For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಲಸಿಕೆ ಪಡೆದ ನಂತರ ನಟಿ ನಗ್ಮಾಗೆ ಪಾಸಿಟಿವ್

  |

  ನಟಿ-ರಾಜಕಾರಣಿ ನಗ್ಮಾ ಅವರಿಗೆ ಕೊರೊನಾ ವೈರಸ್ ತಗುಲಿದೆ ಎಂದು ವಿಚಾರ ಹೊರಬಿದ್ದಿದೆ. ಇತ್ತೀಚಿಗಷ್ಟೆ ನಗ್ಮಾ ಕೋವಿಡ್ ಲಸಿಕೆ ಪಡೆದುಕೊಂಡಿದ್ದರು. ಮೊದಲ ಲಸಿಕೆ ಪಡೆದ ನಂತರ ಸೋಂಕು ತಗುಲಿರುವುದು ಖಚಿತವಾಗಿದೆ.

  ಈ ಕುರಿತು ಟ್ವೀಟ್ ಮಾಡಿರುವ ನಗ್ಮಾ ''ಕೊರೊನಾ ಮೊದಲ ಲಸಿಕೆ ಪಡೆದ ಬಳಿಕವೂ ನನಗೆ ಕೋವಿಡ್ ಸೋಂಕು ತಗುಲಿದೆ. ಲಸಿಕೆ ಪಡೆದ ನಂತರವೂ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಸದ್ಯ ನಾನು ಮನೆಯಲ್ಲಿ ಕ್ವಾರಂಟೈನ್ ಆಗಿದ್ದೇನೆ. ನೀವು ಸುರಕ್ಷತೆಯಿಂದಿರಿ'' ಎಂದು ತಿಳಿಸಿದ್ದಾರೆ.

  ಬಾಯ್‌ಫ್ರೆಂಡ್‌ ಬಳಿಕ ಕತ್ರಿನಾ ಕೈಫ್‌ಗೂ ಕೊರೊನಾ ಪಾಸಿಟಿವ್ಬಾಯ್‌ಫ್ರೆಂಡ್‌ ಬಳಿಕ ಕತ್ರಿನಾ ಕೈಫ್‌ಗೂ ಕೊರೊನಾ ಪಾಸಿಟಿವ್

  ಆಲಿಯಾ ಭಟ್ ಅವರ ತಾಯಿ, ಹಿರಿಯ ನಟಿ ಸೋನಿ ರಜ್ದಾನ್ ಅವರು ನಗ್ಮಾ ಅವರ ಆರೋಗ್ಯದ ಬಗ್ಗೆ ಕಾಳಜಿ ತೋರಿದ್ದಾರೆ. ನಗ್ಮಾ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿರುವ ಸೋನಿ, 'ನಗ್ಮಾ ದಯವಿಟ್ಟು ಕಾಳಜಿ ವಹಿಸಿ. ಸಾಧ್ಯವಾದರೆ ಇನ್ನೊಮ್ಮೆ ಪರೀಕ್ಷೆಗೆ ಒಳಗಾಗಿ. ಏಕಂದ್ರೆ, ನಿಮಗೆ ಯಾವುದೇ ರೋಗಲಕ್ಷಣಗಳಿಲ್ಲದಿದ್ದರೆ ಅದು ತಪ್ಪು ಫಲಿತಾಂಶವಾಗಿರಬಹುದು. ಅಥವಾ ಸೌಮ್ಯ ರೋಗಲಕ್ಷಣ ಆಗಿರಬಹುದು'' ಎಂದಿದ್ದಾರೆ.

  ಲಸಿಕೆ ಪಡೆದ ನಂತರ ಹಲವರಿಗೆ ಕೋವಿಡ್ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ. ಬಾಲಿವುಡ್ ನಟ ಪರೇಶ ರಾವಲ್ ಅವರಿಗೂ ಲಸಿಕೆ ಪಡೆದ ಬಳಿಕವೇ ಸೋಂಕು ಖಚಿತವಾಗಿತ್ತು.

  ಬಾಲಿವುಡ್ ಬೆನ್ನು ಬಿದ್ದ ಕೊರೊನಾ: ಭೂಮಿ ಪಡ್ನೆಕರ್, ವಿಕ್ಕಿ ಕೌಶಲ್‌ಗೆ ಕೊರೊನಾಬಾಲಿವುಡ್ ಬೆನ್ನು ಬಿದ್ದ ಕೊರೊನಾ: ಭೂಮಿ ಪಡ್ನೆಕರ್, ವಿಕ್ಕಿ ಕೌಶಲ್‌ಗೆ ಕೊರೊನಾ

  ಕೊರೊನಾ ವೈರಸ್ ಎರಡನೇ ಅಲೆ ಉಂಟಾಗಿದೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಅದರಲ್ಲಿ ಬಾಲಿವುಡ್‌ ಇಂಡಸ್ಟ್ರಿಯ ಹೆಚ್ಚು ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಅಮೀರ್ ಖಾನ್, ಅಕ್ಷಯ್ ಕುಮಾರ್, ಆಲಿಯಾ ಭಟ್, ವಿಕ್ಕಿ ಕೌಶಲ್, ಕತ್ರಿನಾ ಕೈಫ್, ಭೂಮಿ ಪಡ್ನೆಕರ್, ಗೋವಿಂದ ಸೇರಿದಂತೆ ಹಲವರಿಗೆ ಸೋಂಕು ತಗುಲಿದೆ.

  ಪತ್ನಿಯ ಶಕ್ತಿ ನೋಡಿ ಕೊಹ್ಲಿ ಶಾಕ್:ಬಾಹುಬಲಿಯಾದ ಅನುಷ್ಕಾ | Filmibeat Kannada

  ಪ್ರಸ್ತುತ, ಮಹಾರಾಷ್ಟ್ರ ಸರ್ಕಾರ ವೀಕೆಂಡ್ ಲಾಕ್‌ಡೌನ್ ಜಾರಿಗೊಳಿಸಿದೆ. ರಾತ್ರಿ ಕರ್ಫ್ಯೂ ಆದೇಶಿಸಿದೆ. ಸಿನಿಮಾ ಮಂದಿರಗಳನ್ನು ಮುಂದಿನ ಆದೇಶದವರೆಗೂ ಬಂದ್ ಮಾಡಲಾಗಿದೆ. ಚಿತ್ರೀಕರಣಕ್ಕೆ ವಿಶೇಷವಾದ ಮಾರ್ಗಸೂಚಿ ಪ್ರಕಟಿಸಿದೆ.

  English summary
  Actress-politician Nagma tests positive for COVID19 days after receiving vaccine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X