Ibrahim Breaks Silence as No Regrets Deepika Padukone Breakup Claims Go Viral

ಮ್ಯೂಸಿಕ್ ಆಲ್ಬಂಗಳಲ್ಲಿ ಕಾಣಿಸಿಕೊಳ್ಳುತ್ತಲೇ ಚಿತ್ರರಂಗಕ್ಕೆ ನಾಯಕನಾಗಿ ಬಂದ ಮುಜಮ್ಮಿಲ್ ಇಬ್ರಾಹಿಂ 2007ರಲ್ಲಿ ಪೂಜಾ ಭಟ್ ನಿರ್ದೇಶನದ ''ಧೋಖಾ'' ಚಿತ್ರದಲ್ಲಿ ಕಾಣಿಸಿಕೊಂಡರು. ಈ ಮೂಲಕ ನಾಯಕನಾಗಿ ಬಾಲಿವುಡ್‌ಗೆ ಪರಿಚಯ ಆದರು. ''ಹಾರ್ನ್ ಓಕೆ ಪ್ಲೀಸ್''.. ''ವಿಲ್ ಯೂ ಮ್ಯಾರಿ ಮೀ''.. ಸೇರಿ ಹಲವು ಚಿತ್ರಗಳಲ್ಲಿ ಆ ನಂತರ ಕಾಣಿಸಿಕೊಂಡ ಮುಜಮ್ಮಿಲ್ ಇಬ್ರಾಹಿಂ ಸದ್ಯ ''ಸ್ಪೆಷಲ್ OPS'' ಸರಣಿಯ ಮೂಲಕ ಇನ್ನೊಮ್ಮೆ ಹಲವರ ಚಿತ್ತ ಕದ್ದಿದ್ದಾರೆ. ಹೆಸರು ಸಂಪಾದಿಸಿದ್ದಾರೆ.

ಇಂಥಾ ಮುಜಮ್ಮಿಲ್ ಇಬ್ರಾಹಿಂ ಬೆಂಗಳೂರಿನ ಬೆಡಗಿ ದೀಪಿಕಾ ಪಡುಕೋಣೆಯ ಮೊದಲ ಬಾಯ್‌ಫ್ರೆಂಡ್ ಎನ್ನುವ ವಿಚಾರ ಹಲವರಿಗೆ ಗೊತ್ತಿರಲಿಕ್ಕಿಲ್ಲ. ಈ ಮಾತನ್ನು ನಾವು ಅಲ್ಲ ಬದಲಿಗೆ ಖುದ್ದು ಮುಜಮ್ಮಿಲ್ ಇಬ್ರಾಹಿಂ ಹೇಳಿದ್ದಾರೆ. ಆದರೆ ಇವರ ಈ ಹೇಳಿಕೆ ಇಂದು ನಿನ್ನೆಯದಲ್ಲ. ಒಂದು ಒಂದೂವರೆ ವರ್ಷದ ಹಿಂದಿನ ಹೇಳಿಕೆ ಇದು. ಮುಜಮ್ಮಿಲ್ ದುರಾದೃಷ್ಟಕ್ಕೆ ಅಂದು ಇವರಾಡಿದ ಮಾತು ಇಂದು ಮುಳ್ಳಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ. ಟ್ರೋಲಿಗರಿಗೆ ಆಹಾರವೂ ಆಗಿದೆ.

ಹೇಳಿದ್ದೇನು ಮುಜಮ್ಮಿಲ್ ಇಬ್ರಾಹಿಂ ?

2025ರಲ್ಲಿ ಸಿದ್ದಾರ್ಥ್ ಕಣ್ಣನ್ ಅವರಿಗೆ ಮುಜಮ್ಮಿಲ್ ಇಬ್ರಾಹಿಂ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಮಾತನಾಡುತ್ತಾ ಮಾತನಾಡುತ್ತಾ ತಮ್ಮ ಲವ್ ಮತ್ತು ಬ್ರೇಕಪ್ ಕಥೆಯನ್ನು ಮುಜಮ್ಮಿಲ್ ಹೇಳಿದ್ದರು.

ಈ ಕುರಿತು ಸಂದರ್ಶನದಲ್ಲಿ ಮಾತನಾಡಿದ್ದ ಮುಜಮ್ಮಿಲ್ ಇಬ್ರಾಹಿಂ, ದೀಪಿಕಾ ಪಡುಕೋಣೆಗೆ ನಾನೇ ಕೈ ಕೊಟ್ಟಿದ್ದು, ಆದರೆ ನನಗೆ ಅದರ ಬಗ್ಗೆ ಪಶ್ಚಾತಾಪ ಇಲ್ಲ ಎಂದು ಹೇಳಿದ್ದರು.

Muzammil Ibrahim Breaks Silence as No Regrets Deepika Padukone Breakup Claims Go Viral

ನಾವು ಇಬ್ಬರು ಪ್ರೇಮಪಾಶದಲ್ಲಿ ಸಿಲುಕಿದ್ದೇವು, ಅವಳು ಮುಂಬೈಗೆ ಬಂದಾಗ ಆಕೆಯನ್ನು ಮೊದಲು ಭೇಟಿಯಾದ ಹುಡುಗ ನಾನೇ ಎಂದು ಹೇಳಿದ್ದ ಮುಜಮ್ಮಿಲ್ ಅದು ನನ್ನ ಮೊದಲ ಲವ್ ಸ್ಟೋರಿ ಎಂದು ಹೇಳಿದ್ದರು.

ಮುಂದುವರೆದು ನಿಜ ಹೇಳಬೇಕು ಅಂದರೆ ದೀಪಿಕಾನೇ ನನಗೆ ಮೊದಲು ಪ್ರಪೋಸ್ ಮಾಡಿದ್ದು, ಆದರೆ ನಾನೇ ಅವಳನ್ನು ಬಿಟ್ಟು ಬಂದೆ, ಸಂಬಂಧ ಮುರಿದುಕೊಂಡೆ, ಅದರ ಬಗ್ಗೆ ನನಗ್ಯಾವ ಪಶ್ಚಾತಾಪ ಇಲ್ಲ ಎಂದು ಹೇಳಿರುವ ಮುಜಮ್ಮಿಲ್ ಆ ಸಮಯದಲ್ಲಿ ದೀಪಿಕಾ ಚಿತ್ರರಂಗದಲ್ಲಿ ಇನ್ನೂ ಸೈಕಲ್ ಹೊಡೆಯುತ್ತಿದ್ದಳು, ಕೇವಲ ಮಾಡೆಲ್ ಆಗಿದ್ದಳು, ಆದರೆ ನಾನು ಆಗಲೇ ನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದೆ ಎಂದಿದ್ದರು.

ಇನ್ನು ಈಗಲೂ ದೀಪಿಕಾ ಜೊತೆ ಸಂಪರ್ಕ ಇದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ್ದ ಮುಜಮ್ಮಿಲ್, ಬ್ರೇಕಪ್ ಆದ ನಂತರವೂ ಕೂಡ ಸ್ನೇಹಿತರಂತೆ ನಾವು ಇದ್ವಿ, ಒಬ್ಬರ ಸಾಧನೆಯನ್ನೊಬ್ಬರು ಕೊಂಡಾಡುತ್ತಿದ್ವಿ, ಆದರೆ..ರಣವೀರ್ ಸಿಂಗ್ ಅವರ ಜೊತೆ ಮದುವೆಯಾದ ನಂತರ ನಮ್ಮ ನಡುವೆ ಸಂಪರ್ಕ ಇಲ್ಲ ಎಂದಿದ್ದರು.
ನೆನಪಿರಲಿ ದೀಪಿಕಾ ಪಡುಕೋಣೆಯ ಮೊದಲ ಬಾಯ್‌ಫ್ರೆಂಡ್ ನಾನೇ ಎಂದು ಮುಜಮ್ಮಿಲ್ ಹೇಳಿದ್ದರೂ ಕೂಡ ಇಲ್ಲಿಯವರೆಗೆ ದೀಪಿಕಾ ಮುಜಮ್ಮಿಲ್ ಇಬ್ರಾಹಿಂ ಜೊತೆಗಿನ ಸಂಬಂಧದ ಕುರಿತು ಸಾರ್ವಜನಿಕವಾಗಿ ಎಲ್ಲಿಯೂ ಮಾತನಾಡಿಲ್ಲ.

ಸದ್ಯ ಮುಜಮ್ಮಿಲ್ ಇಬ್ರಾಹಿಂ ವರ್ಷದ ಹಿಂದೆ ಆಡಿದ್ದ ಈ ಮಾತುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಮುನ್ನೆಲೆಗೆ ಬಂದಿವೆ. ವೈರಲ್ ಆಗಿವೆ. ಹಲವರು ಮುಜಮ್ಮಿಲ್ ಇಬ್ರಾಹಿಂ ಅವರನ್ನು ಆಡಿಕೊಳ್ಳುತ್ತಿದ್ದಾರೆ. ಟ್ರೋಲ್ ಮಾಡುತ್ತಿದ್ದಾರೆ.

ಮುಜಮ್ಮಿಲ್ ಇಬ್ರಾಹಿಂ ಕೇವಲ ಪಬ್ಲಿಸಿಟಿಗಾಗಿ ದೀಪಿಕಾ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕೆಲವರು ಕಿಡಿ ಕಾರಿದರೆ, ಇನ್ನು ಕೆಲವರು ಅವಳನ್ನು ಬಿಟ್ಟು ಬಂದಿದ್ದಕ್ಕೆ ಥ್ಯಾಂಕ್ಸ್! ದೇವರು ಅವಳಿಗೆ ಬೆಸ್ಟ್ ಲೈಫ್ ಕೊಟ್ಟಿದ್ದಾನೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈಗ ಇದರ ಬಗ್ಗೆ ಮಾತನಾಡುವ ಅವಶ್ಯಕತೆ ಏನಿದೆ ? ಎಂದು ಪ್ರಶ್ನೆ ಮಾಡಿದರೆ ಇನ್ನೊಬ್ಬರು ನಿಮ್ಮ ಸಿನಿಮಾಗಳನ್ನು ಇನ್ಮುಂದೆ ನೋಡುವುದಿಲ್ಲ ಎಂದು ಶಪಥ ಮಾಡಿದ್ದಾರೆ.

ಮುಜಮ್ಮಿಲ್ ಇಬ್ರಾಹಿಂ ಅಸಮಾಧಾನ ಮತ್ತು ಸ್ಪಷ್ಟನೆ

ಹೊಸ ಹೇಳಿಕೆ ಎಂದು ತಪ್ಪಾಗಿ ಶೀರ್ಷಿಕೆ ನೀಡಿ ವೈರಲ್ ಮಾಡಲಾಗುತ್ತಿರುವ ನನ್ನ ಸಂದರ್ಶನದ ತುಣುಕು ಒಂದು ವರ್ಷಕ್ಕೂ ಹಿಂದಿನದ್ದು. ಸುದೀರ್ಘವಾದ ಸಂದರ್ಶನದಲ್ಲಿ ಕೆಲವು ಸೆಕೆಂಡ್‌ಗಳ ಚಿಕ್ಕ ಕ್ಲಿಪ್ ಅಷ್ಟೇ. ಒಂದು ಸೂಕ್ಷ್ಮ ವಿಷಯದ ಬಗ್ಗೆ ಮಾತಾಡುವಾಗ ಇರೋ ಹಿಂಜರಿಕೆ, ಅದರ ಹಿಂದಿರೋ ಅಸಲಿ ಸಂದರ್ಭ ಮತ್ತು ಒಬ್ಬರಿಗೊಬ್ಬರು ಕೊಡುವ ಗೌರವ... ಇವೆಲ್ಲವೂ ವಿಡಿಯೋ ಎಡಿಟ್ ಮಾಡುವಾಗ ಅಥವಾ ಕೇವಲ ಒಂದು ತುಣುಕನ್ನಷ್ಟೇ ಕಟ್ ಮಾಡಿ ಒಂಟಿಯಾಗಿ ನೋಡಿದಾಗ ಹೆಚ್ಚಾಗಿ ಮಿಸ್ ಆಗ್ಬಿಡುತ್ತವೆ.

ನನ್ನ ಹಳೇ ಬದುಕಿನಲ್ಲಿ ನನ್ನೊಂದಿಗೆ ಇದ್ದವರ ಬಗ್ಗೆ ನಾನು ಯಾವತ್ತೂ ಗೌರವದಿಂದಲೇ ಮಾತಾಡೋಕೆ ಪ್ರಯತ್ನಿಸಿದ್ದೇನೆ. ಆ ಗೌರವ ಈಗಲೂ ಹಾಗೇ ಇದೆ, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಎಲ್ಲರ ತರಹ ನಾನು ಕೂಡ ವರ್ಷಗಳಿಂದ ನನ್ನ ಕೆಲಸ ಮತ್ತು ನನ್ನ ಲೈಫ್ ಬಿಲ್ಡ್ ಮಾಡಿಕೊಳ್ಳೋದ್ರಲ್ಲೇ ಸಂಪೂರ್ಣವಾಗಿ ಬ್ಯುಸಿಯಾಗಿದ್ದೀನಿ. ಜನರ ಚರ್ಚೆ ಕೂಡ ಕೇವಲ ನನ್ನ ಕೆಲಸದ ಮೇಲಷ್ಟೇ ಇರಲಿ ಅನ್ನೋದು ನನ್ನ ಆಸೆ. ನಾನು ಯಾವತ್ತೂ ಪ್ರಾಮಾಣಿಕವಾಗಿ ಮಾತಾಡೋದಕ್ಕೆ ಇಷ್ಟಪಡ್ತೀನಿ, ಹಾಗೇ ಆ ಮಾತು ಬೇರೆಯವರಿಗೆ ಗೌರವ ಕೊಡುವಂತಿರಬೇಕು ಅನ್ನೋದಕ್ಕೂ ನಾನು ಬದ್ಧನಾಗಿದ್ದೀನಿ.

ಹೀಗೆ ಮುಜಮ್ಮಿಲ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟೀಕರಣ ಕೊಡುವ ಪ್ರಯತ್ನ ಮಾಡಿದ್ದಾರೆ. ಆದರೂ ದೀಪಿಕಾ ಪಡುಕೋಣೆಯ ಅಭಿಮಾನಿಗಳು ಮಾತ್ರ ಮುಜಮ್ಮಿಲ್ ವಿರುದ್ಧ ಆಕ್ರೋಶ ಹೊರ ಹಾಕುತ್ತಲೇ ಇದ್ದಾರೆ.

English summary
Muzammil Ibrahim hits back at viral Deepika Padukone breakup rumors: "The respect was lost in editing." Details inside!
Read more about: deepika padukone viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X