ಹಳೆ ಚಿತ್ರ ಹೇಳುತ್ತಿದೆ ಬೇರೆಯದ್ದೇ ಕತೆ: ಕಂಗನಾ ಜೊತೆಗಿರುವಾತ ಯಾರು?

ಈಗ ಬಾಲಿವುಡ್‌ ಪೂರಾ ಕಂಗನಾ ರಣೌತ್‌ ಬಗ್ಗೆಯೇ ಮಾತು. ಕೊರೊನಾ ಭಯಕ್ಕಿಂತಲೂ ಹೆಚ್ಚು ಕಂಗನಾ ಭಯ ಬಾಲಿವುಡ್ಡಿಗರನ್ನು ಕಾಡುತ್ತಿದೆ.

ಕಂಗನಾ ರ ಅಲುಗಿನಂಥಹಾ ನಾಲಿಗೆಗೆ ಸಿಲುಕಿ ಬಾಲಿವುಡ್‌ ಸ್ಟಾರ್‌ಗಳೇ ತತ್ತರಿಸಿಹೋಗಿದ್ದಾರೆ. ಅಮೀರ್ ಖಾನ್, ಸಲ್ಮಾನ್, ತಾಪ್ಸಿ ಪನ್ನು, ನಾಸಿರುದ್ಧೀನ್ ಶಾ, ಸಂಜಯ್ ದತ್, ಮಹೇಶ್ ಭಟ್ ಯಾರನ್ನೂ ಬಿಟ್ಟಿಲ್ಲ ಕಂಗನಾ, ಎಲ್ಲರ 'ತೇಜಸ್ಸನ್ನೂ ವಧಿಸುತ್ತಿದ್ದಾರೆ'. ಅಮಿತಾಬ್ ಬಚ್ಚನ್ ಕುಟುಂಬವನ್ನೂ ಬಿಟ್ಟಿಲ್ಲ 'ಕ್ವೀನ್' ಕಂಗನಾ.

ಬಾಲಿವುಡ್‌ ನ ಎಲ್ಲಾ ಅನಿಷ್ಟಗಳ ವಿರುದ್ಧ ದನಿ ಎತ್ತುತ್ತಿರುವ ಕಂಗನಾ ಗೆ ಅವರ ಭೂತಕಾಲವೇ ಭೂತವಾಗಿ ಕಾಡುತ್ತಿದೆ. ಕಂಗನಾ, ಡ್ರಗ್ಸ್ ವಿರುದ್ಧ ಮಾತನಾಡಿದ ಬೆನ್ನಲ್ಲೇ 'ಕಂಗನಾ ಡ್ರಗ್ಸ್ ಸೇವಿಸುತ್ತಾರೆ' ಎಂದು ಆಕೆಯ ಮಾಜಿ ಪ್ರಿಯಕರ ಹೇಳಿದ್ದ ಹಳೆ ವಿಡಿಯೋ ವೈರಲ್ ಆಗಿದೆ. ಇದೇ ರೀತಿಯ ಕಂಗನಾರ ಹಳೆಯ ಚಿತ್ರವೊಂದು ಈಗ ಸದ್ದು ಮಾಡುತ್ತಿದೆ.

ಕಂಗನಾರ ಹಳೆ ಚಿತ್ರ ಟ್ವೀಟ್ ಮಾಡಿದ ನಗ್ಮಾ

ಕಂಗನಾರ ಹಳೆ ಚಿತ್ರ ಟ್ವೀಟ್ ಮಾಡಿದ ನಗ್ಮಾ

ನಟಿ, ರಾಜಕಾರಣಿ ನಗ್ಮಾ, ಕಂಗನಾರ ಹಳೆಯ ಚಿತ್ರವೊಂದನ್ನು ಟ್ವೀಟ್ ಮಾಡಿದ್ದಾರೆ. ಚಿತ್ರದಲ್ಲಿ ಕಂಗನಾ ಮದ್ಯದ ಗ್ಲಾಸೊಂದನ್ನು ಹಿಡಿದು ನಿಂತಿದ್ದಾರೆ. ಈ ಚಿತ್ರಕ್ಕೆ ಯಾವುದೇ ಅಡಿಬರಹ ನೀಡದ ನಗ್ಮಾ ಕೆಲವು ಇಮೋಜಿಗಳನ್ನಷ್ಟೆ ಬಳಸಿದ್ದಾರೆ.

ಅಬುಸಲೇಮ್ ಸಹೋದರನೊಂದಿಗೆ ಕಂಗನಾ?

ಅಬುಸಲೇಮ್ ಸಹೋದರನೊಂದಿಗೆ ಕಂಗನಾ?

ಚಿತ್ರದಲ್ಲಿ ಕಂಗನಾ ಜೊತೆಗೆ ಮತ್ತೊಬ್ಬ ವ್ಯಕ್ತಿ ಬಿಯರ್ ಬಾಟಲಿಯನ್ನು ಹಿಡಿದು ನಿಂತಿದ್ದಾರೆ. ಈ ವ್ಯಕ್ತಿ ಭೂಗತ ಪಾತಕಿ ಅಬುಸಲೇನ್ ತಮ್ಮ ಎನ್ನಲಾಗುತ್ತಿದೆ. 'ಅಬುಸಲೇಮ್ ಸಹೋದರನೊಂದಿಗೆ ಕಂಗನಾ ರಣೌತ್' ಎಂಬ ಕ್ಯಾಪ್ಷನ್‌ ಜೊತೆಗೆ ಈ ಚಿತ್ರ ವೈರಲ್ ಆಗಿದೆ.

ಅಬು ಸಲೇಮ್ ಸಹೋದರ ಅಲ್ಲ

ಅಬು ಸಲೇಮ್ ಸಹೋದರ ಅಲ್ಲ

ಆದರೆ ಚಿತ್ರದಲ್ಲಿ ಕಂಗನಾ ಜೊತೆಗಿರುವ ವ್ಯಕ್ತಿ ಅಬುಸಲೇಮ್ ಸಹೋದರ ಅಲ್ಲ, ಬದಲಿಗೆ ಆತನೊಬ್ಬ ಪತ್ರಕರ್ತ. ಮೂರು ವರ್ಷಗಳ ಹಿಂದೆ ಕಂಗನಾ ರ ಸಿನಿಮಾ 'ಸಿಮ್ರನ್' ಪ್ರಚಾರದ ಸಮಯದಲ್ಲಿ ಪಾರ್ಟಿಯೊಂದರಲ್ಲಿ ತೆಗೆದಿರುವ ಚಿತ್ರವದು.

Recommended Video

ನಮಗೆ ತುಳಸಿಗಿಡ ಬರೀ ತುಳಸಿಗಿಡ ಮಾತ್ರ | Filmibeat Kannada
ಸುಳ್ಳು ಸುದ್ದಿ ಹರಬೇಡಿರೆಂದು ತರಾಟೆ

ಸುಳ್ಳು ಸುದ್ದಿ ಹರಬೇಡಿರೆಂದು ತರಾಟೆ

ನಗ್ಮಾ, ಕಂಗನಾ ರ ಈ ಚಿತ್ರ ಹಾಕಿರುವುದನ್ನು ಹಲವರು ವಿರೋಧಿಸಿದ್ದಾರೆ. ಕುಡಿತ ವೈಯಕ್ತಿಕ ಆಯ್ಕೆ ಅದರಲ್ಲಿ ತಪ್ಪೇನು ಎಂದು ಕೆಲವರು ಪ್ರಶ್ನಿಸಿದ್ದರೆ. ಸುಳ್ಳು ಸುದ್ದಿ ಹರಡುತ್ತಿದ್ದೀರಿ ಎಂದು ಇನ್ನು ಕೆಲವರು ಪ್ರಶ್ನಿಸಿದ್ದಾರೆ.

More from Filmibeat

English summary
Actress, politician Nagma tweeted old picture of Kangana Ranaut having a party. Man in that picture is in question now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X