ನನ್ನ ಮಗ ಸಲ್ಮಾನ್ ಜಿರಳೆಯನ್ನೇ ಕೊಂದಿಲ್ಲ, ಇನ್ನೂ ಕೃಷ್ಣ ಮೃಗ ಕೊಲ್ತಾನಾ- ಸಲೀಂ ಖಾನ್...!

ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಪರಿಸ್ಥಿತಿ ಸಲ್ಮಾನ್ ಖಾನ್‌ಗೆ ಬಂದಿದೆ. ಸುತ್ತ ಮುತ್ತ ಅಷ್ಟೊಂದು ಸೆಕ್ಯೂರಿಟಿ ಇದ್ದರೂ ಕೂಡ ಬಾಬಾ ಸಿದ್ದಿಕಿ ಹತ್ಯೆಯ ನಂತರ ಸಲ್ಮಾನ್ ಖಾನ್ ಮುಖದಲ್ಲಿ ಭಯ ಕಾಣುತ್ತಿದೆ. ಯಾವತ್ತು ಎಲ್ಲಿಂದ ಯಾರು ಬಂದು ತನ್ನ ಮೇಲೆ ಹಲ್ಲೆ ಮಾಡುತ್ತಾರೋ ಏನೋ ಎನ್ನುವ ಯೋಚನೆಯಲ್ಲಿಯೇ ಸಲ್ಮಾನ್ ಖಾನ್ ಓಡಾಡುವಂತಾಗಿದೆ.

ಇನ್ನೂ.. ಈ ಪರಿಸ್ಥಿತಿಯಿಂದ ಹೊರ ಬರಬೇಕಾದರೆ ಕ್ಷಮೆ ಕೇಳಬೇಕೆಂದು ಬಿಷ್ಣೋಯ್ ಆಂಡ್ ಗ್ಯಾಂಗ್ ಆಗ್ರಹಿಸಿದೆ. ದೇವಸ್ಥಾನಕ್ಕೆ ಬಂದು ಕೃಷ್ಣ ಮೃಗ ಕೊಂದಿದ್ದಕ್ಕೆ ಪ್ರಾಯಶ್ಚಿತವನ್ನು ಪಡಬೇಕೆಂದು ಹೇಳಿದೆ. ಆದರೆ, ಸಲ್ಮಾನ್ ಖಾನ್ ಸುತಾರಾಂ ಇದಕ್ಕೆ ಒಪ್ಪುತ್ತಿಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ನಾವ್ಯಾಕೇ ಕ್ಷಮೆ ಕೇಳಬೇಕೆಂದು ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಪ್ರಶ್ನೆ ಮಾಡಿದ್ದಾರೆ.

My son Salman Khan never killed a cockroach How could he kill a blackbuck says Salim Khan

ಹೌದು, ಎಬಿಪಿ ನ್ಯೂಸ್ ಜೊತೆ ಮಾತನಾಡಿರುವ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಬರುತ್ತಿರುವ ಈ ಬೆದರಿಕೆಗಳು ಕೇವಲ ಸುಲಿಗೆಯ ತಂತ್ರವಷ್ಟೇ ಎಂದು ಹೇಳಿದ್ದಾರೆ. ಕಳೆದ ವರ್ಷ ನಿರಂತರವಾಗಿ ಕೊಲೆ ಬೆದರಿಕೆಗಳು ಬಂದಿದ್ದವು. ಆದರೆ ಈಗ ಬಾಬಾ ಸಿದ್ದಿಕಿ ಹತ್ಯೆಯ ನಂತರ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ ಎಂದು ಹೇಳಿದ್ದಾರೆ.

ಇನ್ನೂ ಬಿಷ್ಣೋಯ್ ಆಂಡ್ ಗ್ಯಾಂಗ್ ಗೆ ನಾವು ಕ್ಷಮೆ ಕೇಳುವ ಮಾತೇ ಇಲ್ಲ ಎಂದಿರುವ ಸಲೀಂ ಖಾನ್, ಕ್ಷಮೆ ಕೇಳಿದರೆ ತಪ್ಪನ್ನು ಒಪ್ಪಿಕೊಂಡಂತೆ ಆಗುತ್ತೆ. ಮಾಡಿರದ ತಪ್ಪನ್ನು ನಾವ್ಯಾಕೇ ಒಪ್ಪಿಕೊಳ್ಳಬೇಕು ಎಂದಿದ್ದಾರೆ. ಮುಂದುವರೆದು ನೀವು ಇಲ್ಲಿಯವರೆಗೆ ಎಷ್ಟು ಜನರಿಗೆ ಕ್ಷಮೆಯನ್ನು ಕೇಳಿದ್ದೀರಾ ಎಂದು ಮರು ಪ್ರಶ್ನೆಯನ್ನು ಮಾಡಿರುವ ಸಲೀಂ ಖಾನ್, ನೀವು ಎಷ್ಟು ಪ್ರಾಣಿಗಳನ್ನು ಇಲ್ಲಿಯವರೆಗೆ ಉಳಿಸಿದ್ದೀರಾ ಎಂದು ಕೇಳಿದ್ದಾರೆ. ನನ್ನ ಮಗ ಕೃಷ್ಣ ಮೃಗವನ್ನು ಕೊಂದಿದ್ದು ನೀವೇನಾದರೂ ನೋಡಿದ್ದೀರಾ ಎಂದು ಗುಡುಗಿದ್ದಾರೆ.

ಇನ್ನೂ ಸಲ್ಮಾನ್ ಖಾನ್ ನನ್ನ ಹತ್ತಿರ ಸುಳ್ಳು ಹೇಳುವುದಿಲ್ಲ, ಅವನು ಪ್ರಾಣಿಗಳನ್ನು ಪ್ರೀತಿ ಮಾಡುತ್ತಾನೆ ಹೊರತು ಕೊಲ್ಲಲಾರ ಎಂದು ಹೇಳಿರುವ ಸಲೀಂ ಖಾನ್, ನಮ್ಮ ಮನೆಯಲ್ಲಿ ನಾಯಿ ಇತ್ತು ಆ ನಾಯಿ ತೀರಿಕೊಂಡಾಗ ಚಿಕ್ಕ ಮಗು ತರ ಅವನು ಕಣ್ಣೀರು ಹಾಕಿದ್ದ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ ನಾವು ಜಿರಳೆಯನ್ನೇ ಕೊಂದಿಲ್ಲ ಹೀಗಿರುವಾಗ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಕೂಡ ಸಲೀಂ ಖಾನ್ ಹೇಳಿದ್ದಾರೆ. ಸದ್ಯ ನಾವು ಪೊಲೀಸರು ನಮಗೆ ಏನು ಹೇಳುತ್ತಾರೋ ನಾವು ಅದನ್ನೇ ಮಾಡುತ್ತೇವೆ ಎಂದಿರುವ ಸಲೀಂ ಖಾನ್, ಹುಟ್ಟು-ಸಾವು-ಅವಮಾನ-ಜೀವನ ಎಲ್ಲವೂ ಆ ದೇವರ ಕೈಯಲ್ಲಿದೆ ಎಂದು ಹೇಳಿದ್ದಾರೆ.

ಉಳಿದಂತೆ ಕೃಷ್ಣಮೃಗಗಳನ್ನು ಬಿಷ್ಣೋಯ್ ಸಮುದಾಯವು ಪವಿತ್ರವೆಂದು ಪರಿಗಣಿಸುತ್ತದೆ. ಆದರೆ ಸಲ್ಮಾನ್ ಖಾನ್ ಮೇಲೆ ಕೃಷ್ಣ ಮೃಗ ಬೇಟೆಯಾಡಿದ ಆರೋಪ ಇತ್ತು. ಹತ್ತಾರು ಬಾರಿ ಸಲ್ಮಾನ್ ಈ ಪ್ರಕರಣದಲ್ಲಿ ಕೋರ್ಟು-ಕಛೇರಿ ಎಂದು ಅಲೆದಾಡಿದ್ದು ಇದೆ. ಆದರೆ 2016ರಲ್ಲಿ ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಖುಲಾಸೆಯಾಗಿತ್ತು. ಆ ದಿನ ಆ ಕ್ಷಣದಿಂದ ಸಲ್ಮಾನ್ ಖಾನ್ ಬೆನ್ನು ಹತ್ತಿರುವ ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿ ಇದ್ದುಕೊಂಡೆ ಸಲ್ಮಾನ್ ಖಾನ್ ಗೆ ಅನೇಕ ಬಾರಿ ಸ್ಕೆಚ್ ಹಾಕಿದ್ದಾನೆ.

ಸದ್ಯ ಸಲ್ಮಾನ್ ಖಾನ್ ಜೀವ ಭಯದಲ್ಲಿಯೇ ಸಿಖಂದರ್ ಚಿತ್ರದ ಚಿತ್ರೀಕರಣವನ್ನು ಪುನಃ ಆರಂಭ ಮಾಡಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಸಲ್ಮಾನ್ ಖಾನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈದ್ ಹಬ್ಬದ ಪ್ರಯುಕ್ತ ಈ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ.

More from Filmibeat

Read more about: salman khan threat bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X