For Quick Alerts
  ALLOW NOTIFICATIONS  
  For Daily Alerts

  ಜೆನಿಲಿಯಾ-ರಿತೇಶ್‌ ಮಕ್ಕಳ ನೆಚ್ಚಿನ ಹೀರೋ ಅಪ್ಪನಲ್ಲ, ಆ ಇಬ್ಬರು ನಟರು!

  |

  ನಟಿ ಜೆನಿಲಿಯಾ ಹಾಗೂ ನಟ ರಿತೇಶ್ ದೇಶ್‌ಮುಖ್ ಜೋಡಿ ಬಾಲಿವುಡ್‌ನ ಕ್ಯೂಟೆಸ್ಟ್ ಜೋಡಿಗಳಲ್ಲಿ ಒಂದು. ಈ ಜೋಡಿ ವಿವಾಹವಾಗಿ 08 ವರ್ಷವಾಯಿತು. ಇಬ್ಬರು ಮುದ್ದಾದ ಮಕ್ಕಳನ್ನು ಹೊಂದಿದ್ದಾರೆ.

  ಅಪ್ಪ-ಅಮ್ಮ ಇಬ್ಬರೂ ನಟರಾಗಿದ್ದರೂ ಸಹ ಜೆನಿಲಿಯಾ-ರಿತೇಶ್ ಮಕ್ಕಳಿಗೆ ಸಿನಿಮಾಗಳಲ್ಲಿ ಅಪ್ಪನಾಗಲಿ, ಅಮ್ಮನಾಗಲಿ ಇಷ್ಟವಿಲ್ಲ. ಇಬ್ಬರು ಮಕ್ಕಳಿಗೂ ಬೇರೆ ನಟರೇ ಹೆಚ್ಚು ಇಷ್ಟವಂತೆ.

  ಈ ಬಗ್ಗೆ ರಿತೇಶ್ ದೇಶ್‌ಮುಖ್, ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು, ಇಬ್ಬರು ಮಕ್ಕಳಿಗೂ, ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಎಂದರೆ ಸಖತ್ ಇಷ್ಟ. ಸಿನಿಮಾಗಳ ಬಗ್ಗೆ ಮಾತನಾಡುವಾಗೆಲ್ಲಾ, ಆ ಇಬ್ಬರ ಬಗ್ಗೆಯೇ ಮಾತನಾಡುತ್ತಿರುತ್ತಾರೆ ಎಂದಿದ್ದಾರೆ. 'ಹಿತ್ತಲ ಗಿಡ ಮದ್ದಲ್ಲ' ಎಬಂತಾಗಿದೆ ನನ್ನ ಹಾಗೂ ಜೆನಿಲಿಯಾ ಪರಿಸ್ಥಿತಿ ಎಂದು ತಮಾಷೆ ಮಾಡಿದ್ದಾರೆ ರಿತೇಶ್ ದೇಶ್‌ಮುಖ್.

  ನನ್ನ ಒಂದೂ ಸಿನಿಮಾ ನೋಡಿರಲಿಲ್ಲ ಮಕ್ಕಳು: ರಿತೇಶ್

  ನನ್ನ ಒಂದೂ ಸಿನಿಮಾ ನೋಡಿರಲಿಲ್ಲ ಮಕ್ಕಳು: ರಿತೇಶ್

  'ಇಬ್ಬರೂ ಮಕ್ಕಳು ನನ್ನ ಒಂದೂ ಸಿನಿಮಾವನ್ನು ನೋಡಿಯೇ ಇರಲಿಲ್ಲ, ಇತ್ತೀಚೆಗೆ 'ಟೋಟಲ್ ಧಮಾಲ್' ಸಿನಿಮಾ ನೋಡಿದರು. ಆಗಲೇ ಅವರಿಗೆ ಗೊತ್ತಾಗಿದ್ದು, ನಾನು ನಟನೆ ಸಹ ಮಾಡುತ್ತೇನೆ ಎಂದು, ಇದಕ್ಕೆ ಮುಂಚೆ ಅಪ್ಪ ಏನೋ ಕೆಲಸ ಮಾಡುತ್ತಿದ್ದಾರೆ ಎಂದುಕೊಂಡಿದ್ದರು' ಎಂದಿದ್ದಾರೆ ರಿತೇಶ್.

  'ಕೆಲಸ ಮಾಡುತ್ತೇನೆಂದು ಹೇಳಿ ಡ್ಯಾನ್ಸ್ ಮಾಡುತ್ತಿದ್ದೀಯಾ?'

  'ಕೆಲಸ ಮಾಡುತ್ತೇನೆಂದು ಹೇಳಿ ಡ್ಯಾನ್ಸ್ ಮಾಡುತ್ತಿದ್ದೀಯಾ?'

  'ಒಮ್ಮೆ ಹಾಡಿನ ಶೂಟಿಂಗ್ ಮಾಡುವಾಗ ಮಕ್ಕಳನ್ನು ಕರೆದುಕೊಂಡು ಹೋಗಿದ್ದೆ. ಆಗ 'ಅಪ್ಪ, ನೀನು ಕೆಲಸ ಮಾಡಲು ಹೋಗುತ್ತೀನೆ ಎಂದು ಹೇಳಿದ್ದೆ, ಇಲ್ಲಿ ನೋಡಿದರೆ ಡ್ಯಾನ್ಸ್‌ ಮಾಡುತ್ತಿದ್ದೀಯಾ?' ಎಂದು ನನ್ನನ್ನು ಪ್ರಶ್ನಿಸಿದ್ದರು' ಎಂದಿದ್ದಾರೆ ರಿತೇಶ್.

  ನನ್ನ ಸಹನಟರನ್ನು ಮಾತ್ರವೇ ಹೊಗಳುತ್ತಾರೆ ಮಕ್ಕಳು: ರಿತೇಶ್

  ನನ್ನ ಸಹನಟರನ್ನು ಮಾತ್ರವೇ ಹೊಗಳುತ್ತಾರೆ ಮಕ್ಕಳು: ರಿತೇಶ್

  'ಒಮ್ಮೆ ಭಾಗಿ 3 ಶೂಟಿಂಗ್‌ಗಾಗಿ ವಿದೇಶಕ್ಕೆ ಕರೆದುಕೊಂಡು ಹೋಗಿದ್ದೆ. ಆದರೆ ಆ ಮೇಲೆ ಗೊತ್ತಾಯಿತು, ಮಕ್ಕಳನ್ನು ಶೂಟಿಂಗ್‌ ಸ್ಪಾಟ್‌ಗೆ ಕರೆದುಕೊಂಡು ಹೋಗಬಾರದು ಎಂದು. ಏಕೆಂದರೆ ಮಕ್ಕಳು ಬರೀ ಟೈಗರ್ ಶ್ರಾಫ್, ಅಕ್ಷಯ್ ಕುಮಾರ್ ಅನ್ನೇ ಹೊಗಳಲು ಪ್ರಾರಂಭಿಸಿದರು, ಹಿತ್ತಲ ಗಿಡ ಮದ್ದಲ್ಲ ಎಂಬುದು ಅಂದು ಗೊತ್ತಾಯಿತು' ಎಂದು ನಕ್ಕಿದ್ದಾರೆ ರಿತೇಶ್.

  'ಅಪ್ಪ ಯಾವ ಆಫೀಸ್‌ನಲ್ಲಿ ಕೆಲಸ ಮಾಡುತ್ತಾರೆ?'

  'ಅಪ್ಪ ಯಾವ ಆಫೀಸ್‌ನಲ್ಲಿ ಕೆಲಸ ಮಾಡುತ್ತಾರೆ?'

  ಜೆನಿಲಿಯಾ ಸಹ ಹಾಜರಿದ್ದ ಆ ಶೋ ನಲ್ಲಿ, 'ಅಪ್ಪ ಕೆಲಸಕ್ಕೆ ಹೋಗುತ್ತಾರಲ್ಲ, ಯಾವ ಆಫೀಸ್‌ಗೆ ಹೋಗುತ್ತಾರೆ. ಅವರ ಆಫೀಸ್ ಎಲ್ಲಿದೆ? ಎಂದೆಲ್ಲಾ ಪ್ರಶ್ನೆಗಳನ್ನು ಕೇಳುತ್ತಾರೆ, ಅವರಿಗೆ ನಮ್ಮ ನಟನಾ ವೃತ್ತಿ ಬಗ್ಗೆ ಹೆಚ್ಚು ಗೊತ್ತಿಲ್ಲ' ಎಂದರು ಜೆನಿಲಿಯಾ.

  KGF 2 ಸೆಟ್ ಗೆ ಹೋದ ಕಾರ್ತಿಕ್ ಗೌಡ ಪರಿಸ್ಥಿತಿ ನೋಡಿ | Filmibeat Kannada
  ಮತ್ತೆ ನಟನೆಯತ್ತ ಜೆನಿಲಿಯಾ

  ಮತ್ತೆ ನಟನೆಯತ್ತ ಜೆನಿಲಿಯಾ

  ನಟಿ ಜೆನಿಲಿಯಾ ಹಲವು ವರ್ಷಗಳ ಗ್ಯಾಪ್ ಬಳಿಕ ಮತ್ತೆ ನಟನಾ ವೃತ್ತಿ ಆರಂಭಿಸುತ್ತಿದ್ದಾರೆ. ಚಿರಂಜೀವಿ ನಟಿಸುತ್ತರುವ ಲೂಸಿಫರ್ ರೀಮೇಕ್‌ನಲ್ಲಿ ಪಾತ್ರಕ್ಕೆ ಜೆನಿಲಿಯಾರನ್ನು ಕೇಳಲಾಯಿತಾದರು, ಅದನ್ನು ಅವರು ಒಪ್ಪಿಕೊಂಡಿಲ್ಲ. ಒಟಿಟಿ ಯಲ್ಲಿ ಮಹಿಳಾ ಪ್ರಧಾನ ವೆಬ್ ಸರಣಿಯೊಂದರಲ್ಲಿ ನಟಿಸಲು ಮಾತುಕತೆ ನಡೆಸಿದ್ದಾರೆ ಜೆನಿಲಿಯಾ.

  English summary
  Actor Ritesh Deshmukh said my children's favorite hero is not me. They always brag about Tiger shraf and Akshay Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X