ಆಮಿರ್ ಖಾನ್ ಸೋದರಳಿಯನ ಜೊತೆ ಲಿವ್‌-ಇನ್ ಸಂಬಂಧ; 'ಲವ್ ಜಿಹಾದ್' ಆರೋಪಕ್ಕೆ 'ಹುಡುಗ ಹುಡುಗಿ' ನಟಿ ಲೇಖಾ ಖಡಕ್ ಉತ್ತರ

ಪ್ರೀತಿ ಹೃದಯದ ಭಾಷೆ ಎನ್ನುವುದು ಲೋಕಾರೂಢಿ. ಎರಡು ಹೃದಯಗಳ ಪಿಸುಮಾತಿಗೆ ಯಾವುದೇ ಗಡಿಗಳಿಲ್ಲ. ಭಾಷೆಯ ಹಂಗಿಲ್ಲ. ಎಲ್ಲ ಅಡೆತಡೆಗಳನ್ನು ಮೀರಿ ಬೆಳೆಯುವ ಶಕ್ತಿ ಇರುವುದು ಕೇವಲ ಪ್ರೀತಿಗೆ ಮಾತ್ರ. ಆದರೆ ಈಗೀಗ ಈ ಪ್ರೀತಿ ಧರ್ಮದ ಬೇಲಿಗಳ ನಡುವೆ ಸಿಲುಕಿ ನಲುಗುತ್ತಿದೆ. ಅದರಲ್ಲಿಯೂ ಭಾರತದಲ್ಲಿ ಸದ್ಯ ಧರ್ಮಾಧಾರಿತ ವ್ಯವಸ್ಥೆಯಲ್ಲಿ ಜನ್ಮ ಸ್ಥಾನ ಮತ್ತು ಸಮಯದಿಂದ ಹಿಡಿದು ಸಾಯುವ ತನಕ ಜಾತಿ ಮತ್ತು ಧರ್ಮ ಎಲ್ಲವನ್ನೂ ನಿಭಾಯಿಸುತ್ತೆ.

ಕೋಮುದ್ವೇಷದ ಖಾಯಿಲೆ ಬೇರೆ ಎಲ್ಲ ದೇಶಕ್ಕಿಂತ ಭಾರತವನ್ನು ಹೈರಾಣು ಮಾಡಿದೆ. ಕುಂತರು, ನಿಂತರು ತಪ್ಪೆನ್ನುವ ಒಂದು ವರ್ಗ ಧರ್ಮದ ಅಸ್ತ್ರದ ಮೂಲಕಪ್ರೀತಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಪ್ರೀತಿಯನ್ನು ರಾಜಕೀಯ ಮತ್ತು ಧರ್ಮದ ಕನ್ನಡಕದ ಮೂಲಕ ನೋಡುತ್ತಿದೆ. ಅಂತರ ಧರ್ಮಿಯ ಸಂಬಂಧಗಳನ್ನು ಕೇವಲ ವೈಯಕ್ತಿಕ ಆಯ್ಕೆಯಾಗಿ ನೋಡುವ ಬದಲು, ಷಡ್ಯಂತ್ರ .. ಪಿತೂರಿ .. ಎಂಬಂತೆ ಬಿಂಬಿಸಲಾಗುತ್ತಿದೆ. ಪವಿತ್ರವಾದ ಪ್ರೀತಿಗೆ ಲವ್ ಜಿಹಾದ್ ಎಂಬ ಲೆಬಲ್ ಹಚ್ಚುವ ಮೂಲಕ ದ್ವೇಷವನ್ನು ಹೆಚ್ಚಿಸುವ ಕೆಲಸವನ್ನು ಒಂದು ಬಣ ಮಾಡುತ್ತಿದೆಯೇ ಹೊರತು ಸಂಬಂಧಕ್ಕೆ ಈಗ ಬೆಲೆ ಕೊಡುತ್ತಿಲ್ಲ. ಸದ್ಯ ಇಂತಹದ್ದೇ ಒಂದು ವಿರೋಧ ಮತ್ತು ಟ್ರೋಲ್‌ಗೆ ಬಲಿಯಾಗುತ್ತಿರುವ ಲೇಖಾ ವಾಷಿಂಗ್ಟನ್ ಸದ್ಯ ಕೆರಳಿ ಕೆಂಡವಾಗಿದ್ಧಾರೆ.

My Life My Love Lekha Washington Shuts Down Love Jihad Labels Over Relationship With Imran Khan

ಹೌದು, ಲೇಖಾ ವಾಷಿಂಗ್ಟನ್.. ಚರ್ತುಭಾಷಾ ತಾರೆ. ಹಿಂದಿ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿರುವ ಲೇಖಾ 2010ರಲ್ಲಿ ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಬಂದಿದ್ದ ''ಹುಡುಗ-ಹುಡುಗಿ'' ಚಿತ್ರದ ಮೂಲಕ ಕನ್ನಡಕ್ಕೂ ಬಂದಿದ್ದರು. ಇನ್ನು ಲೇಖಾ ಕೇವಲ ನಾಯಕಿ ಮಾತ್ರ ಅಲ್ಲ. ನಿರೂಪಕಿ ಕೂಡ ಹೌದು.

ಇಂಥಾ ಲೇಖಾ ವಾಷಿಂಗ್ಟನ್ ಕಳೆದ 6-7 ವರ್ಷಗಳಿಂದ ಬಾಲಿವುಡ್‌ನ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಅವರ ಸೋದರಳಿಯ ಇಮ್ರಾನ್ ಖಾನ್ ಅವರ ಜೊತೆ ಮದುವೆಯಾಗದೇ ಒಂದೇ ಮನೆಯಲ್ಲಿ ಸಂಸಾರ ಮಾಡುತ್ತಿದ್ದಾರೆ. ಲಿವ್ ಇನ್ ಸಂಬಂಧದಲ್ಲಿದ್ದಾರೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಆದರೆ, ಇವರ ಪ್ರೀತಿಗೆ ಕೆಲವರು ಆಗಲೇ ಹೇಳಿದಂತೆ ಲವ್ ಜಿಹಾದ್ ಪಟ್ಟವನ್ನು ಕಟ್ಟಿದ್ದಾರೆ. ಈ ಹಿನ್ನೆಲೆ ತಮ್ಮ ಮನದ ಮಾತುಗಳನ್ನು ಲೇಖಾ ಸದ್ಯ ಹಂಚಿಕೊಂಡಿದ್ದಾರೆ. ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

''ಮನಿ ಕಂಟ್ರೋಲ್‌''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಲೇಖಾ ವಾಷಿಂಗ್ಟನ್ ದ್ವೇಷವನ್ನು ನಾನು ಹರಡಲಾರೆ ಎಂದಿದ್ದಾರೆ. ಅಸಂಬದ್ಧ ಮಾತುಗಳನ್ನು ಕೇಳಿ ನಕ್ಕು ಸುಮ್ಮನಾಗಬೇಕಷ್ಟೇ ಎಂದಿದ್ದಾರೆ. ನಮ್ಮ ಇಬ್ಬರು ಕುಟುಂಬದವರು ನಮ್ಮನ್ನು ಒಪ್ಪಿಕೊಂಡಿದ್ದಾರೆ, ಅಪ್ಪಿಕೊಂಡಿದ್ದಾರೆ. ಪರಸ್ಪರ ನಮ್ಮ ನಡುವೆ ಗೌರವ ಇದೆ ಎಂದು ಹೇಳಿರುವ ಲೇಖಾ ಒಬ್ಬರಿಗೊಬ್ಬರು ನಾವು ಬೆಂಬಲವಾಗಿ ನಿಲ್ಲುತ್ತೇವೆ ಎಂದು ಹೇಳಿದ್ದಾರೆ. ಮುಕ್ತ ಮನಸಿನ ಕುಟುಂಬ ನಮ್ಮನ್ನು ಸುತ್ತುವರೆದಿದೆ, ಅದ್ಭುತ ವ್ಯಕ್ತಿಗಳು ನನ್ನ ಸುತ್ತ ಇದ್ದಾರೆ ಎಂದು ಹೇಳಿರುವ ಲೇಖಾ ಇವರನ್ನೆಲ್ಲ ಪಡೆದ ನಾನು ಅದೃಷ್ಟವಂತೆ ಎಂದು ಹೇಳಿದ್ದಾರೆ.

ಕಾಲೆಳೆಯುವರು, ಮಾತನಾಡುವವರು ಇದ್ದೇ ಇರುತ್ತಾರೆ ಎಂದು ಹೇಳಿರುವ ಲೇಖಾ ನಮ್ಮ ಸಮಾಜದಲ್ಲಿ ಮಹಿಳೆ ಎಷ್ಟೇ ಸಾಧನೆ ಮಾಡಿರಲಿ, ಎಷ್ಟೇ ಎತ್ತರಕ್ಕೆ ಬೆಳೆದಿರಲಿ, ಆ ಮಹಿಳೆಯನ್ನು ಒಬ್ಬ ಪುರುಷನ ಜೊತೆಯಲ್ಲಿಯೇ ಗುರುತಿಸುತ್ತಾರೆ, ಪುರುಷನ ಜೊತೆ ಸೇರಿ ಮಾತನಾಡುತ್ತಾರೆ ಎಂದಿರುವ ಲೇಖಾ ಇದು ನಮ್ಮ ಸಮಾಜದ ಸಂಕುಚಿತ ಬುದ್ದಿ ಎಂದು ಹೇಳಿದ್ಧಾರೆ.

My Life My Love Lekha Washington Shuts Down Love Jihad Labels Over Relationship With Imran Khan

ಮುಂದುವರೆದು ನಮ್ಮ ಸಮಾಜದಲ್ಲಿ ಮಹಿಳೆಯರನ್ನು ಮೊದಲು ಅವರ ರೂಪದಿಂದ, ಆಮೇಲೆ ಅವರ ವ್ಯಕ್ತಿತ್ವದಿಂದ ಅಳೆಯುತ್ತಾರೆ ಎಂದಿರುವ ಲೇಖಾ ವಾಷಿಂಗ್ಟನ್ ಆನ್‌ಲೈನ್‌ನಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡುವವರು ತಮ್ಮ ವ್ಯಕ್ತಿತ್ವ ಎಂತದ್ದು ಎಂಬುದನ್ನು ತಾವೇ ತೋರಿಸಿಕೊಳ್ಳುತ್ತಿದ್ದಾರೆ ಅಷ್ಟೆ ಎಂದಿದ್ಧಾರೆ. ನಾನು ಯಾವಾಗಲೂ ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮುಂದುವರಿಸುತ್ತೇನೆ. ದ್ವೇಷಿಸುವವರು ದ್ವೇಷ ಮಾಡುತ್ತ ಇರಲಿ, ಪ್ರೀತಿಸುವವರು ಪ್ರೀತಿಸುತ್ತಲೇ ಇರಲಿ.. ಎಂದು ಲೇಖಾ ಹೇಳಿದ್ದಾರೆ.

ಅಂದ್ಹಾಗೇ ಅಮೀರ್ ಖಾನ್ ಪ್ರಭಾವಳಿಯಲ್ಲಿಯೇ ಚಿತ್ರರಂಗಕ್ಕೆ ಬಂದ ಇಮ್ರಾನ್ ಖಾನ್, ತಮ್ಮ ಮೊದಲನೇ ಸಿನಿಮಾ ''ಜಾನೇ ತು ಯಾ ಜಾನೇ ನಾ'' ಚಿತ್ರದ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆದರು. ಆ ನಂತರ.. ಒಂದಾದ ಮೇಲೊಂದು ಸಿನಿಮಾ ಮಾಡಿದರು. ಇದರ ನಡುವೆ ಹೆಣ್ಮಕ್ಕಳ ಕನಸು ಮತ್ತು ಮನಸನ್ನ ನುಚ್ಚು ನೂರು ಮಾಡಿ ಖ್ಯಾತಿಯ ಶಿಖರಕ್ಕೇರಿದ್ದಾಗಲೇ ತಮ್ಮ ಬಾಲ್ಯದ ಗೆಳತಿ ಅವಂತಿಕಾ ಮಲಿಕ್ ಅವರನ್ನು 2011ರಲ್ಲಿ ಮದುವೆ ಆಗಿದ್ದರು.

ಆದರೆ.. ಅದೇನಾಯ್ತೋ ಗೊತ್ತಿಲ್ಲ. ಬಾನೆತ್ತರದಲ್ಲಿ ತೇಲುತ್ತಿದ್ದ ಇಮ್ರಾನ್ ಖಾನ್ ಏಕಾಏಕಿ ಪಾತಾಳಕ್ಕೆ ಕುಸಿದರು. ಮಾಡಿದ ಸಿನಿಮಾ ಗೆಲ್ಲಲಿಲ್ಲ. ವ್ಯೆಯಕ್ತಿಕ ಬದುಕಿನಲ್ಲಿ ಕೂಡ ನೆಮ್ಮದಿ ಸಿಗಲಿಲ್ಲ. ಇಮ್ರಾನ್ ಮತ್ತು ಅವಂತಿಕಾ ನಡುವೆ ಹೊಂದಾಣಿಕೆಯಾಗಲಿಲ್ಲ. ಈ ಕಾರಣಕ್ಕೆ 2019ರಲ್ಲಿ ತಲಾಖ್ ಪಡೆದು ಇಮ್ರಾನ್ ಖಾನ್ ದೂರವಾದರು. ಈ ಜೋಡಿಗೆ ಒಬ್ಬಳು ಮಗಳಿದ್ದಾಳೆ.

ಇನ್ನೂ ಲೇಖಾ ವಾಷಿಂಗ್ಟನ್ ಈ ಹಿಂದೆ ಪತ್ರಕರ್ತ ಪಾಬ್ಲೋ ಚಟರ್ಜಿ ಅವರ ಜೊತೆ 08 ವರ್ಷಗಳ ಕಾಲ ಪ್ರೀತಿಯಲ್ಲಿ ಬಿದ್ದಿದ್ದರು. 05 ವರ್ಷ ಲಿವ್ ಇನ್ ಸಂಬಂಧದಲ್ಲಿದ್ದರು. ಆ ನಂತರ 2017ರಲ್ಲಿ ಮದುವೆ ಕೂಡ ಆದರು. ಮದುವೆಯಾದ ಬೆನ್ನಲ್ಲೇ ವಿಚ್ಛೇದನವನ್ನು ಕೂಡ ಪಡೆದರು.

ಹೀಗೆ ಮೊದಲ ಸಂಬಂಧ ಕಡಿದುಕೊಂಡ ಇಬ್ಬರು ಕೊರೊನಾ ಕಾಲದಲ್ಲಿ ಇಬ್ಬರು ಒಬ್ಬರಿಗೊಬ್ಬರು ಹತ್ತಿರವಾದರು. ವಿಶ್ವದೆಲ್ಲೆಡೆ ಜನ ಕಂಗಲಾದ ಸಮಯದಲ್ಲಿ ಇಮ್ರಾನ್ ಮತ್ತು ಲೇಖಾ ಪ್ರೇಮದ ಅಮಲಿನಲ್ಲಿ ವಾಲಾಡಿದ್ದರು.

ಆಮೀರ್ ಖಾನ್ ಮಗಳು ಇರಾ ಮದುವೆಯಲ್ಲಿ ಇಬ್ಬರು ಜೊತೆ ಜೊತೆಯಾಗಿಯೇ ಬಂದು ನವ ಜೋಡಿಗೆ ಹರಸಿ ಹಾರೈಸಿದರು. ಎಲ್ಲರೆದುರು ನಾವು ಇಬ್ಬರು ಈಗ ಲವ್ ಬರ್ಡ್ಸ್‌ ಎಂದು ಘಂಟಾಘೋಷವಾಗಿ ಹೇಳಿದರು. ಹೀಗೆ ಹೆಚ್ಚು ಕಡಿಮೆ ಕಳೆದ 7 ವರ್ಷದಿಂದ ಒಬ್ಬರನ್ನೊಬ್ಬರು ಇಷ್ಟ ಪಡ್ತಿರುವ ಇಮ್ರಾನ್ ಖಾನ್ ಮತ್ತು ಲೇಖಾ ವಾಷಿಗ್ಟಂನ್ ಈಗ ಲಿವ್ ಇನ್ ರಿಲೇಷನ್ ಷಿಪ್ ನಲ್ಲಿದ್ದಾರೆ. ಜೊತೆಯಾಗಿ ಕಾಲ ಕಳೆಯುತ್ತಿದ್ದಾರೆ. ಆದರೆ ಇವರ ಸಂಬಂಧ ಕೆಲವರ ಕಣ್ಣು ಕುಕ್ಕುತ್ತಿದೆ.

More from Filmibeat

English summary
"My family is open, so is my partner's." Lekha Washington shuts down interfaith relationship critics and opens up about her life with actor Imran Khan.
Read more about: love live in relationship
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X