For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಕುಮಾರ್ ರಾಮ್ ಸೇತು ಚಿತ್ರದಲ್ಲಿ ಇಬ್ಬರು ದಕ್ಷಿಣ ಕಲಾವಿದರು?

  |

  ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯಿಸುತ್ತಿರುವ ರಾಮ್ ಸೇತು ಸಿನಿಮಾ ಹೆಚ್ಚು ನಿರೀಕ್ಷೆ ಮೂಡಿಸಿರುವ ಹಿಂದಿ ಸಿನಿಮಾಗಳಲ್ಲಿ ಒಂದು. ಈ ಚಿತ್ರದಲ್ಲಿ ಅಕ್ಷಯ್ ಪುರಾತತ್ವ ಶಾಸ್ತ್ರಜ್ಞನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ನುಸ್ರುತ್ ಭರುಚ್ಚ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಇದೀಗ, ಅಕ್ಷಯ್ ಕುಮಾರ್ ಚಿತ್ರಕ್ಕೆ ಇಬ್ಬರು ದಕ್ಷಿಣ ಕಲಾವಿದರ ಪ್ರವೇಶವಾಗುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ. ಈ ಕುರಿತು ಪಿಂಕ್ ವಿಲ್ಲಾ ವೆಬ್ ಸೈಟ್ ವರದಿ ಮಾಡಿದ್ದು, ಹಿರಿಯ ನಟ ನಾಸರ್ ಹಾಗೂ ಸತ್ಯದೇವ್ ರಾಮ್ ಸೇತು ಚಿತ್ರಕ್ಕೆ ಎಂಟ್ರಿ ಕೊಡಲಿದ್ದಾರೆ.

  ಅಕ್ಷಯ್ ಕುಮಾರ್ ಬಳಿಕ 'ರಾಮ್ ಸೇತು' ಚಿತ್ರದ 45 ಸಿಬ್ಬಂದಿಗೆ ಕೊರೊನಾಅಕ್ಷಯ್ ಕುಮಾರ್ ಬಳಿಕ 'ರಾಮ್ ಸೇತು' ಚಿತ್ರದ 45 ಸಿಬ್ಬಂದಿಗೆ ಕೊರೊನಾ

  ಚಿತ್ರದ ಸದಸ್ಯರೊಬ್ಬರು ತಿಳಿಸುವಂತೆ ''ಅಕ್ಷಯ್ ವೃತ್ತಿ ಜೀವನದಲ್ಲಿ ರಾಮ್ ಸೇತು ಬಹಳ ವಿಶೇಷವಾದ ಸಿನಿಮಾ ಆಗಲಿದೆ. ಪ್ರತಿಯೊಂದು ಪಾತ್ರಗಳು ಪ್ರಧಾನವಾಗಿದ್ದು, ಅದಕ್ಕಾಗಿ ಸಮರ್ಥ ಕಲಾವಿದರು ಆಯ್ಕೆಯಲ್ಲಿ ಚಿತ್ರತಂಡ ತೊಡಗಿದೆ. ದಕ್ಷಿಣದ ಎರಡು ಹೆಸರು ಚರ್ಚೆಯಲ್ಲಿದೆ'' ಎಂದು ತಿಳಿಸಿದ್ದಾರೆ.

  ನಾಸರ್ ಈ ಹಿಂದೆ ಅಕ್ಷಯ್ ಕುಮಾರ್ ಜೊತೆ 'ರೌಡಿ ರಾಥೋರ್' ಚಿತ್ರದಲ್ಲಿ ತೆರೆಹಂಚಿಕೊಂಡಿದ್ದರು. ತೆಲುಗು ಯುವ ನಟ ಸತ್ಯದೇವ್ ಮೊದಲ ಸಲ ಅಕ್ಷಯ್ ಚಿತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

  ಅಯೋಧ್ಯೆಯಲ್ಲಿ ಈಗಾಗಲೇ ಮುಹೂರ್ತ ಮಾಡಿಕೊಂಡಿರುವ ಚಿತ್ರತಂಡ ಭಾರತ ಹಾಗು ಶ್ರೀಲಂಕಾದ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ಸಿನಿಮಾ ಶೂಟಿಂಗ್ ಮುಗಿಯುತ್ತಿದ್ದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭಿಸಲಿದೆ. 2022ರ ದೀಪಾವಳಿಗೆ ಸಿನಿಮಾ ರಿಲೀಸ್ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ.

  ಮಾತಿನಿಂದ ತಿವಿದ ಚೇತನ್ ಗೆ ಉಪೇಂದ್ರ ಏನ್ ಹೇಳ್ತಾರೆ?? | Filmibeat Kannada

  ಇನ್ನುಳಿದಂತೆ ಅಭಿಷೇಕ್ ಶರ್ಮಾ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಅರುಣಾ ಭಾಟಿಯಾ, ವಿಕ್ರಮ್ ಮಲ್ಹೋತ್ರಾ ಜೊತೆ ಸೇರಿ ಲೈಕಾ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ.

  English summary
  South Actor Nassar and satyadev will enter with akshay kumar's ram setu film said source.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X