Baahubali vs RRR: 'ಬಾಹುಬಲಿ' ಗ್ರೇಟಾ? 'RRR' ಗ್ರೇಟಾ? 'ನಾಟು ನಾಟು' ಆಸ್ಕರ್ ಗೆದ್ದ ಬೆನ್ನಲ್ಲೇ ಕಾವೇರಿದ ಚರ್ಚೆ

By ಫಿಲ್ಮಿಬೀಟ್ ಡೆಸ್ಕ್

ರಾಜಮೌಳಿ ನಿರ್ದೇಶನದ 'RRR' ಚಿತ್ರದ 'ನಾಟು ನಾಟು' ಗೀತೆಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದೆ. ಅಂತರಾಷ್ಟ್ರೀಯ ಸಿನಿಮಾ ವೇದಿಕೆಯಲ್ಲಿ ತೆಲುಗು ಸಿನಿಮಾವೊಂದು ಅದ್ಭುತ ಸಾಧನೆ ಮಾಡಿದೆ. ಮೌಳಿ ಮತ್ತವರ ತಂಡದ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ. ಇಡೀ ಪ್ರಪಂಚ 'ನಾಟು ನಾಟು' ಎಂದು ಕುಣಿದಿದೆ. ಇದರ ಬೆನ್ನಲ್ಲೇ ಪ್ರಭಾಸ್ ಅಭಿಮಾನಿಗಳು ಹೊಸ ಚರ್ಚೆ ಹುಟ್ಟಾಕ್ಕಿದ್ದಾರೆ.

ಭಾರತೀಯರು ನಿರ್ಮಿಸಿದ ಚಿತ್ರವೊಂದಕ್ಕೆ ಆಸ್ಕರ್ ಪ್ರಶಸ್ತಿ ಸಿಕ್ಕಿರುವುದು ಇದೇ ಮೊದಲು. ಇದೇ ಮೊದಲ ಬಾರಿಗೆ ತೆಲುಗು ಚಿತ್ರವೊಂದು ಈ ಸಾಧನೆ ಮಾಡಿದೆ. ಇನ್ನು ಪ್ರಭಾಸ್ ಅಭಿಮಾನಿಗಳು 'RRR' ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಬಂದಿರುವುದಕ್ಕೆ ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಬಾಹುಬಲಿ ಚಿತ್ರಕ್ಕೂ ಆಸ್ಕರ್ ಗೆಲ್ಲುವ ಅವಕಾಶ ಇತ್ತು. ಮೊದಲೇ ಪ್ರಯತ್ನಿಸಿದ್ದರೆ ಯಾವುದಾದರೂ ವಿಭಾಗದಲ್ಲಿ ಐದಾರು ವರ್ಷಗಳ ಹಿಂದೆಯೇ ಭಾರತಕ್ಕೆ ಆಸ್ಕರ್ ಲಭಿಸುತ್ತಿತ್ತು ಎಂದು ವಾದ ಶುರು ಮಾಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ.

Naatu Naatu Wins Oscar 2023: Prabhas Fans Saying Baahubali deserves what RRR is achieving

'RRR' ಸಿನಿಮಾ ಕಟ್ಟಿಕೊಟ್ಟ ಇದೇ ರಾಜಮೌಳಿಯ ಅದ್ಭುತ ಸಿನಿಮಾ 'ಬಾಹುಬಲಿ'. 2 ಭಾಗಗಳಾಗಿ ಸಿನಿಮಾ ತೆರೆಗೆ ಬಂದಿತ್ತು. ಸಾವಿರಾರು ಕೋಟಿ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿತ್ತು. ಡಬಲ್ ರೋಲ್‌ನಲ್ಲಿ ಪ್ರಭಾಸ್ ಅಬ್ಬರಿಸಿದ್ದರು. ಎಲ್ಲಾ ವಿಭಾಗಗಳಲ್ಲೂ 'RRR'ಗಿಂತ 'ಬಾಹುಬಲಿ' ಅದ್ಭುತ ಸಿನಿಮಾ. ಕಥೆ, ಸ್ಕ್ರೀನ್‌ಪ್ಲೇ, ಮೇಕಿಂಗ್‌, ಗ್ರಾಫಿಕ್ಸ್, ಆಕ್ಷನ್ ಹೀಗೆ ಎಲ್ಲಾ ವಿಭಾಗದಲ್ಲೂ ತಾರಕ್, ಚರಣ್ ಚಿತ್ರಕ್ಕಿಂತ ಪ್ರಭಾಸ್ ಸಿನಿಮಾ ಒಂದು ಕೈ ಮೇಲಿತ್ತು. 'ಬಾಹುಬಲಿ' ಚಿತ್ರಕ್ಕೆ ಯಾವುದೇ ವಿಭಾಗದಲ್ಲಿ ಆಸ್ಕರ್ ಸಿಗದೇ ಇರುವುದು ಅಥವಾ ತಂಡ ಆಸ್ಕರ್‌ಗಾಗಿ ಪ್ರಯತ್ನಿಸದೇ ಇದ್ದಿದ್ದು ತಪ್ಪು ಎನ್ನುತ್ತಿದ್ದಾರೆ.

'ಬಾಹುಬಲಿ' ರೀತಿಯ ಆಕ್ಷನ್ ಸಿನಿಮಾಗಳು ಹಾಲಿವುಡ್ ಮಂದಿ ಸಾಕಷ್ಟು ನೋಡಿದ್ದಾರೆ. ಆದರೆ 'RRR' ಚಿತ್ರದಲ್ಲಿರುವ ಕಥೆ, ಫ್ರೆಂಡ್ಶಿಪ್, ಸ್ವಾತಂತ್ರ್ಯಕ್ಕಾಗಿ ಭಾರತೀಯರು ಬ್ರಿಟೀಷರ ವಿರುದ್ಧ ಹೋರಾಡುವ ಸಂಗತಿ ಹಾಲಿವುಡ್ ಮಂದಿಗೆ ಇಷ್ಟವಾಗಿರಬಹುದು ಎನ್ನುವುದು ಕೆಲವರ ವಾದ. 'RRR' ರೀತಿಯಲ್ಲೇ 'ಬಾಹುಬಲಿ' ಸಿನಿಮಾ ಕೂಡ ನೆಟ್‌ಫ್ಲಿಕ್ಸ್‌ನಲ್ಲಿ ಇದೆ. ಒಂದು ವೇಳೆ ಹಾಲಿವುಡ್ ಮಂದಿ ನೋಡಿ ಮೆಚ್ಚಿದ್ದರೆ ಆಗಲೇ ಸಿನಿಮಾ ಸದ್ದು ಮಾಡಬೇಕಿತ್ತು. ಕೊನೆ ಪಕ್ಷ ಈಗ ನೋಡಿದ್ದರೂ ಅದು ಸುದ್ದಿಯಾಗಬೇಕಿತ್ತು. ಆ ರೀತಿ ಆಗಲಿಲ್ಲ ಅಂದರೆ 'ಬಾಹುಬಲಿ' ಅಷ್ಟು ಇಂಪ್ಯಾಕ್ಟ್ ಮಾಡಿಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸ್ತಿದ್ದಾರೆ.

Naatu Naatu Wins Oscar 2023: Prabhas Fans Saying Baahubali deserves what RRR is achieving

ಎರಡು ಸಿನಿಮಾಗಳಲ್ಲಿ 'ಬಾಹುಬಲಿ' ಗ್ರೇಟ್. 'RRR' ಚಿತ್ರದಲ್ಲಿ ಹೇಳಿಕೊಳ್ಳುವಂಥದ್ದು ಬರೀ 'ನಾಟು ನಾಟು' ಸಾಂಗ್ ಮಾತ್ರ ಎಂದು ಕೆಲವರು ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ 'RRR' ಚಿತ್ರವನ್ನು ಮೌಳಿ ಮಾಸ್ಟರ್ ಪೀಸ್ 'ಬಾಹುಬಲಿ' ಜೊತೆ ಕಂಪೇರ್ ಮಾಡಬೇಡಿ ಎನ್ನುವುದು ಮತ್ತೆ ಕೆಲವರ ಅಭಿಪ್ರಾಯ. ಒಟ್ನಲ್ಲಿ ತೆಲುಗು ಚಿತ್ರವೊಂದಕ್ಕೆ ಆಸ್ಕರ್ ಅವಾರ್ಡ್ ಸಿಕ್ಕಿದ್ದು ಸಂತೋಷ ತಂದಿದೆ ಎಂದು ತೆಲುಗು ಪ್ರೇಕ್ಷಕರು ಸಂತಸ ವ್ಯಕ್ತಪಡಿಸ್ತಿದ್ದಾರೆ.

More from Filmibeat

English summary
Naatu Naatu Wins Oscar 2023: Prabhas Fans Saying Baahubali deserves what RRR is achieving. If RRR went to oscars, why didn't Baahubali ? Some questioning in Twitter. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X