For Quick Alerts
  ALLOW NOTIFICATIONS  
  For Daily Alerts

  ಹಿಂದಿ ಸಿನಿಮಾರಂಗಕ್ಕೆ ನಾಗಚೈತನ್ಯ ಎಂಟ್ರಿ; ಆಮೀರ್ ಖಾನ್ ಜೊತೆ ನಟನೆ

  |

  ತೆಲುಗು ಸಿನಿಮಾರಂಗದ ಖ್ಯಾತ ನಟ ನಾಗ ಚೈತನ್ಯ ಹಿಂದಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಾಗ ಚೈತನ್ಯ ಹಿಂದಿ ಸಿನಿಮಾದ ಬಗ್ಗೆ ಅನೇಕ ತಿಂಗಳಿಂದ ಚರ್ಚೆ ನಡೆಯುತ್ತಿತ್ತು. ಇದೀಗ ನಾಗ ಚೈತನ್ಯ ಅಧಿಕೃತವಾಗಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ.

  ಅಂದಹಾಗೆ ನಾಗಚೈತನ್ಯ ನಟಿಸುತ್ತಿರುವುದು ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ ಸಿನಿಮಾದಲ್ಲಿ. ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತಿಗಳಿಸಿರುವ ನಟ ಆಮೀರ್ ಖಾನ್ ಸದ್ಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಹುನಿರೀಕ್ಷೆಯ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಾಗ ಚೈತನ್ಯ ಕಾಣಿಸಿಕೊಳ್ಳುತ್ತಿದ್ದಾರೆ.

  ಆಮೀರ್ ಖಾನ್ ಜೊತೆ ನಾಗ ಚೈತನ್ಯ ನಟಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿತ್ತು. ಆದರೆ ಈ ಬಗ್ಗೆ ನಾಗ ಚೈತನ್ಯ ಅಥವಾ ಆಮೀರ್ ಖಾನ್ ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಇದೀಗ ನಾಗ ಚೈತನ್ಯ ಚಿತ್ರೀಕರಣದಲ್ಲಿ ಭಾಗಿಯಾಗುವ ಮೂಲಕ ಅಧಿಕೃತವಾಗಿ ಬಹಿರಂಗ ಪಡಿಸಿದ್ದಾರೆ.

  ಲಾಲ್ ಸಿಂಗ್ ಚಡ್ಡ ಸಿನಿಮಾದ ಚಿತ್ರೀಕರಣ ಸದ್ಯ ಲಡಾಖ್ ನಲ್ಲಿ ನಡೆಯುತ್ತಿದೆ. ಕೊರೊನಾ ಲಾಕ್ ಡೌನ್ ಮುಗಿಸಿ ಆಮೀರ್ ಖಾನ್ ಮತ್ತು ಲಾಲ್ ಸಿಂಗ್ ಚಡ್ಡ ತಂಡ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಿದೆ. ಲಡಾಖ್‌ನಲ್ಲಿ ನಡೆಯುತ್ತಿರುವ ಚಿತ್ರೀಕರಣಕ್ಕೆ ನಾಗ ಚೈತನ್ಯ ಎಂಟ್ರಿ ಕೊಟ್ಟಿದ್ದಾರೆ. ಆಮೀರ್ ಖಾನ್ ಮತ್ತು ಮಾಜಿ ಪತ್ನಿ ಕಿರಣ್ ರಾವ್ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  ಫೋಟೋ ಶೇರ್ ಮಾಡುವ ಜೊತೆಗೆ ನಾಗ ಚೈತನ್ಯ 'ಗ್ರೇಟ್ ಫುಲ್' ಎಂದು ಬರೆದುಕೊಂಡಿದ್ದಾರೆ. ನಾಗ ಚೈತನ್ಯ ಮಿಲಿಟರಿ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಿಲಿಟರಿ ಉಡುಪಿನಲ್ಲಿರುವ ಫೋಟೋವನ್ನೇ ನಾಗ ಚೈತನ್ಯ ಶೇರ್ ಮಾಡಿದ್ದಾರೆ. ಇನ್ನು ನಾಗ ಚೈತನ್ಯಗೂ ಮೊದಲು ತಮಿಳು ನಟ ವಿಜಯ್ ಸೇತುಪತಿಯನ್ನು ಸಿನಿಮಾತಂಡ ಸಂಪರ್ಕ ಮಾಡಿತ್ತು ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ವಿಜಯ್ ಸೇತುಪತಿ ''ನೋ'' ಎಂದ ಬಳಿಕ ನಾಗ ಚೈತನ್ಯ ಅವರಿಗೆ ಆಫರ್ ಮಾಡಲಿದೆ. ಆಮೀರ್ ಜೊತೆ ನಟಿಸಲು ನಾಗ ಚೈತನ್ಯ ಗ್ರೀನ್ ಸಿಗ್ನಲ್ ನೀಡಿ ಚಿತ್ರೀಕರಣದಲ್ಲೂ ಭಾಗಿಯಾಗಿದ್ದಾರೆ.

  ಅಂದಹಾಗೆ ಲಾಲ್ ಸಿಂಗ್ ಚಡ್ಡ ಸಿನಿಮಾ ಹಾಲಿವುಡ್‌ನ 'ಫಾರೆಸ್ಟ್ ಗಂಪ್' ಸಿನಿಮಾದ ರಿಮೇಕ್ ಆಗಿದೆ. 2018ರಲ್ಲಿ ಆಮೀರ್ ಖಾನ್ ಈ ಸಿನಿಮಾದ ರಿಮೇಕ್ ಹಕ್ಕು ಖರೀದಿ ಮಾಡಿದ್ದರು. 2019ರಲ್ಲಿ ಮಾರ್ಚ್ ನಲ್ಲಿ ಈ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿತ್ತು.

  ಎಲ್ಲದಕ್ಕೂ ಇವರಿಬ್ಬರೇ ಕಾರಣ ಎಂದ ರಕ್ಷಿತ್ ಶೆಟ್ಟಿ!! | Rakshith Shetty | Pushkar Mallikarjun | Filmibeat

  ಆದರೆ ಕೊರೊನಾ ಲಾಕ್ ಡೌನ್ ನಿಂದ ಸಿನಿಮಾದ ಚಿತ್ರೀಕರಣ ತಡವಾಗುತ್ತಲೇ ಬಂದಿದೆ. ಚಿತ್ರದಲ್ಲಿ ಆಮೀರ್ ಖಾನ್‌ಗೆ ನಾಯಕಿಯಾಗಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಕರೀನಾ ತನ್ನ ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ಕಳೆದ ವರ್ಷ ಲಾಕ್ ಡೌನ್ ಮುಗಿದ ಬಳಿಕ ಕರೀನಾ ತನ್ನ ಭಾಗದ ಚಿತ್ರೀಕರಣ ಮುಗಿಸಿ ಭಾವುಕ ವಿದಾಯ ಹೇಳಿದ್ದರು.

  English summary
  Telugu Actor Naga Chaitanya joins Aamir khan starrer Lal Singh Chaddha shooting in Ladakh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X