"ನನ್ನ ಗಂಡ ನನಗೆ ಮೋಸ ಮಾಡಿದ್ದಾನೆ" ಎಂದು ವಿಡಿಯೋ ಪೋಸ್ಟ್ ಮಾಡಿದ ಸನ್ನಿ ಲಿಯೋನ್
ಬಾಲಿವುಡ್ ಅಂಗಳದಲ್ಲಿ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಹವಾ ಕಮ್ಮಿ ಆಗಿದೆ. ಕೆನಡಾ ಮೂಲದ ಭಾರತೀಯ-ಅಮೇರಿಕನ್ ನಟಿ ಸನ್ನಿ ಒಂದ್ಕಾಲದಲ್ಲಿ ಪೋರ್ನ್ ಸ್ಟಾರ್ ಆಗಿದ್ದರು. ಹಿಂದಿ ಬಿಗ್‌ಬಾಸ್ ಶೋ ಮೂಲಕ ಬಾಲಿವುಡ್‌ಗೆ ಅಡಿ ಇಟ್ಟರು. ಸದ್ಯ ಪೋರ್ನ್ ಇಂಡಸ್ಟ್ರಿಗೆ ಗುಡ್‌ಬೈ ಹೇಳಿ ಬಾಲಿವುಡ್‌ನಲ್ಲಿ ಗುರ್ತಿಸಿಕೊಂಡಿದ್ದಾರೆ. ಗಂಡನ ಸಮೇತ ಮುಂಬೈನಲ್ಲಿ ಸೆಟ್ಲ್ ಆಗಿದ್ದಾರೆ.
ಒಂದು ಹೆಣ್ಣು ಮಗುವನ್ನು ದತ್ತು ಪಡೆದ ದಂಪತಿ ನಂತರ ಸರೋಗಸಿ ವಿಧಾನದಲ್ಲಿ ಅವಳಿ ಗಂಡು ಮಕ್ಕಳ ಪೋಷಕರಾಗಿದ್ದಾರೆ. ಸದ್ಯ ಮೂವರು ಮಕ್ಕಳ ಜೊತೆ ಸನ್ನಿ ಲಿಯೋನ್ ಹಾಗೂ ಪತಿ ಡೇನಿಯಲ್ ವೆಬರ್ ಸುಖೀ ಜೀವನ ನಡೆಸುತ್ತಿದ್ದಾರೆ. ಇನ್ನು ಒಂದ್ಕಾಲದಲ್ಲಿ ಸನ್ನಿ ಲಿಯೋನ್ ಕ್ರೇಜ್ ಭಾರತದಲ್ಲಿ ಜೋರಾಗಿತ್ತು. ಆದರೆ ಈಗ ಆ ಕ್ರೇಜ್ ಇಲ್ಲ. ಆಕೆ ನಟಿಸಿದರೆ ಪ್ರೇಕ್ಷಕರು ಸಿನಿಮಾ ನೋಡ್ತಾರೆ, ಒಂದು ಐಟಂ ಸಾಂಗ್‌ಗೆ ಕುಣಿದ್ರೆ ಸಿನಿಮಾಗೆ ಹೈಪ್ ಬರುತ್ತದೆ ಎನ್ನುವ ಕಾಲ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.

ಇತ್ತೀಚೆಗೆ ಸನ್ನಿ ಲಿಯೋನ್ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಕೊನೆ ಪಕ್ಷ ಸ್ಪೆಷಲ್ ಸಾಂಗ್ಸ್‌ಗೆ ಹೆಜ್ಜೆ ಹಾಕುವ ಅವಕಾಶ ಕೂಡ ಸಿಗುತ್ತಿಲ್ಲ. ಬಾಲಿವುಡ್‌ನಲ್ಲಿ ಅವಕಾಶಗಳು ಕಮ್ಮಿ ಆದ ಬಳಿಕ ಆಕೆ ಸೌತ್ ಸಿನಿಮಾಗಳ ಸ್ಪೆಷಲ್ ಸಾಂಗ್‌ಗಳಿಗೆ ಕುಣಿದರು. ಕನ್ನಡದ ಒಂದೆರಡು ಹಾಡುಗಳಿಗೂ ಸನ್ನಿ ಸೊಂಟ ಬಳುಕಿಸಿ ಹೋಗಿದ್ದಾರೆ. ಇನ್ನು ಸನ್ನಿ ಲಿಯೋನ್‌ಗೆ ಮಂಡ್ಯದಲ್ಲಿ ಅಭಿಮಾನಿಗಳ ಸಂಘ ಕೂಡ ಇದೆ. ಆಕೆಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕೇಕ್ ಕತ್ತರಿಸಿ, ಅನ್ನದಾನ ಮಾಡಿ ಸಂಭ್ರಮಿಸುತ್ತಾರೆ.
ನನ್ನ ಗಂಡ ಮೋಸ ಮಾಡಿದ್ದಾನೆ
ಸನ್ನಿ ಲಿಯೋನ್ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾಳೆ. "ನನ್ನ ಗಂಡ ಮೋಸ ಮಾಡಿದ್ದಾನೆ" ಎಂದು ಅದಕ್ಕೆ ಕ್ಯಾಪ್ಷನ್ ಕೊಟ್ಟಿದ್ದಾಳೆ. ಆದರೆ ಅದು ಫನ್ನಿ ವಿಡಿಯೋ ಎನ್ನುವುದು ನಂತರ ಗೊತ್ತಾಗಿದೆ. ತಮಾಷೆಗಾಗಿ ಮಾಜಿ ನೀಲಿತಾರೆ ಈ ಪೋಸ್ಟ್ ಮಾಡಿದ್ದಾಳೆ. ಪತಿ ಡೇನಿಯಲ್ ತನಗೆ ಗೊತ್ತಿಲ್ಲದೇ ಐಸ್ ಕ್ರೀಮ್ ತಿಂದಿದ್ದಾನೆ ಎಂದು ಸನ್ನಿ ಲಿಯೋನ್ ಆರೋಪಿಸಿದ್ದಾಳೆ.
ವಿಡಿಯೋದಲ್ಲಿ ಏನಿದೆ?
ಅಡುಗೆ ಮನೆಯಲ್ಲಿ ಫ್ರಿಡ್ಜ್ ಬಳಿ ಇರುವ ಡೇನಿಯಲ್, ಹಾಲ್‌ನಲ್ಲಿ ಇರುವ ಕನ್ನಡಿಯಲ್ಲಿ ಸನ್ನಿಗೆ ಕಾಣಿಸುತ್ತಿದ್ದಾನೆ. ಡೇನಿಯಲ್ ಗುಟ್ಟಾಗಿ ಐಸ್ ಕ್ರೀಂ ತಿನ್ನುವುದನ್ನು ಸನ್ನಿ ಕಿಟಕಿ ಗಾಜಿನಲ್ಲಿ ನೋಡಿದ್ದಾಳೆ. ಗಂಡ ಏನು ಹೇಳ್ತಾನೆ ನೋಡೋಣ ಎಂದು ನೀವು ಅಲ್ಲಿ ಏನು ಮಾಡುತ್ತಿದ್ದೀರಾ ಎಂದು ಕೇಳಿದ್ದಾಳೆ. ನೀರು ಕುಡಿಯುತ್ತಿದ್ದೆ ಎಂದು ಆತ ಹೇಳಿದ್ದಾನೆ. ನಾನು ಕಿಟಕಿ ಗಾಜಿನಲ್ಲಿ ನೋಡಿದೆ. ನೀನು ಐಸ್ ಕ್ರೀಮ್ ತಿಂದಿದ್ದು ಎಂದು ಸನ್ ಹೇಳಿದಾಗ ಆತ ಶಾಕ್ ಆಗಿದ್ದಾನೆ. ನೀನು ನನ್ನ ಮೇಲೆ ಕಣ್ಣಿಟ್ಟಿದ್ದೀಯಾ ಎಂದು ಕೇಳಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.

ಬಾಲಿವುಡ್‌ನಲ್ಲಿ ಸನ್ನಿ
2012ರಲ್ಲಿ 'ಜಿಸ್ಮ್' ಸಿನಿಮಾ ಮೂಲಕ ಸನ್ನಿ ಲಿಯೋನ್ ಬಾಲಿವುಡ್ ಪ್ರವೇಶಿಸಿದಳು. 'ರಾಗಿಣಿ ಎಂಎಂಎಸ್-2', 'ಜಾಕ್‌ಪಾಟ್' ಸಿನಿಮಾಗಳಲ್ಲಿ ಕೊಂಚ ಬೋಲ್ಡ್ ಆಗಿ ನಟಿಸಿದ್ದರು. ಆದರೆ ಬಾಲಿವುಡ್‌ನಲ್ಲಿ ನಟಿಸೋಕೆ ಹೆಚ್ಚು ಅವಕಾಶಗಳು ಸಿಗದೇ ಇದ್ದಾಗ 'ಹೇಟ್ ಸ್ಟೋರಿ- 2', 'ರಯೀಸ್' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್ಸ್‌ಗೆ ಹೆಜ್ಜೆ ಹಾಕಿದ್ದಳು. ನಂತರ ಮರಾಠಿ, ತೆಲುಗು, ತಮಿಳು, ಕನ್ನಡ ಸಿನಿಮಾಗಳಲ್ಲಿ ಐಟಂ ಸಾಂಗ್‌ಗಳಲ್ಲಿ ಕುಣಿದು ರಂಗೇರಿಸಿದಳು.
ಡಿಂಗರ ಬಿಲ್ಲಿಯಾಗಿ ಸನ್ನಿ
ಇತ್ತೀಚೆಗೆ ಕನ್ನಡದ 'ಚಾಂಪಿಯನ್' ಚಿತ್ರದ ಸ್ಪೆಷಲ್ ಸಾಂಗ್‌ಗೆ ಸನ್ನಿ ಲಿಯೋನ್ ಹೆಜ್ಜೆ ಹಾಕಿದ್ದರು. ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಮಂಡ್ಯ ಅಭಿಮಾನಿಗಳ ಪ್ರೀತಿ ಕಂಡು ಖುಷಿಯಾದರು. ಚಿತ್ರದಲ್ಲಿ 'ಡಿಂಗರ ಬಿಲ್ಲಿ' ಆಗಿ ಕುಣಿದರೂ ಅದು ಚಿತ್ರಕ್ಕೆ ಪ್ಲಸ್ ಆಗಲಿಲ್ಲ. ಸದ್ಯ ಐದಾರು ಸಣ್ಣ ಸಿನಿಮಾಗಳು ಆಕೆಯ ಕೈಯಲ್ಲಿವೆ. ಹಿಂದಿ ಜೊತೆಗೆ ಈಗ ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.


Click it and Unblock the Notifications











