ಶ್ರೀದೇವಿಗಾಗಿ ನನ್ನ ತಾಯಿಯನ್ನು ತ್ಯಜಿಸಿದ ನನ್ನ ಅಪ್ಪ: ಅರ್ಜುನ್ ಕಪೂರ್

ಬಾಲಿವುಡ್‌ನಲ್ಲಿ ನಟ-ನಟಿಯರಿಗೆ ಎರಡು ಮದುವೆ ಎಂಬುದು ಸಾಮಾನ್ಯ ಎಂಬಂತಾಗಿದೆ. ಆದರೆ ಹೀಗೆ ಎರಡು ಮದುವೆಯಿಂದ ಮಕ್ಕಳ ಮೇಲಾಗುವ ಪರಿಣಾಮದ ಬಗ್ಗೆ ಯಾರೂ ಹೆಚ್ಚಾಗಿ ತಲೆಕೆಡಿಸಿಕೊಂಡಿಲ್ಲ. ಈ ಬಗ್ಗೆ ಕ್ಷೀಣ ದನಿಗಳು ಆಗೊಮ್ಮೆ-ಈಗೊಮ್ಮೆ ಕೇಳಿಬರುವುದುಂಟು.

ಇದೀಗ ಬಾಲಿವುಡ್‌ನ ಖ್ಯಾತ ನಟ ಅರ್ಜುನ್ ಕಪೂರ್ ಅವರು ತಮ್ಮ ತಂದೆ ನಟಿಯೊಬ್ಬರಿಗಾಗಿ ತಮ್ಮನ್ನು ಬಿಟ್ಟು ಹೋದ ಸಂದರ್ಭವನ್ನು ಅದರಿಂದ ತಾವು ಎದುರಿಸಿದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ.

ಅರ್ಜುನ್ ಕಪೂರ್ ತಂದೆ ಖ್ಯಾತ ನಿರ್ಮಾಪಕ ಬೋನಿ ಕಪೂರ್. ಅರ್ಜುನ್ ಕಪೂರ್ ತಾಯಿ ಮೋನಾ ಶೌರಿ ಕಪೂರ್. ಬೋನಿ ಹಾಗೂ ಮೋನಾ 1983 ರಲ್ಲಿ ವಿವಾಹವಾದರು. ಆದರೆ 1996 ರಲ್ಲಿ ಮೋನಾಗೆ ವಿಚ್ಛೇಧನ ನೀಡಿ ಆಗಿನ ಖ್ಯಾತ ನಟಿ ಶ್ರಿದೇವಿ ಅವರನ್ನು ಬೋನಿ ವಿವಾಹವಾದರು.

ಈ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿರುವ ಅರ್ಜುನ್ ಕಪೂರ್, 'ಶ್ರೀದೇವಿಗಾಗಿ ನನ್ನ ತಂದೆ ನಮ್ಮನ್ನು ಬಿಟ್ಟು ಹೋದಾಗ ನಾನಿನ್ನೂ ಚಿಕ್ಕವನು. ಪ್ರೀತಿ, ಮದುವೆ ಇದೆಲ್ಲ ನನಗೆ ಅರ್ಥವಾಗಿರಲಿಲ್ಲ. ಆದರೆ ಆಗ ಬಹಳ ಹತಾಶೆ, ಸಿಟ್ಟು ಅನುಭವಿಸಿದ್ದೆ. ಅದರಿಂದ ಬಾಲ್ಯದಲ್ಲಿ ಸಮಸ್ಯೆಗಳನ್ನು ಸಹ ಅನುಭವಿಸಿದ್ದೇನೆ' ಎಂದಿದ್ದಾರೆ ಅರ್ಜುನ್ ಕಪೂರ್.

ಎರಡು ಬಾರಿ ಪ್ರೀತಿ ಆಗಬಾರದು ಎಂದೇನೂ ಇಲ್ಲ: ಅರ್ಜುನ್ ಕಪೂರ್

ಎರಡು ಬಾರಿ ಪ್ರೀತಿ ಆಗಬಾರದು ಎಂದೇನೂ ಇಲ್ಲ: ಅರ್ಜುನ್ ಕಪೂರ್

'ಆದರೆ ನಾನು ನಮ್ಮ ತಂದೆಯನ್ನು ಅರ್ಥ ಮಾಡಿಕೊಂಡಿದ್ದೇನೆ. ಎರಡನೇ ಬಾರಿ ಪ್ರೀತಿಯಲ್ಲಿ ಬೀಳುವುದು ಅಪರಾಧವೇನಲ್ಲ. ಅವರಿಗೆ ಇಷ್ಟವಾದುದನ್ನು ಅವರು ಮಾಡಿದರು. ಪ್ರೀತಿ ಎಂಬುದು ಬಹಳ ಸಂಕೀರ್ಣವಾದುದು. ಒಮ್ಮೆ ಮಾತ್ರವೇ ಪ್ರೀತಿ ಆಗುತ್ತದೆ ಎಂದು 'ಫಿಲ್ಮೀ' ಮಾದರಿಯಲ್ಲಿ ಹೇಳಲಾಗುವುದಿಲ್ಲ. ಅವರು ಆಗ ಮಾಡಿದ್ದನ್ನು ನಾನು ಈಗ ವಿಶ್ಲೇಷಿಸಲು ಹೋಗುವುದಿಲ್ಲ' ಎಂದಿದ್ದಾರೆ ಅರ್ಜುನ್.

ಆಗ ಅರ್ಥವಾಗಿರಲಿಲ್ಲ, ಈಗ ಅರ್ಥವಾಗುತ್ತಿದೆ: ಅರ್ಜುನ್

ಆಗ ಅರ್ಥವಾಗಿರಲಿಲ್ಲ, ಈಗ ಅರ್ಥವಾಗುತ್ತಿದೆ: ಅರ್ಜುನ್

ಅದೇ ಸಂದರ್ಶನದಲ್ಲಿ, 'ನೀವು ಒಬ್ಬರ ಜೊತೆಗೆ ಪ್ರೀತಿಯಲ್ಲಿರುತ್ತೀರಿ, ಮತ್ತೆ ಇನ್ನೊಬ್ಬರನ್ನು ಪ್ರೀತಿ ಮಾಡುತ್ತೀರಿ. ಇದನ್ನು ಅರ್ಥ ಮಾಡಿಕೊಳ್ಳುವುದು ಆಗ ನನಗೆ ಕಷ್ಟವಾಗಿತ್ತು. ಈಗ ಅರ್ಥವಾಗುತ್ತಿದೆ. ಏನೇ ಆಗಲಿ ನಾನು ನನ್ನ ತಂದೆಗೆ ಒಳ್ಳೆಯ ಮಗನಾಗಲು ಯತ್ನಿಸುತ್ತಿದ್ದೇನೆ. ನನ್ನ ತಾಯಿಯೂ ನನಗೆ ಅದನ್ನೇ ಹೇಳಿಕೊಟ್ಟಿದ್ದಾರೆ' ಎಂದಿದ್ದಾರೆ ಅರ್ಜುನ್ ಕಪೂರ್.

ಮಲೈಕಾ ಅರೋರಾ ಜೊತೆಗೆ ಲಿವ್ ಇನ್ ರಿಲೇಷನ್

ಮಲೈಕಾ ಅರೋರಾ ಜೊತೆಗೆ ಲಿವ್ ಇನ್ ರಿಲೇಷನ್

ತಂದೆ ಬೋನಿ ಕಪೂರ್ ತಮ್ಮ ತಾಯಿಯನ್ನು ಬಿಟ್ಟು ಬೇರೊಬ್ಬರನ್ನು ವಿವಾಹವಾಗಿರುವ ಬಗ್ಗೆ ಮಾತನಾಡಿರುವ ಅರ್ಜುನ್ ಕಪೂರ್ ಈಗ ಪ್ರೀತಿಸುತ್ತಿರುವುದು, ಲಿವ್‌ ಇನ್ ರಿಲೇಷನ್‌ನಲ್ಲಿರುವುದು ಮದುವೆಯಾಗಿ ಮಕ್ಕಳಿರುವ ನಟಿಯೊಂದಿಗೆ. ಅರ್ಬಾಜ್ ಖಾನ್ ಪತ್ನಿ ಮಲೈಕಾ ಅರೋರ ಜೊತೆಗೆ ಲಿವ್ ಇನ್ ರಿಲೇಷನ್‌ನಲ್ಲಿದ್ದಾರೆ ಅರ್ಜುನ್ ಕಪೂರ್. ಮಲೈಕಾಗೆ 10 ವರ್ಷದ ಮಗನಿದ್ದಾನೆ.

Recommended Video

ಕಿರಣ್ ರಾಜ್ ಮನವಿಯನ್ನು ಸ್ವೀಕರಿಸುತ್ತಾರಾ ಸಿಎಂ ಯಡಿಯೂರಪ್ಪ ?? | Filmibeat Kannada
ಶ್ರೀದೇವಿ ಬಗ್ಗೆ ಸಿಟ್ಟು ಹೊಂದಿದ್ದ ಅರ್ಜುನ್ ಕಪೂರ್

ಶ್ರೀದೇವಿ ಬಗ್ಗೆ ಸಿಟ್ಟು ಹೊಂದಿದ್ದ ಅರ್ಜುನ್ ಕಪೂರ್

ಶ್ರೀದೇವಿ ಹಾಗೂ ಅವರ ಮಕ್ಕಳಾದ ಜಾಹ್ನವಿ ಕಪೂರ್ ಹಾಗೂ ಖುಷಿ ಕಪೂರ್ ಜೊತೆಗೆ ಆತ್ಮೀಯ ಬಂಧನವನ್ನು ಅರ್ಜುನ್ ಕಪೂರ್ ಹೊಂದಿರಲಿಲ್ಲ. ಶ್ರೀದೇವಿ ಬದುಕಿದ್ದಾಗ ಅವರ ಕುರಿತಾಗಿ ಸಂದರ್ಶನಗಳಲ್ಲಿ ಕೇಳಲಾಗುತ್ತಿದ್ದ ಯಾವ ಪ್ರಶ್ನೆಗೂ ಅರ್ಜುನ್ ಕಪೂರ್ ಉತ್ತರಿಸಿರಲಿಲ್ಲ. ಆದರೆ ಶ್ರೀದೇವಿ ಮರಣಾನಂತರ ಜಾಹ್ನವಿ ಹಾಗೂ ಖುಷಿಯೊಂದಿಗೆ ಆಪ್ತವಾದ ಬಂಧನವನ್ನು ಅರ್ಜುನ್ ಕಪೂರ್ ಬೆಳೆಸಿಕೊಂಡರು.

More from Filmibeat

English summary
Arjun Kapoor said my dad Boney Kapoor left us for Sridevi i was frustrated when i was child but now i can understand him.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X