»   » ಮದುವೆಗೆ ಮುನ್ನ ಸೆಕ್ಸ್ ನನ್ನಿಷ್ಟ: ದೀಪಿಕಾ ಪಡುಕೋಣೆ

ಮದುವೆಗೆ ಮುನ್ನ ಸೆಕ್ಸ್ ನನ್ನಿಷ್ಟ: ದೀಪಿಕಾ ಪಡುಕೋಣೆ

By: ಉದಯರವಿ
Subscribe to Filmibeat Kannada

ಬಾಲಿವುಡ್ ಬಿಂಕದ ಸಿಂಗಾರಿ ಮೈಡೊಂಕಿನ ಬಂಗಾರಿ ದೀಪಿಕಾ ಪಡುಕೋಣೆ ಪ್ರಧಾನವಾಗಿ ಕಾಣಿಸಿಕೊಂಡಿರುವ 'ಮೈ ಚಾಯ್ಸ್' ವಿಡಿಯೋ ಈಗ ಹೊಸ ಸಂಚಲನಕ್ಕೆ ಕಾರಣವಾಗಿದೆ. ಮಹಿಳೆಯರ ಸ್ವಾತಂತ್ರ್ಯದ ಬಗೆಗೆ ಈ ವಿಡಿಯೋ ಧ್ವನಿಯೆತ್ತಿದೆ.

ಭಾರತೀಯ ಸಮಾಜದಲ್ಲಿ ಮಹಿಳೆಯರ ಬಗ್ಗೆ ತೋರುತ್ತಿರುವ ಅಸಡ್ಡೆ, ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯ, ಮಹಿಳೆಯ ಸ್ವೇಚ್ಛಾಚಾರಕ್ಕೆ ಸಮಾಜ ಅಡ್ಡಗಾಲು ಹಾಕುತ್ತಿರುವುದನ್ನು ಪ್ರಶ್ನಿಸುತ್ತಾ ಬ್ಲ್ಯಾಕ್ ಅಂಡ್ ವೈಟ್ ನ ಈ ವಿಡಿಯೋ ಎಲ್ಲರ ಗಮನಸೆಳೆದಿದೆ. [ದೀಪಿಕಾಗೆ ಇನ್ನೂ ಹಳೇ ಲವ್ವರ್ ದೇ ಚಿಂತೆ..!]

My Choice have love making before marriage or outside marriage

ಮಹಿಳೆಯರಲ್ಲಿನ ಸ್ವತಂತ್ರ ಭಾವನೆಗಳನ್ನು ಪ್ರತಿಬಿಂಬಿಸುವ ಈ ಕಿರುಚಿತ್ರಕ್ಕೆ ಬಾಲಿವುಡ್ ನಿರ್ದೇಶಕ ಹೋಮಿ ಅದಜನಿಯಾ ಆಕ್ಷನ್ ಕಟ್ ಹೇಳಿದ್ದಾರೆ. "ನಮ್ಮ ದೇಹ, ನಮ್ಮ ಮನಸ್ಸು, ನಮ್ಮಿಷ್ಟ" ಎನ್ನುತ್ತಾ ಮಹಿಳೆಯರು ನಮಗಿಷ್ಟ ಬಂದಂಗೆ ನಾವಿರುತ್ತೇವೆ ಎಂಬ ಉದ್ಘೋಷ ಕೂಗಿದ್ದಾರೆ.

ಈ ವಿಡಿಯೋದಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ 99 ಮಂದಿ ಮಹಿಳಾಮಣಿಗಳು ಭಾಗಿಯಾಗಿರುವುದು ವಿಶೇಷ. ಮಹಿಳೆಯರ ಸ್ವೇಚ್ಛತೆಯ ಬಗ್ಗೆ ಸಮಾಜಕ್ಕೆ ಬಲವಾದ ಸಂದೇಶವನ್ನು ರವಾನಿಸುವಂತೆ ಈ ವಿಡಿಯೋವನ್ನು ರೂಪಿಸಲಾಗಿದೆ. ಈ ವಿಡಿಯೋವನ್ನು ದೇಶದ ಎಲ್ಲಾ ಮಹಿಳೆಯರು ಹಾಗೂ ಸ್ತ್ರೀಶಕ್ತಿಗೆ ಅರ್ಪಿಸಲಾಗಿದೆ.

ಕೈಗೆ ಬಳೆ ತೊಡಬೇಕೆ, ಹಣೆಗೆ ಕುಂಕುಮ ಇಟ್ಟುಕೊಳ್ಳಬೇಕೆ, ಬಾಯ್ ಫ್ರೆಂಡ್ ಗರ್ಲ್ ಫ್ರೆಂಡ್ ನನಗೆ ಯಾರು ಬೇಕು ಬೇಡ ಎಂಬ ಆಯ್ಕೆ ನಮ್ಮದು. ನಮ್ಮ ಆಯ್ಕೆಯಲ್ಲಿ ಪುರುಷರು ಮೂಗು ತೂರಿಸಬೇಡಿ ಎಂಬುದು ಈ 'ಮೈ ಚಾಯ್ಸ್' ವಿಡಿಯೋದ ಸಂದೇಶ.

English summary
Bollywood actress Deepika Padukone dared Indian society and said loudly, "My body, my mind, my choice." The actress along with many other women from different field was seen in a bold video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada