For Quick Alerts
  ALLOW NOTIFICATIONS  
  For Daily Alerts

  ಹಳೆ ಚಿತ್ರ ಹೇಳುತ್ತಿದೆ ಬೇರೆಯದ್ದೇ ಕತೆ: ಕಂಗನಾ ಜೊತೆಗಿರುವಾತ ಯಾರು?

  |

  ಈಗ ಬಾಲಿವುಡ್‌ ಪೂರಾ ಕಂಗನಾ ರಣೌತ್‌ ಬಗ್ಗೆಯೇ ಮಾತು. ಕೊರೊನಾ ಭಯಕ್ಕಿಂತಲೂ ಹೆಚ್ಚು ಕಂಗನಾ ಭಯ ಬಾಲಿವುಡ್ಡಿಗರನ್ನು ಕಾಡುತ್ತಿದೆ.

  ಕಂಗನಾ ರ ಅಲುಗಿನಂಥಹಾ ನಾಲಿಗೆಗೆ ಸಿಲುಕಿ ಬಾಲಿವುಡ್‌ ಸ್ಟಾರ್‌ಗಳೇ ತತ್ತರಿಸಿಹೋಗಿದ್ದಾರೆ. ಅಮೀರ್ ಖಾನ್, ಸಲ್ಮಾನ್, ತಾಪ್ಸಿ ಪನ್ನು, ನಾಸಿರುದ್ಧೀನ್ ಶಾ, ಸಂಜಯ್ ದತ್, ಮಹೇಶ್ ಭಟ್ ಯಾರನ್ನೂ ಬಿಟ್ಟಿಲ್ಲ ಕಂಗನಾ, ಎಲ್ಲರ 'ತೇಜಸ್ಸನ್ನೂ ವಧಿಸುತ್ತಿದ್ದಾರೆ'. ಅಮಿತಾಬ್ ಬಚ್ಚನ್ ಕುಟುಂಬವನ್ನೂ ಬಿಟ್ಟಿಲ್ಲ 'ಕ್ವೀನ್' ಕಂಗನಾ.

  ಡ್ರಗ್ಸ್ ಪ್ರಕರಣ: ಸಿಸಿಬಿ ನೋಟಿಸ್‌ಗೆ ದಿಗಂತ್-ಐಂದ್ರಿತಾ ಟ್ವೀಟ್ ಪ್ರತಿಕ್ರಿಯೆಡ್ರಗ್ಸ್ ಪ್ರಕರಣ: ಸಿಸಿಬಿ ನೋಟಿಸ್‌ಗೆ ದಿಗಂತ್-ಐಂದ್ರಿತಾ ಟ್ವೀಟ್ ಪ್ರತಿಕ್ರಿಯೆ

  ಬಾಲಿವುಡ್‌ ನ ಎಲ್ಲಾ ಅನಿಷ್ಟಗಳ ವಿರುದ್ಧ ದನಿ ಎತ್ತುತ್ತಿರುವ ಕಂಗನಾ ಗೆ ಅವರ ಭೂತಕಾಲವೇ ಭೂತವಾಗಿ ಕಾಡುತ್ತಿದೆ. ಕಂಗನಾ, ಡ್ರಗ್ಸ್ ವಿರುದ್ಧ ಮಾತನಾಡಿದ ಬೆನ್ನಲ್ಲೇ 'ಕಂಗನಾ ಡ್ರಗ್ಸ್ ಸೇವಿಸುತ್ತಾರೆ' ಎಂದು ಆಕೆಯ ಮಾಜಿ ಪ್ರಿಯಕರ ಹೇಳಿದ್ದ ಹಳೆ ವಿಡಿಯೋ ವೈರಲ್ ಆಗಿದೆ. ಇದೇ ರೀತಿಯ ಕಂಗನಾರ ಹಳೆಯ ಚಿತ್ರವೊಂದು ಈಗ ಸದ್ದು ಮಾಡುತ್ತಿದೆ.

  ಕಂಗನಾರ ಹಳೆ ಚಿತ್ರ ಟ್ವೀಟ್ ಮಾಡಿದ ನಗ್ಮಾ

  ಕಂಗನಾರ ಹಳೆ ಚಿತ್ರ ಟ್ವೀಟ್ ಮಾಡಿದ ನಗ್ಮಾ

  ನಟಿ, ರಾಜಕಾರಣಿ ನಗ್ಮಾ, ಕಂಗನಾರ ಹಳೆಯ ಚಿತ್ರವೊಂದನ್ನು ಟ್ವೀಟ್ ಮಾಡಿದ್ದಾರೆ. ಚಿತ್ರದಲ್ಲಿ ಕಂಗನಾ ಮದ್ಯದ ಗ್ಲಾಸೊಂದನ್ನು ಹಿಡಿದು ನಿಂತಿದ್ದಾರೆ. ಈ ಚಿತ್ರಕ್ಕೆ ಯಾವುದೇ ಅಡಿಬರಹ ನೀಡದ ನಗ್ಮಾ ಕೆಲವು ಇಮೋಜಿಗಳನ್ನಷ್ಟೆ ಬಳಸಿದ್ದಾರೆ.

  ಅಬುಸಲೇಮ್ ಸಹೋದರನೊಂದಿಗೆ ಕಂಗನಾ?

  ಅಬುಸಲೇಮ್ ಸಹೋದರನೊಂದಿಗೆ ಕಂಗನಾ?

  ಚಿತ್ರದಲ್ಲಿ ಕಂಗನಾ ಜೊತೆಗೆ ಮತ್ತೊಬ್ಬ ವ್ಯಕ್ತಿ ಬಿಯರ್ ಬಾಟಲಿಯನ್ನು ಹಿಡಿದು ನಿಂತಿದ್ದಾರೆ. ಈ ವ್ಯಕ್ತಿ ಭೂಗತ ಪಾತಕಿ ಅಬುಸಲೇನ್ ತಮ್ಮ ಎನ್ನಲಾಗುತ್ತಿದೆ. 'ಅಬುಸಲೇಮ್ ಸಹೋದರನೊಂದಿಗೆ ಕಂಗನಾ ರಣೌತ್' ಎಂಬ ಕ್ಯಾಪ್ಷನ್‌ ಜೊತೆಗೆ ಈ ಚಿತ್ರ ವೈರಲ್ ಆಗಿದೆ.

  ಅಭಿಷೇಕ್ ಬಚ್ಚನ್ ನೇಣು ಹಾಕಿಕೊಂಡರೆ: ಜಯಾ ಬಚ್ಚನ್‌ಗೆ ಕಂಗನಾ ಪ್ರಶ್ನೆಅಭಿಷೇಕ್ ಬಚ್ಚನ್ ನೇಣು ಹಾಕಿಕೊಂಡರೆ: ಜಯಾ ಬಚ್ಚನ್‌ಗೆ ಕಂಗನಾ ಪ್ರಶ್ನೆ

  ಅಬು ಸಲೇಮ್ ಸಹೋದರ ಅಲ್ಲ

  ಅಬು ಸಲೇಮ್ ಸಹೋದರ ಅಲ್ಲ

  ಆದರೆ ಚಿತ್ರದಲ್ಲಿ ಕಂಗನಾ ಜೊತೆಗಿರುವ ವ್ಯಕ್ತಿ ಅಬುಸಲೇಮ್ ಸಹೋದರ ಅಲ್ಲ, ಬದಲಿಗೆ ಆತನೊಬ್ಬ ಪತ್ರಕರ್ತ. ಮೂರು ವರ್ಷಗಳ ಹಿಂದೆ ಕಂಗನಾ ರ ಸಿನಿಮಾ 'ಸಿಮ್ರನ್' ಪ್ರಚಾರದ ಸಮಯದಲ್ಲಿ ಪಾರ್ಟಿಯೊಂದರಲ್ಲಿ ತೆಗೆದಿರುವ ಚಿತ್ರವದು.

  ನಮಗೆ ತುಳಸಿಗಿಡ ಬರೀ ತುಳಸಿಗಿಡ ಮಾತ್ರ | Filmibeat Kannada
  ಸುಳ್ಳು ಸುದ್ದಿ ಹರಬೇಡಿರೆಂದು ತರಾಟೆ

  ಸುಳ್ಳು ಸುದ್ದಿ ಹರಬೇಡಿರೆಂದು ತರಾಟೆ

  ನಗ್ಮಾ, ಕಂಗನಾ ರ ಈ ಚಿತ್ರ ಹಾಕಿರುವುದನ್ನು ಹಲವರು ವಿರೋಧಿಸಿದ್ದಾರೆ. ಕುಡಿತ ವೈಯಕ್ತಿಕ ಆಯ್ಕೆ ಅದರಲ್ಲಿ ತಪ್ಪೇನು ಎಂದು ಕೆಲವರು ಪ್ರಶ್ನಿಸಿದ್ದರೆ. ಸುಳ್ಳು ಸುದ್ದಿ ಹರಡುತ್ತಿದ್ದೀರಿ ಎಂದು ಇನ್ನು ಕೆಲವರು ಪ್ರಶ್ನಿಸಿದ್ದಾರೆ.

  ಡ್ರಗ್ಸ್ ಪ್ರಕರಣ: ಇಬ್ಬರು ಸ್ಟಾರ್ ನಟಿಯರಿಗೆ ಶೀಘ್ರ ಎನ್‌ಸಿಬಿ ನೊಟೀಸ್ಡ್ರಗ್ಸ್ ಪ್ರಕರಣ: ಇಬ್ಬರು ಸ್ಟಾರ್ ನಟಿಯರಿಗೆ ಶೀಘ್ರ ಎನ್‌ಸಿಬಿ ನೊಟೀಸ್

  English summary
  Actress, politician Nagma tweeted old picture of Kangana Ranaut having a party. Man in that picture is in question now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X