ನಟಿ ನಗ್ಮಾ ಹಂಚಿಕೊಂಡ ವಿಡಿಯೋದಲ್ಲಿರುವ ಮಹಿಳೆ ವಾಜಪೇಯಿ ಸೊಸೆಯಲ್ಲ
ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೊಸೆ ಎನ್ನಲಾದ ಮಹಿಳೆ ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಈ ವಿಡಿಯೋವನ್ನು ಕಾಂಗ್ರೆಸ್ ನಾಯಕಿ ಹಾಗೂ ಸಿನಿಮಾ ನಟಿ ನಗ್ಮಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ಟೀಕಿಸಿದ್ದಾರೆ.
ಈ ವಿಡಿಯೋದಲ್ಲಿ ''ಆರ್‌ಎಸ್‌ಎಸ್ ಮತ್ತು ಬಿಜೆಪಿ ದೇಶವನ್ನು ವಿಭಜಿಸುವ ಅಪಾಯಕಾರಿ ಕಾರ್ಯಸೂಚಿಯನ್ನು ಹೊಂದಿವೆ. ಯುವಕರಿಗೆ ಉದ್ಯೋಗವನ್ನು ಒದಗಿಸಲು, ರೈತರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಅಥವಾ ಮಹಿಳೆಯರಿಗೆ ಸುರಕ್ಷತೆಯನ್ನು ಒದಗಿಸಲು ಸಾಧ್ಯವಾಗುವುದಿಲ್ಲ'' ಎಂದು ಮಹಿಳೆಯ ಹೇಳಿರುವುದಾಗಿ ನಗ್ಮಾ ಟ್ವೀಟ್ ಮಾಡಿದ್ದಾರೆ.

ಅಂದ್ಹಾಗೆ, ಇದಕ್ಕೂ ಮುಂಚೆ ಈ ವಿಡಿಯೋ ಪೌರತ್ವ ವಿರೋಧಿ ಕಾನೂನು ಪ್ರತಿಭಟನೆಯ ಸಮಯದಲ್ಲಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿರುವ ಮಹಿಳೆ ವಾಜಪೇಯಿ ಸೊಸೆ ಕರುಣಾ ಶುಲ್ಕಾ ಅಲ್ಲ.
ಈ ವಿಡಿಯೋದಲ್ಲಿರುವ ಮಹಿಳೆ ಸಾಮಾಜಿಕ ಕಾರ್ಯಕರ್ತೆ ಅತಿಯಾ ಅಲ್ವಿ. ಪೌರತ್ವ ಕಾನೂನಿನ ವಿರುದ್ಧ ಆಕೆ ಮಾತನಾಡಿದ್ದರು. ಜನವರಿ 3, 2020 ರಂದು ಈ ವಿಡಿಯೋ ಮೊದಲ ಬಾರಿಗೆ ಪೋಸ್ಟ್ ಆಗಿದೆ.
ಆದ್ರೆ, ನಟಿ ನಗ್ಮಾ ಅವರು ಆ ಮಹಿಳೆಯನ್ನು ವಾಜಪೇಯಿ ಸೊಸೆ ಎಂದು ಬಿಂಬಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಹಿಂದೆ ಬಿಜೆಪಿ ಪಕ್ಷದಲ್ಲಿ ನಗ್ಮಾ 2014ರಲ್ಲಿ ಕಾಂಗ್ರೆಸ್ ಸೇರಿದ್ದರು.


Click it and Unblock the Notifications











