For Quick Alerts
  ALLOW NOTIFICATIONS  
  For Daily Alerts

  ನಟಿ ನಗ್ಮಾ ಹಂಚಿಕೊಂಡ ವಿಡಿಯೋದಲ್ಲಿರುವ ಮಹಿಳೆ ವಾಜಪೇಯಿ ಸೊಸೆಯಲ್ಲ

  |

  ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೊಸೆ ಎನ್ನಲಾದ ಮಹಿಳೆ ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

  ಈ ವಿಡಿಯೋವನ್ನು ಕಾಂಗ್ರೆಸ್ ನಾಯಕಿ ಹಾಗೂ ಸಿನಿಮಾ ನಟಿ ನಗ್ಮಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ಟೀಕಿಸಿದ್ದಾರೆ.

   ಬಿಗ್‌ಬಾಸ್ ಮನೆಯಲ್ಲಿ ಫುಲ್ ರೊಮ್ಯಾನ್ಸ್‌: ಅತಿಯಾಯ್ತು ಎಂದ ನೆಟ್ಟಿಗರು ಬಿಗ್‌ಬಾಸ್ ಮನೆಯಲ್ಲಿ ಫುಲ್ ರೊಮ್ಯಾನ್ಸ್‌: ಅತಿಯಾಯ್ತು ಎಂದ ನೆಟ್ಟಿಗರು

  ಈ ವಿಡಿಯೋದಲ್ಲಿ ''ಆರ್‌ಎಸ್‌ಎಸ್ ಮತ್ತು ಬಿಜೆಪಿ ದೇಶವನ್ನು ವಿಭಜಿಸುವ ಅಪಾಯಕಾರಿ ಕಾರ್ಯಸೂಚಿಯನ್ನು ಹೊಂದಿವೆ. ಯುವಕರಿಗೆ ಉದ್ಯೋಗವನ್ನು ಒದಗಿಸಲು, ರೈತರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಅಥವಾ ಮಹಿಳೆಯರಿಗೆ ಸುರಕ್ಷತೆಯನ್ನು ಒದಗಿಸಲು ಸಾಧ್ಯವಾಗುವುದಿಲ್ಲ'' ಎಂದು ಮಹಿಳೆಯ ಹೇಳಿರುವುದಾಗಿ ನಗ್ಮಾ ಟ್ವೀಟ್ ಮಾಡಿದ್ದಾರೆ.

  ಅಂದ್ಹಾಗೆ, ಇದಕ್ಕೂ ಮುಂಚೆ ಈ ವಿಡಿಯೋ ಪೌರತ್ವ ವಿರೋಧಿ ಕಾನೂನು ಪ್ರತಿಭಟನೆಯ ಸಮಯದಲ್ಲಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿರುವ ಮಹಿಳೆ ವಾಜಪೇಯಿ ಸೊಸೆ ಕರುಣಾ ಶುಲ್ಕಾ ಅಲ್ಲ.

  ಈ ವಿಡಿಯೋದಲ್ಲಿರುವ ಮಹಿಳೆ ಸಾಮಾಜಿಕ ಕಾರ್ಯಕರ್ತೆ ಅತಿಯಾ ಅಲ್ವಿ. ಪೌರತ್ವ ಕಾನೂನಿನ ವಿರುದ್ಧ ಆಕೆ ಮಾತನಾಡಿದ್ದರು. ಜನವರಿ 3, 2020 ರಂದು ಈ ವಿಡಿಯೋ ಮೊದಲ ಬಾರಿಗೆ ಪೋಸ್ಟ್ ಆಗಿದೆ.

  ಕೆಟ್ಟದಾಗಿ ಅಂತ್ಯವಾಯ್ತು ಸಿಲ್ಕ್ ಸ್ಮಿತಾ ಬದುಕು | Silk Smitha | Filmibeat Kannada

  ಆದ್ರೆ, ನಟಿ ನಗ್ಮಾ ಅವರು ಆ ಮಹಿಳೆಯನ್ನು ವಾಜಪೇಯಿ ಸೊಸೆ ಎಂದು ಬಿಂಬಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಹಿಂದೆ ಬಿಜೆಪಿ ಪಕ್ಷದಲ್ಲಿ ನಗ್ಮಾ 2014ರಲ್ಲಿ ಕಾಂಗ್ರೆಸ್ ಸೇರಿದ್ದರು.

  English summary
  Fake News: Congress Leader Nagma shares video, claims Vajpayee’s niece is criticising BJP. but, its not true. she not Vajpayee’s niece.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X