For Quick Alerts
  ALLOW NOTIFICATIONS  
  For Daily Alerts

  ನಟಿಗೆ ಹೊಡೆದು ಹಣ ದೋಚಿ ಪರಾರಿಯಾದ ದುರುಳರು

  By ಫಿಲ್ಮಿಬೀಟ್ ಡೆಸ್ಕ್
  |

  'ನಮಸ್ತೆ ಲಂಡನ್' ಸೇರಿ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಅಲಂಕೃತಾ ಸಹಾಯ್ ಮನೆಗೆ ನುಗ್ಗಿ ನಟಿಯನ್ನು ಹೊಡೆದು ಹಣ, ಒಡವೆ ದೋಚಿ ಮೂವರು ದರೋಡೆಕೋರರು ಪರಾರಿಯಾಗಿದ್ದಾರೆ.

  ಬಾಲಿವುಡ್ ನಟಿ ಅಲಂಕೃತಾ ಸಹಾಯ್ ಚಂಡೀಘಡದ ತಮ್ಮ ಹೊಸ ಮನೆಯಲ್ಲಿ ಒಬ್ಬರೇ ಇರುವ ಸಮಯದಲ್ಲಿ ಮನೆಗೆ ನುಗ್ಗಿದ ಮೂವರು ದರೋಡೆಕೋರರು ನಟಿಗೆ ಚಾಕು ತೋರಿಸಿ ಹೆದರಿಸಿದ್ದಾರೆ, ಹಲ್ಲೆ ಸಹ ಮಾಡಿದ್ದಾರೆ. ನಟಿಯು ಹೆಗೊ ತಪ್ಪಿಸಿಕೊಂಡು ತಮ್ಮ ರೂಮ್‌ ಸೇರಿಕೊಂಡಿದ್ದಾಳೆ, ರೂಮ್‌ನ ಒಳಗೂ ನುಗ್ಗಿದಾಗ ಬಾತ್‌ರೂಂ ಸೇರಿಕೊಂಡಿದ್ದಾಳೆ.

  ಆದರೆ ದರೋಡೆಕೋರರು ನಟಿಯನ್ನು ಹೆದರಿಸಿ, ಪ್ರಾಣ, ಮಾನ ಬೆದರಿಕೆ ಹಾಕಿ ಆಕೆಯ ಎಟಿಎಂ ಕಾರ್ಡ್‌, ಪಿನ್ ನಂಬರ್, ಮನೆಯಲ್ಲಿದ್ದ ಹಣ ಚಿನ್ನಗಳನ್ನು ದೋಚಿಕೊಂಡು ಹೋಗಿದ್ದಾರೆ.

  ಅಲಂಕೃತಾ ಸಹಾಯ್‌ ಕೆಲವು ದಿನಗಳ ಹಿಂದಷ್ಟೆ ಚಂಡೀಘಡದ ಸೆಕ್ಟರ್ 27 ನಲ್ಲಿ ಹೊಸ ಮನೆ ಖರೀದಿಸಿದ್ದರು. ಮಧ್ಯಾಹ್ನದ ವೇಳೆ ಕೆಲಸದ ಮಹಿಳೆ ಮನೆಗೆ ಬರಲೆಂದು ಮನೆಯ ಬಾಗಿಲನ್ನು ತೆರೆದಿಟ್ಟದ್ದರು. ಇದೇ ಅವಕಾಶವನ್ನು ಬಳಸಿಕೊಂಡು ದರೋಡೆಕೋರರು ಮನೆಗೆ ನುಗ್ಗಿದ್ದಾರೆ.

  ದರೋಡೆಕೋರರು ಮನೆಗೆ ನುಗ್ಗಿದ ಸಮಯದಲ್ಲಿ ಮನೆಯಲ್ಲಿ ಅಲಂಕೃತಾ ಒಬ್ಬರೇ ಇದ್ದರು. ಆ ಮನೆಯಲ್ಲಿ ಅಲಂಕೃತಾ ತನ್ನ ಪೋಷಕರೊಂದಿಗೆ ವಾಸವಿದ್ದಾರೆ. ಆದರೆ ಅವರ ಪೋಷಕರು ಕೆಲ ದಿನಗಳ ಹಿಂದಷ್ಟೆ ಪ್ರವಾಸ ಹೋಗಿದ್ದರು. ಹಾಗಾಗಿ ಅಲಂಕೃತಾ ಒಬ್ಬರೇ ಮನೆಯಲ್ಲಿದ್ದರು.

  ಪ್ರಕರಣದ ಬಗ್ಗೆ ನಟಿ ಅಲಂಕೃತಾ ಸೆಕ್ಟರ್ 26 ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಪೊಲೀಸರು ಮನೆಯ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಮೂವರು ದರೋಡೆಕೋರರಲ್ಲಿ ಒಬ್ಬನು ಕೆಲವು ದಿನಗಳ ಹಿಂದಷ್ಟೆ ನಟಿಯ ಮನೆಗೆ ಬಂದಿದ್ದ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

  ಕೆಲವು ದಿನಗಳ ಹಿಂದಷ್ಟೆ ಹೊಸ ಮನೆಗೆ ಕೆಲವು ಪೀಠೋಪಕರಣಗಳನ್ನು ಅಲಂಕೃತಾ ತರಿಸಿಕೊಂಡಿದ್ದರು. ಪೀಠೋಪಕರಣಗಳನ್ನು ಡೆಲಿವರಿ ಮಾಡಲು ಆತ ಮನೆಗೆ ಹೋಗಿದ್ದ. ಮನೆಯನ್ನು ಚೆನ್ನಾಗಿ ನೋಡಿಕೊಂಡು ಕೆಲವರು ದುರುಳರನ್ನು ಜೊತೆ ಮಾಡಿಕೊಂಡು ಮನೆ ದೋಚಲು ಬಂದಿದ್ದ. ಆತನನ್ನು ಪೊಲೀಸರು ಹುಡುಕುತ್ತಿದ್ದಾರೆ.

  English summary
  Namasthe England actress and former Miss India Earth Alankrita Sahai robber 6 lakh rs by robbers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X