ಬನ್ಸಾಲಿ ಅವರನ್ನು ಭೇಟಿ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್
ಬಾಲಿವುಡ್ ಚಿತ್ರರಂಗ ಮೇಕಿಂಗ್ ಮಾಂತ್ರಿಕ ಅಂದರೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ. ಬನ್ಸಾಲಿ ಮಾಡುವ ಪ್ರತಿ ಸಿನಿಮಾಗಳು ಕೂಡ ಒಬ್ಬ ನಿರ್ದೇಶಕನಿಗೆ ಸ್ಫೂರ್ತಿ ನೀಡುತ್ತದೆ. ಒಂದು ಸಣ್ಣ ಸೀನ್ ತೆಗೆಯಲು ಅವರು ಹಾಕುವ ಶ್ರಮ ದೊಡ್ಡದಿರುತ್ತದೆ. ಅದೇ ಕಾರಣಕ್ಕೆ ಅವರು ಅದೆಷ್ಟೋ ನಿರ್ದೇಶಕರ ಫೇವರೇಟ್ ಆಗಿದ್ದಾರೆ. ಅಂದಹಾಗೆ, ಈಗ ಕನ್ನಡದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕೂಡ ಬನ್ಸಾಲಿ ಪ್ರತಿಭೆಯನ್ನು ಹೊಗಳಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಬನ್ಸಾಲಿ ಅವರ ಬಗ್ಗೆ ಬರೆದುಕೊಂಡಿದ್ದಾರೆ. ''ಇವರು ಮ್ಯೂಜಿಷಿಯನ್, ಇವರು ಮ್ಯಾಸಿಷಿಯನ್, ಹೈಲಿ ಕಮಿಟೇಡ್ ಡೈರೆಕ್ಟರ್. ಅವರನ್ನು ಭೇಟಿ ಮಾಡಿದ್ದು ತುಂಬ ಖುಷಿ ಆಯ್ತು. ಅವರ ಅದ್ಬುತ ಸಿನಿಮಾಗಳನ್ನು ನಾನು ಪೂಜಿಸುತ್ತೇನೆ.'' ಎಂದು ಬನ್ಸಾಲಿ ಅವರ ಪ್ರತಿಭೆಯನ್ನು ಹೊಗಳಿದ್ದಾರೆ.

ಅಂದಹಾಗೆ, ನಿನ್ನೆ ಮುಂಬೈನಲ್ಲಿರುವ ಸಂಜಯ್ ಲೀಲಾ ಬಸ್ಸಾಲಿ ಕಛೇರಿಯಲ್ಲಿಯೇ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ಮೀಟ್ ಮಾಡಿದ್ದಾರೆ. ಇನ್ನು ಸಂಜಯ್ ಲೀಲಾ ಬನ್ಸಾಲಿ 'ಪದ್ಮಾವತ್' ಸಿನಿಮಾದ ಸೂಪರ್ ಸಕ್ಸಸ್ ನಂತರ ಹೊಸ ಸಿನಿಮಾದ ತಯಾರಿಯಲ್ಲಿ ಇದ್ದಾರೆ.


Click it and Unblock the Notifications











