ಮದುವೆಯಾಗಿ ತಪ್ಪು ಮಾಡಿದೆ, ಆರ್ಥಿಕವಾಗಿ ದಿವಾಳಿ ಆಗಿದ್ದೇನೆ: ರಾಖಿ ಸಾವಂತ್ ಅಳಲು
ತನ್ನ ಗ್ಲಾಮರಸ್ ಮೈಮಾಟದಿಂದಲೂ ಜೊತೆಗೆ ವಿವಾದಗಳಿಂದಲೂ ಸುದ್ದಿಯಲ್ಲಿರುವ ರಾಖಿ ಸಾವಂತ್. ಇದೀಗ ಮಾಧ್ಯಮಗಳ ಮುಂದೆ ತಮ್ಮ ಜೀವನದ ದುರಂತವನ್ನು ಬಿಚ್ಚಿಟ್ಟಿದ್ದಾರೆ.
ಹಿಂದಿ ಬಿಗ್‌ಬಾಸ್ ನ ಮೊದಲ ಶೋ ನಲ್ಲಿ ಸ್ಪರ್ಧಿಯಾಗಿದ್ದ ರಾಖಿ ಸಾವಂತ್, ಈಗ ಪ್ರಸಾರವಾಗುತ್ತಿರುವ ಬಿಗ್‌ಬಾಸ್ 14 ನೇ ಸೀಸನ್‌ಗೆ 'ಚಾಲೆಂಜರ್' ಆಗಿ ತೆರಳಲಿದ್ದಾರೆ. ಬರೋಬ್ಬರಿ 14 ವರ್ಷದ ನಂತರ ಬಿಗ್‌ಬಾಸ್ ಮನೆಗೆ ಹೋಗಲಿದ್ದಾರೆ ರಾಖಿ ಸಾವಂತ್.
ಬಿಗ್‌ಬಾಸ್ ಗೆ ಹೋಗುವ ಕುರಿತು ಪ್ರತಿಕ್ರಿಯೆ ಕೇಳಲು ಹೋದ ಮಾಧ್ಯಮದವರಿಗೆ ತನ್ನ ಜೀವನ ವೃಂತಾತವನ್ನೇ ಬಿಚ್ಚಿಟ್ಟಿರುವ ರಾಖಿ ಸಾವಂತ್. ನಾನು ಮದುವೆಯಾಗಿ ತಪ್ಪು ಮಾಡಿದೆ, ಈಗ ಅನುಭವಿಸುತ್ತಿದ್ದೇನೆ ಎಂದು ಗಂಡನ ವಿರುದ್ಧ ದೂರುಗಳನ್ನು ಹೇಳಿದ್ದಾರೆ.
ನನ್ನ ಗಂಡನ ಬಗ್ಗೆ ನಾನು ಎಲ್ಲಿಯೂ ಹೇಳಿಕೊಂಡಿಲ್ಲ. ಆತನಿಗೆ ಸಮಾಜದ ಎದುರು ಬರಲು ಇಷ್ಟವಿಲ್ಲ. ಆತ ಬ್ರಿಟನ್‌ನಲ್ಲಿದ್ದಾನೆ. ಭಾರತಕ್ಕೆ ಬಂದು ಒಂದು ವರ್ಷವಾಯಿತು. ನಾನೂ ಆತನನ್ನು ನೋಡಿ ಒಂದು ವರ್ಷವಾಯಿತು ಎಂದಿದ್ದಾರೆ ರಾಖಿ ಸಾವಂತ್.

ಮದುವೆಯಾಗಿ ದೊಡ್ಡ ತಪ್ಪು ಮಾಡಿದೆ: ರಾಖಿ
ಶ್ರೀಮಂತ ವ್ಯಕ್ತಿಯನ್ನು ಮದುವೆಯಾದರೆ ನನ್ನ ಕಷ್ಟಗಳು ಪರಿಹಾರ ಆಗುತ್ತವೆ ಎಂಬ ಕಾರಣಕ್ಕೆ ಶ್ರೀಮಂತ ವ್ಯಕ್ತಿಯನ್ನು ಮದುವೆಯಾದೆ, ಆದರೆ ನಾನು ಅಂದುಕೊಂಡಂತೆ ಆಗಲಿಲ್ಲ. ಮದುವೆಯಾಗಿ ನಾನು ತಪ್ಪು ಮಾಡಿದೆ. ಆ ವ್ಯಕ್ತಿಯನ್ನು ನಾನು ಮದುವೆ ಆಗಬಾರದಿತ್ತು ಎಂದಿದ್ದಾರೆ ರಾಖಿ.

ಆರ್ಥಿಕವಾಗಿ ದಿವಾಳಿ ಆಗಿದ್ದೇನೆ: ರಾಖಿ
ನನ್ನ ಕುಟುಂಬದ ಜವಾಬ್ದಾರಿಯನ್ನು ನಾನೇ ಹೊರುತ್ತಿದ್ದೇನೆ. ನನ್ನ ಬಳಿ ಇರುವ ಹಣವೆಲ್ಲಾ ಖಾಲಿ ಆಗಿದೆ. ನಾನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇನೆ. ಮದುವೆ ನನ್ನ ಜೀವನದ ಅತಿದೊಡ್ಡ ತಪ್ಪು. ಜೊತೆಗೆ ನಾನು ಶಿಕ್ಷಣ ಪಡೆಯದಿರುವುದು ಸಹ ನನ್ನ ದೊಡ್ಡ ತಪ್ಪು ಎಂದಿದ್ದಾರೆ ನಟಿ ರಾಖಿ ಸಾವಂತ್.

ಶಿಕ್ಷಣ ಪಡೆಯದೇ ತಪ್ಪು ಮಾಡಿದೆ: ರಾಖಿ
ನಾನು ಖಿನ್ನತೆ ಅನುಭವಿಸಿದ್ದೆ. ಆದರೆ ನಾನು ಯಾವ ತಪ್ಪು ನಿರ್ಣಯವನ್ನೂ ತೆಗೆದುಕೊಳ್ಳಲಿಲ್ಲ. ನನ್ನ ಪ್ರತಿಭೆ ಮೇಲೆ ನನಗೆ ನಂಬಿಕೆ ಇತ್ತು, ಈಗಲೂ ಇದೆ. ನನ್ನ ಪ್ರತಿಭೆಯನ್ನೇ ನಂಬಿಕೊಂಡು ನಾನು ಜೀವನ ಸಾಗಿಸುತ್ತಿದ್ದೇನೆ. ನಾನು ಸೂಕ್ತ ಶಿಕ್ಷಣ ಪಡೆಯದೇ ಇರುವುದೇ ನನ್ನ ವೃತ್ತಿ ಜೀವನದಲ್ಲಿ ನನ್ನ ಹಿನ್ನಡೆಗೆ ಕಾರಣ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ನಟಿ ರಾಖಿ.
Recommended Video

2018 ರಲ್ಲಿ ಮದುವೆ ಘೋಷಿಸಿದ್ದ ರಾಖಿ
2018 ರಲ್ಲಿ ರಾಖಿ ಸಾವಂತ್, ತಾನು ದೀಪಕ್ ಕಲಾಲ್ ಅನ್ನು ಮದುವೆ ಆಗುತ್ತಿರುವುದಾಗಿ ಘೋಷಿಸಿದ್ದರು. ಆದರೆ ನಂತರ, ದೀಪಕ್ ಗೆ ಬೇರೆ ಯುವತಿಯ ಜೊತೆ ಸಂಬಂಧ ಇದೆ ಎಂದು ಕಾರಣ ನೀಡಿ, ಮದುವೆ ರದ್ದು ಮಾಡಿದರು. ನಂತರ 2019 ರಲ್ಲಿ ರಿತೇಶ್ ಎಂಬ ಎನ್‌ಆರ್‌ಐ ಅನ್ನು ಮದುವೆ ಆಗಿರುವುದಾಗಿ ಘೋಷಿಸಿದರು ರಾಖಿ. ಆತನ ಚಿತ್ರವನ್ನು ಈ ವರೆಗೆ ಎಲ್ಲಿಯೂ ಹಂಚಿಕೊಂಡಿಲ್ಲ ರಾಖಿ.


Click it and Unblock the Notifications











