ಹಾಲುಬಣ್ಣದ ಚೆಲುವೆಯ ಫಿಗರ್ ಬಗ್ಗೆ ಹಲವರಿಗೆ ಅನುಮಾನ ; ತಿರುಗೇಟು ನೀಡಿದ ತಮನ್ನಾ

By Srushti

ದೇಹದ ಗಾತ್ರದ ಕುರಿತು ಬಣ್ಣದ ಪ್ರಪಂಚದಲ್ಲಿ ಆಗಾಗ ಮಾತು ಕೇಳಿ ಬರುತ್ತಲೇ ಇರುತ್ತೆ. ಅನೇಕ ನಾಯಕಿಯರು ಈ ಬಾಡಿ ಶೇಮಿಂಗ್‌ಗೆ ಚಿತ್ರರಂಗದಲ್ಲಿ ಗುರಿಯಾಗಿದ್ದು ಇದೆ. ದಪ್ಪಗಿದ್ದರೆ ದಪ್ಪ .. ತೆಳ್ಳಗಿದ್ದರೆ ಕಡ್ಡಿ .. ಎಂದು ಅನೇಕ ನಾಯಕಿಯರನ್ನು ಇಲ್ಲಿ ಕೇವಲ ದೇಹದಾಕಾರದ ಮೇಲೆ ಅಳೆಯಲಾಗಿದೆ. ದೇಹಾಕೃತಿ ಎಂಬ ತೀರಾ ವೈಯಕ್ತಿಕ ವಿಷಯದ ಕುರಿತು ಮಾತನಾಡುವ..

ಮೂಲಕ ಅನೇಕರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನಗಳು ಇಲ್ಲಾಗಿವೆ. ಹೀಗಾಗಿಯೇ ಲಿಂಗ, ಬಣ್ಣ, ಜನಾಂಗದಂತೆ ದೇಹದ ಗಾತ್ರ ಪರಿಗಣಿಸಿ ಮಾಡಲಾಗುವ ಈ ತಾರತಮ್ಯದ ಕುರಿತು ಇಲ್ಲಿಯವರೆಗೆ ಹಲವರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ದೇಹ ರಚನೆಯ ಕುರಿತು ಎದುರಾದ ಟೀಕೆಗಳ ಕುರಿತು ಹಲವರು ಮಾತನಾಡಿದ್ದಾರೆ. ಉದಾಹರಣೆಗೆ ತಮನ್ನಾ ಭಾಟಿಯಾ.

My Curves Aren t Going Anywhere Tamannaah Bhatia Fires Back at Weight-Loss Trolls

ಹೌದು, ತಮನ್ನಾ ಭಾಟಿಯಾ.. ಬಾಲಿವುಡ್, ಟಾಲಿವುಡ್ ಸಿನಿಮಾಗಳ ಮೂಲಕ ಜನಮನ್ನಣೆ ಗಳಿಸುವ ಜತೆಗೆ ಸಾಕಷ್ಟು ಬೇಡಿಕೆ ಹೊಂದಿರುವ ಸ್ಟಾರ್ ನಾಯಕಿ.''ಚಾಂದ್​ಸ ರೋಷನ್​ ಚೆಹ್ರಾ'' ಮೂಲಕ ಚಿತ್ರರಂಗವನ್ನ 19 ವರ್ಷಗಳ ಹಿಂದೆ ಚಿತ್ರರಂಗ ಪ್ರವೇಶಿಸಿದ್ದ ಈ ಹಾಲು ಬಣ್ಣದ ಹುಡುಗಿಯ ಕೈ ಹಿಡಿದಿದ್ದು ಮಾತ್ರ ದಕ್ಷಿಣ ಭಾರತ.

ಮೊದಲ ಚಿತ್ರದಲ್ಲಿಯೇ ಸೋಲಿನ ಕಹಿಯನ್ನ ಉಂಡ ತಮನ್ನಾ, ಆ ನಂತರ ''ಶ್ರೀ'' ಹಾಗೂ ''ಕೇಡಿ'' ಚಿತ್ರದಲ್ಲಿ ಅಭಿನಯಿಸಿದರು. ಆದರೆ ಇವರಿಗೆ ಹೆಸರು ತಂದು ಕೊಟ್ಟಿದ್ದು ಮಾತ್ರ ''ಹ್ಯಾಪಿ ಡೇಸ್''. ಅಲ್ಲಿಂದಾಚೆ ಒಂದಾದ ಮೇಲೊಂದು ಸಿನಿಮಾ. ಒಂದಾದ ಮೇಲೊಂದು ಗೆಲುವು.

ಇನ್ನೂ ತಮನ್ನಾ ಮೊದಲಿಂದ ಸಪೂರ ಸುಂದರಿ. ಹಾಲಬಣ್ಣದ ಚೆಲುವೆ. ಇವರ ಈ ಅಂದ ಚೆಂದಕ್ಕೆ ಹಲವರು ಮರಳಾಗಿದ್ದು ಇದೆ. ಕೊಂಡಾಡಿದ್ದು ಇದೆ. ಕೊಂಡಾಡುವ ಭರದಲ್ಲಿ ಯಡವಟ್ಟು ಮಾಡಿಕೊಂಡ ಉದಾಹರಣೆಗಳು ಕೂಡ ಚಿತ್ರರಂಗದಲ್ಲಿವೆ.

ಇಂಥಾ ತಮನ್ನಾ ಅವರ ದೇಹದಾಕಾರದಲ್ಲಿ ಅಂದು ಮತ್ತು ಇಂದು ಹೆಚ್ಚಿನ ಬದಲಾವಣೆಗಳಾಗಿಲ್ಲ. ಆದರೂ ಕೂಡ ಕೆಲವರಿಗೆ ಅನುಮಾನ ಇದೆ. ದೇಹದ ತೂಕವನ್ನು ಇಳಿಸಲು ತಮನ್ನಾ ಓಝೆಂಪಿಕ್ (Ozempic) ಎಂಬ ಇಂಜೆಕ್ಷನ್ ಪಡೆಯುತ್ತಾರೆ ಎನ್ನುವ ಗುಮಾನಿ ಇದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತಮನ್ನಾ ಅವರನ್ನು ಒಂದು ವರ್ಗ ಟ್ರೋಲ್ ಕೂಡ ಇತ್ತೀಚೆಗೆ ಮಾಡಿದೆ. ಇವೆಲ್ಲದಕ್ಕೂ ಈಗ ತಮನ್ನಾ ಉತ್ತರ ನೀಡಿದ್ದಾರೆ.

My Curves Aren t Going Anywhere Tamannaah Bhatia Fires Back at Weight-Loss Trolls

ಈ ಕುರಿತು ''ಹಾರ್ಪರ್ಸ್ ಬಜಾರ್‌''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ತಮನ್ನಾ ತೀರಾ ಚಿಕ್ಕ ವಯಸ್ಸಿನಿಂದಲೇ ನನ್ನ ದೇಹ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದೆ. ಹೀಗಾಗಿ ನನ್ನ ಬದುಕಿನಲ್ಲಿ ಮರೆಮಾಚುವಂತಹದ್ದು ಏನೂ ಇಲ್ಲ ಎಂದು ಹೇಳಿದ್ದಾರೆ. ನಾನು ಯಾವ ಓಝೆಂಪಿಕ್ ಕೂಡ ತೆಗೆದುಕೊಳ್ಳಲ್ಲ ಎಂದಿದ್ದಾರೆ. ಈ ಮೂಲಕ ಟ್ರೋಲಿಗರಿಗೆ ತಿರುಗೇಟು ನೀಡಿದ್ಧಾರೆ.

ನಾನು ನನ್ನ 20ನೇ ವಯಸ್ಸಿನವರೆಗೆ ತೆಳಗ್ಗಿದ್ದೆ ಎಂದು ಹೇಳಿರುವ ತಮನ್ನಾ ಕೊರೊನಾದ ದಿನಗಳಲ್ಲಿ ತೂಕದ ಸಮಸ್ಯೆಯನ್ನು ನಾನು ಎದುರಿಸಬೇಕಾಗಿ ಬಂತು ಎಂದು ಹೇಳಿದ್ಧಾರೆ. ಇನ್ನೂ ನಾನು ಮೊದಲಿಂದ ತಿಂಡಿಪೋತಿ. ಡಯಟ್ ಮಾಡುವುದೆಲ್ಲಾ ನನಗೆ ಕೊರೊನಾ ದಿನಗಳಲ್ಲಿ ಕಷ್ಟಕರವಾಗಿತ್ತು ಎಂದು ಹೇಳಿರುವ ತಮನ್ನಾ, ಆ ನಂತರ ಮತ್ತೆ ನಾನು ಕ್ಯಾಮರಾ ಎದುರಿಸಬೇಕಾಗಿತ್ತು. ಆ ಸಮಯದಲ್ಲಿ ನನಗೆ ಹೊಟ್ಟೆ ಬಂದಿದೆಯಾ..? ಎಂಬ ಚಿಂತೆ ನನಗೆ ಕಾಡಲು ಶುರುವಾಗಿತ್ತು ಎಂದು ಹೇಳಿದ್ಧಾರೆ. ನನ್ನ ಹೊಟ್ಟೆ ಹೊರ ಬರುತ್ತಿದೆ. ನನ್ನ ದೇಹಕ್ಕೆ ಏನಾಗುತ್ತಿದೆ ಎಂಬ ಪ್ರಶ್ನೆಯನ್ನು ನನ್ನನ್ನೂ ನಾನೇ ಕೇಳಿಕೊಳ್ಳುತ್ತಿದ್ದೆ ಎಂದಿದ್ದಾರೆ.

ನನ್ನ 30ರ ಪ್ರಾಯದಲ್ಲಿ ಕೂಡ ನನಗೆ ಇದೇ ತರಹದ ಅನುಭವ ಆಯ್ತು ಎಂದು ಹೇಳಿರುವ ತಮನ್ನಾ ನಾನು ಸಿಂಧಿ ಹೀಗಾಗಿ ನನ್ನ ದೇಹದಾಕಾರದಲ್ಲಿ ಹೆಚ್ಚಿನ ಬದಲಾವಣೆಗಳಾಗಲ್ಲ. ಸೊಂಟದ ಅಳತೆ ಕೂಡ ಬದಲಾಗುವುದಿಲ್ಲ ಎಂದು ಹೇಳಿದ್ದಾರೆ. ನನ್ನ ದೇಹದ ಮೂಳೆ ರಚನೆಯೇ ಹಾಗಿದೆ ಎಂದು ಹೇಳಿದ್ಧಾರೆ.

ಮುಂದುವರೆದು ಜಾಗತಿಕ ಸೌಂದರ್ಯ ಮಾನದಂಡಗಳನ್ನು ನಾನು ಯಾವತ್ತು ಅನುಸರಿಸುವುದಿಲ್ಲ ಎಂದು ಹೇಳಿರುವ ತಮನ್ನಾ, ಋತು ಚಕ್ರದ ಸಮಯದಲ್ಲಿ ಪ್ರತಿ ಮಹಿಳೆಯ ದೇಹದಲ್ಲಿ ಬದಲಾವಣೆಗಳಾಗುತ್ತವೆ ಅದರನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬೇಕು ಎಂದು ಹೇಳಿದ್ಧಾರೆ.

More from Filmibeat

English summary
The actress champions body positivity! Tamannaah Bhatia shuts down critics and embraces her natural curves, refusing to let weight-loss trolls dictate her self-image.
Read more about: tamanna tamannaah body
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X